ಬಿಜೆಪಿ ರಥಯಾತ್ರೆಯಲ್ಲಿ ಪಾಲ್ಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಚಾಮರಾಜನಗರದಲ್ಲಿ ವೀರಶೈಲ ಲಿಂಗಾಯತ ಸಮುದಾಯ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ನನಗೆ ಬಿಜೆಪಿಯಿಂದ ಯಾವುದೇ ಸಮಸ್ಯೆ ಆಗಿಲ್ಲ. ವೀರಶೈವ ಬಂಧುಗಳಲ್ಲಿ ಕೈಮುಗಿದು ಪ್ರಾರ್ಥನೆ ಮಾಡ್ತೇನೆ. ಸಿಎಂ ಸ್ಥಾನಕ್ಕೆ ನಾನೇ ರಾಜೀನಾಮೆ ಕೊಟ್ಟೆ. ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ನಿಲ್ಲಲ್ಲ. ಪಕ್ಷ ನನಗೆ ಅನ್ಯಾಯ ಮಾಡಿಲ್ಲ. ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಕೇಂದ್ರ ಕೋರ್ ಕಮಿಟಿ ಸದಸ್ಯನನ್ನಾಗಿ ಮಾಡಿದೆ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ. ವೀರಶೈವ ಬಂಧುಗಳು ತಪ್ಪು ತಿಳಿಯಬಾರದು. ಪಕ್ಷ ನನಗೆ ಅನ್ಯಾಯ ಮಾಡಿದೆ ಎಂಬ ಭಾವನೆ ಬೇಡ ಎಂದಿದ್ದಾರೆ. ಕೊಳ್ಳೇಗಾಲದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಯಡಿಯೂರಪ್ಪ ಮಾತನಾಡಿದ್ದು, ನಮ್ಮ ಗೆಲುವನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯ, ಬಿಜೆಪಿ ಪೂರ್ಣ ಬಹುಮತ ಬರುವುದು ಅಷ್ಟೇ ಸತ್ಯ. ನಾವು ಜನರ ನಂಬಿಕೆಗೆ ಯಾವತ್ತೂ ಮೋಸ ಮಾಡಿಲ್ಲ. ಮುಂದೆಯೂ ಜನರ ಜೊತೆ ನಾವು ಇರುತ್ತೇವೆ. ಬಿಜೆಪಿ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಬಿಎಸ್ ಯಡಿಯೂರಪ್ಪ ಇಟ್ಟಿರುವ ಸೀಕ್ರೆಟ್ ಡೈರಿ ಬೆಚ್ಚಿ ಬೀಳಿಸುವಂತಿದೆ.
ಯಡಿಯೂರಪ್ಪ ಅವರಿಗೆ ಡೈರಿ ಬರೆಯುವ ಅಭ್ಯಾಸ..!
ಹಿರಿಯ ಅಧಿಕಾರಿಗಳು ಹಾಗು ರಾಜಕಾರಣಿಗಳಿಗೆ ಡೈರಿ ಬರೆಯುವ ಅಭ್ಯಾಸ ಇರುತ್ತದೆ. ದಿನಂಪ್ರತಿ ಏನಾಯ್ತು..? ಯಾರೆಲ್ಲಾ ಭೇಟಿ ಮಾಡಿದ್ರು..? ಅನ್ನೋ ಬಗ್ಗೆ ಬರೆದು ಇಡುವ ಅಭ್ಯಾಸ ಇರುತ್ತದೆ. ಅದೇ ರೀತಿ ಬಿ.