ಕನ್ನಡ ಚಿತ್ರರಂಗದ ಧ್ರುವತಾರೆ, ಅಭಿಮಾನಿಗಳ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ. ಸ್ಯಾಂಡಲ್ವುಡ್ ಪರಮಾತ್ಮನ ಬರ್ತ್ಡೇ ಪ್ರಯುಕ್ತ, ಅವರ ಕನಸಿನ ಕೂಸಾದ ʻಗಂಧದಗುಡಿʼ ಡಾಕ್ಯುಮೆಂಟರಿ ಸಿನಿಮಾನ್ನ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗ್ತಿದೆ. ಮಾರ್ಚ್ 17ರಂದು ಗಂಧದಗುಡಿ ಸಾಕ್ಷ್ಯಚಿತ್ರವನ್ನ ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಮಾಡಲಾಗ್ತಿದೆ. ʻಗಂಧದಗುಡಿʼ ವನ್ಯಜೀವಿ ಕಥೆಯಾಧಾರಿತ ಸಾಕ್ಷ್ಯಚಿತ್ರ. ನಾಗರಹೊಳೆಯಿಂದ ಶುರುವಾಗುವ ಪುನೀತ್ ಹಾಗೂ ನಿರ್ದೇಶಕ ಅಮೋಘವರ್ಷರವರ ಪಯಣ, ಡಾ.ರಾಜ್ರವರ ಹುಟ್ಟೂರಾದ ಗಾಜನೂರು, ಬಿಆರ್ಟಿ ಟೈಗರ್ ರಿಸರ್ವ್, ಸಕ್ಕರೆ ಬೈಲು, ಕರಾವಲಿಯ ನೇತ್ರಾಣಿ, ಜೋಗಜಲಪಾತ, ಆಗುಂಬೆ, ಉತ್ತರ ಕರ್ನಾಟಕದ ವಿಜಯನಗರ, ತುಂಗಭದ್ರಾ ನದಿಯ ಕಡೆಗಳಲ್ಲಿ ಸಾಗಿ ಕಾಳಿ ನದಿಯಲ್ಲಿ ಪೂರ್ಣಗೊಳ್ಳುತ್ತೆ. ಪುನೀತ್ ರಾಜ್ಕುಮಾರ್ರ ಪುಣ್ಯತಿಥಿಗೂ ಒಂದು ದಿನದ ಮೊದಲು ಈ ಸಾಕ್ಷ್ಯಚಿತ್ರವನ್ನ ಥಿಯೇಟರ್ನಲ್ಲಿ ಬಿಡುಗಡೆ ಮಾಡಲಾಯ್ತು. ಇದೀಗ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಈ ಡಾಕ್ಯುಮೆಂಟರಿ ಒಟಿಟಿಗೆ ಲಗ್ಗೆಯಿಡ್ತಿದೆ.
#appu #appufan #kannadaactor #puneethrajkumar #sandalwood #powerstar #gandhadagudi #pratidhvani #pratidhvanidigital #pratidhvaninews