ಬೆಂಗಳೂರು :ಏ.೦5: ನನಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಗೊತ್ತಿದೆ, ಸಿನಿಮಾ ರಂಗದಿಂದಲೇ ಬಂದಿರೋದು ಅಂತ ಕೂಡ ನನಗೆ ಗೊತ್ತು. ಅದು ಯಾರು ಕಳುಹಿಸಿದ್ದಾರೆ ಅಂತ ಕೂಡ ಗೊತ್ತಿದೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಬೆದರಿಕೆ ಪತ್ರ ಕಳುಹಿಸಿದವರಿಗೆ ನಾನು ತಕ್ಕ ಉತ್ತರ ಕೊಡುತ್ತೇನೆ ಎಂದ ಕಿಚ್ಚ ಸುದೀಪ್, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ. ಯಾರು ನನ್ನ ಪರವಾಗಿ ಸ್ಪರ್ಧೆ ಮಾಡಿದರು ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು. ಈ ಮೂಲಕ ಬಿಜೆಪಿ ಸುದೀಪ್ ಸೇರುತ್ತಾರೆ ಎಂಬ ಗೊಂದಲಕ್ಕೆ ಸುದೀಪ್ ತೆರೆ ಎಳೆದಿದ್ದಾರೆ.