ಎಸ್ ಯಡಿಯೂರಪ್ಪ ಕೂಡ ಡೈರಿ ಬರೆದಿದ್ದು, ಬಿಜೆಪಿಯಲ್ಲಿ ಯಾರು ಯಡಿಯೂರಪ್ಪ ಅವರಿಗೆ ದ್ರೋಹ ಮಾಡಿದ್ರು..? ಜೈಲಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಜೆಪಿ ನಾಯಕರು ಯಾರು ಅನ್ನೋ ಬಗ್ಗೆಯೂ ಡೈರಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಜೈಲಿಗೆ ಹೋಗಿದ್ದು ಯಾಕೆ..? ಜೈಲಿನಲ್ಲಿ ಏನೆಲ್ಲಾ ಮಾಡಲಾಯ್ತು..? ಕುಮಾರಸ್ವಾಮಿ ಸರ್ಕಾರದ ಅವಧಿ ಮುಗಿದ ಬಳಿಕ ಬಿಜೆಪಿ ಹಸ್ತಾಂತರ ಮಾಡುವಾಗ ದೆಹಲಿ ಬಿಜೆಪಿ ನಾಯಕರು ಅಡ್ಡಗಾಲು ಹಾಕಿದ್ದು ಹೇಗೆ..? ಯಾವೆಲ್ಲಾ ನಾಯಕರು ಕುತಂತ್ರ ಮಾಡಿದರು..? ಎನ್ನುವ ಅಂಶಗಳನ್ನು ಡೈರಿಯಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಮೊದಲ ಬಾರಿ ಗೆದ್ದು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ಕೇಸ್ ದಾಖಲಿಸಿ, ಜೈಲಿಗೆ ಕಳುಹಿಸುವ ಕೆಲಸ ಮಾಡಲಾಯ್ತು. ಎರಡನೇ ಬಾರಿ ಕೂಡ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರನ್ನು ಒತ್ತಾಯ ಪೂರ್ವಕವಾಗಿ ಕೆಳಕ್ಕೆ ಇಳಿಸಲಾಯ್ತು.

ಬಿಜೆಪಿ ಪಕ್ಷದಲ್ಲಿ ಹೆಮ್ಮರ ಆಗಿ ಬೆಳೆಯಬಾರದು..!
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಹಿಂದೆ ಹೇಳಿಕೆ ಒಂದನ್ನು ನೀಡಿದ್ದರು. ದೆಹಲಿಯಿಂದಲೇ ಒಪ್ಪಂದ ಪತ್ರ ಬಂದಿತ್ತು. ಆ ಅಗ್ರಿಮೆಂಟ್ಗೆ ಯಡಿಯೂರಪ್ಪ ಸಹಿ ಹಾಕಲಿಲ್ಲ. ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದೆ. ಆದರೆ ಯಡಿಯೂಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದಂತೆ ಮಾಡಿದ್ದು ಕೇಂದ್ರದ ಬಿಜೆಪಿ ನಾಯಕರು. ಪೇಶ್ವೆ ಸಂತತಿಗೆ ಸೇರಿದ ವ್ಯಕ್ತಿಗಳು ಎಂದಿದ್ದರು. ಈ ಮಾತನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಇತ್ತೀಚಿಗೆ ಹೇಳಿಕೊಂಡಿದ್ದರು. ನನ್ನನ್ನು ತುಳಿಯುವ ಕೆಲಸ ನಮ್ಮ ಪಕ್ಷದಲ್ಲೇ ಆಯ್ತು. ಯಾರೆಲ್ಲಾ ನನ್ನ ಹಿಂದೆ ಕೆಲಸ ಮಾಡಿದ್ದರು ಅನ್ನೋದು ನನಗೆ ಗೊತ್ತಿದೆ ಎಂದಿದ್ದರು. ಅದರಂತೆ ಯಡಿಯೂರಪ್ಪ, ಒಮ್ಮೆಯೂ ಮುಖ್ಯಮಂತ್ರಿ ಆಗಿ ಪೂರ್ಣ ಅವಧಿ ಮುಗಿಸಲು ಬಿಜೆಪಿ ನಾಯಕರೇ ಬಿಟ್ಟುಕೊಡಲಿಲ್ಲ. ಅಂದರೆ ಬಿಜೆಪಿ ನಾಯಕರೇ ಯಡಿಯೂರಪ್ಪ ಅವರ ಬೆಳವಣಿಗೆ ತಡೆಯುವ ಕೆಲಸ ಮಾಡಿದ್ದಾರೆ ಎನ್ನುವುದು ಸತ್ಯ. ಈ ಮಾತನ್ನು ಯಡಿಯೂರಪ್ಪ ಪುತ್ರಿ ಬಹಿರಂಗವಾಗಿಯೇ ಹೇಳಿದ್ದಾರೆ.
