ನವದೆಹಲಿ :ಮಾ.23: ಪದ್ಮಶ್ರೀ ಪ್ರಶಸ್ತಿ ಪ್ರಧಾನದ ವೇಳೆ ಗುಜರಾತ್‌ನ ಸಿದ್ದಿ ಬುಡುಕಟ್ಟು ನಾಯಕಿ ಹೀರಾಬಾಯಿ ಇಬ್ರಾಹಿಂ ಲೊಬಿ ರಾಷ್ಟ್ರಪತಿ ಬಳಿ ತೆರಳದೇ ಪ್ರಧಾನಿ ಮೋದಿ ಬಳಿ ತೆರಳಿದ್ದಾರೆ. ನಮ್ಮಂತವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ . ಇದೇ ವೇಳೆ ಭಾವುಕರಾದ ಹೀರಾಬಾಯಿ ಮಾತನಾಡುತ್ತಲೇ ಕಣ್ಣೀರಿಟ್ಟಿದ್ದಾರೆ .
ಗುಜರಾತ್‌ನ ಜುನಾಘಡ ಜಿಲ್ಲೆ ಜಂಬೂರು ಗ್ರಾಮದ ನಿವಾಸಿ ಹೀರಾಬಾಯಿ , ಸಿದ್ಧಿ ಬುಡಕಟ್ಟು ಜನಾಂಗಕ್ಕೆ ಶಿಕ್ಷಣ ಸೇರಿದಂತೆ ಇತರ ಸೌಲಭ್ಯ ಒದಗಿಸುವ ಮೂಲಕ , ಸಿದ್ಧಿ ಜನಾಂಗವನ್ನು ಅಭಿವೃದ್ಧಿ ಶ್ರಮಿಸಿದ್ದಾರೆ . ಇವರ ಅವಿರತ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ . ಪದ್ಮಶ್ರೀ ಪ್ರಶಸ್ತಿಗಾಗಿ ಹೀರಾಬಾಯಿ ಹೆಸರು ಘೋಷಿಸಲಾಗಿದೆ . ವಯಸ್ಸು , ಆರೋಗ್ಯದ ಕಾರಣ ಸಿಬ್ಬಂದಿ ಹೀರಾಬಾಯಿ ಕೈಹಿಡಿದು ರಾಷ್ಟ್ರಪತಿ ಬಳಿ ಕರೆತರುತ್ತಿದ್ದರು .
ಈ ವೇಳೆ ಹೀರಾಬಾಯಿ ನೇರವಾಗಿ ಪ್ರಧಾನಿ ಮೋದಿ ಬಳಿ ತೆರಳಿದ್ದಾರೆ . ಬಳಿಕ ಹಳ್ಳಿಯ ಮೂಲೆಯಲ್ಲಿದ್ದ ನಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ . ತಮ್ಮ ಮಾತಿನ ನಡುವೆ ಹೀರಾಬಾಯಿ ಭಾವುಕರಾಗಿದ್ದಾರೆ . ಹೀರಾಬಾಯಿ ಒಂದೊಂದು ಮಾತಿಗೂ ಗೃಹ ಸಚಿವ ಅಮಿತ್ ಶಾ , ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಕೇಂದ್ರ ಸರ್ಕಾರದ ಸಚಿವರು ಹಾಗೂ ನೆರೆದಿದ್ದ ಗಣ್ಯರು ಚಪ್ಪಾಳೆ ತಟ್ಟಿದರು . ಮಾತನಾಡುತ್ತಲೇ ಕಣ್ಣೀರಿಟ್ಟ ಹೀರಾಬಾಯಿ ಇಬ್ರಾಹಿಂ ಲೊಬಿ , ಬಳಿಕ ರಾಷ್ಟ್ರಪತಿ ಬಳಿ ತೆರಳಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು .

ಶಿಕ್ಷಣ ಸೇರಿದಂತೆ ಯಾವ ಸೌಲಭ್ಯವೂ ಇಲ್ಲದೆ ಅವಕಾಶ ವಂಚಿತ ಸಿದ್ದಿ ಜನಾಂಗದವರನ್ನು ಮುಖ್ಯವಾಹಿನಿಗೆ ತರಲು ಹೀರಾಬಾಯಿ ಇಬ್ರಾಹಿಂ ಲೋಧಿ ಅವಿರತ ಪರಿಶ್ರಮ ಪಟ್ಟಿದ್ದಾರೆ . ಸುಮಾರು 700 ಕ್ಕೂ ಹೆಚ್ಚು ಮಹಿಳೆಯರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ .
ಅವರ ಬದುಕು ಹಸನಾಗಿಸಲು ಶ್ರಮಿಸಿದ್ದಾರೆ .