ನಿನ್ನೆ ರಾಜ್ಯಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನವಸಂವತ್ಸರದಂದು ಜನಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳು ಕೂಡ ಬೇವು ಬೆಲ್ಲ ತಿಂದು ವರ್ಷದ ಮೊದಲ ಹಬ್ಬವನ್ನು ಸಡಗರದಿಂದ ಆಚರಿಸಿದ್ರು. ಈ ಸಂದರ್ಭದಲ್ಲಿ ಸ್ಯಾಂಡಲ್ವುಡ್ನ ಸೆಲೆಬ್ರಿಟಿ ಜೋಡಿ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಒಂದನ್ನ ನೀಡಿದ್ದಾರೆ.

ಯುಗಾದಿಯ ಸಂಭ್ರಮದಂದು ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಡಾರ್ಲಿಂಗ್ ಕೃಷ್ಣ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ʻಲವ್ ಮಾಕ್ಟೈಲ್ʼ ಪಾರ್ಟ್ 1 ಮತ್ತು ಪಾರ್ಟ್ 2ನಲ್ಲಿ ಆದಿ-ನಿಧಿಮಾ ಸ್ಟೋರಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಚೆಂದದ ಲವ್ ಸ್ಟೋರಿ ಜೊತೆ ಎಮೋಷನ್ ನೋಡಿ ಸಿನಿಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆ ಬಳಿಕ ಮತ್ತೆ ಇದರ ಮುಂದುವರೆದ ಭಾಗ ಬರುತ್ತೋ ಇಲ್ವೋ ಎಂಬ ಸ್ಪಷ್ಟತೆ ಇರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ.ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಗೆ ಲವ್ ಮಾಕ್ಟೈಲ್ ಪಾರ್ಟ್ 3 ಮಾಡುವ ಉದ್ದೇಶ ಇದ್ದು, ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಮಾಡುತ್ತೇವೆ ಎಂದಿದ್ದರು. ಇದೀಗ ಸೂಕ್ತ ಕಥೆ ಸಿಕ್ಕಿದ್ದು, ಆ ಕಾರಣದಿಂದ `ಲವ್ ಮಾಕ್ಟೇಲ್ 3′ ಚಿತ್ರದ ಬಗ್ಗೆ ಅನೌನ್ಸ್ ಮಾಡಿದ್ದಾರೆ.