ಡೈರಿಯಲ್ಲಿ ಇರುವ ಅಂಶ, ರಾಜಕೀಯವೇ ಅಸಹ್ಯ ಎನಿಸಿತ್ತು..!
ಮಾಜಿ ಸಿಎಂ ಯಡಿಯೂರಪ್ಪ ಅವರು ಡೈರಿ ಬರೆದಿಟ್ಟಿದ್ದಾರೆ. ನನ್ನ ಸಹೋದರಿಯರು ಆ ಡೈರಿ ಓದಿದ್ದಾರೆ. ಒಮ್ಮೆ ಯಡಿಯೂರಪ್ಪ ಬೆಳೆದುಬಿಟ್ಟರೆ ಅವರನ್ನು ನಿಯಂತ್ರಣ ಮಾಡೋದಕ್ಕೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಅವರ ಕುರ್ಚಿಯನ್ನು ಅಲ್ಲಾಡಿಸಲಾಯ್ತು. ಒಮ್ಮೆ ರಾಜಕೀಯದಲ್ಲಿ ಹೆಮ್ಮರವಾಗಿ ಬೆಳೆದರೆ ಅವರನ್ನು ತಡೆಯುವುದಕ್ಕೆ ಆಗಲ್ಲ ಎನ್ನುವ ಕಾರಣಕ್ಕೆ ಜೈಲಿಗೆ ಕಳುಹಿಸುವ ಕೆಲಸ ಆಯ್ತು ಎಂದಿದ್ದಾರೆ. ಆ ಡೈರಿಯಲ್ಲಿ ಪ್ರತಿಯೊಂದು ಘಟನೆಗಳನ್ನು ಯಡಿಯೂರಪ್ಪ ಬರೆದಿದ್ದು, ಇಂದಲ್ಲ, ನಾಳೆ ಆ ಡೈರಿ ಬಿಡುಗಡೆ ಆಗಲಿದೆ. ಆ ಡೈರಿ ಒಮ್ಮೆ ರಾಜ್ಯದ ಜನರ ಎದುರು ಬಿಡುಗಡೆ ಆದರೆ ಬಿಜೆಪಿಯನ್ನು ಅಪ್ಪಿಕೊಂಡಿರುವ ಲಿಂಗಾಯತ ವೀರಶೈವ ಸಮುದಾಯ ಕೇಸರಿಪಾಳಯದಿಂದ ಹೊರ ಬರುವುದು ಆಶತ ಸಿದ್ಧ ಎನ್ನಬಹುದು. ಇದೇ ಕಾರಣಕ್ಕೆ ಯಡಿಯೂರಪ್ಪ, ಪಕ್ಷ ನನಗೆ ಅನ್ಯಾಯ ಮಾಡಿಲ್ಲ, ಸಿಎಂ ಸ್ಥಾನಕ್ಕೆ ನಾನೇ ರಾಜೀನಾಮೆ ಕೊಟ್ಟಿದ್ದು, ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ ಎಂದು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಅವರನ್ನು ಬಿಜೆಪಿ ಯಾವ ರೀತಿ ನಡೆಸಿಕೊಂಡಿದೆ ಎನ್ನುವುದು ಜನರಿಗೆ ಗೊತ್ತಿದೆ. ಅಷ್ಟೇ ಅಲ್ಲದೆ ಇದೀಗ ಯಡಿಯೂರಪ್ಪ ಅವರನ್ನು ಯಾವ ಕೇಸ್ಗಳನ್ನು ಮುಂದಿಟ್ಟುಕೊಂಡು ಬಗ್ಗಿಸಲಾಗ್ತಿದೆ ಎನ್ನುವ ಬಗ್ಗೆಯೂ ರಾಜಕೀಯ ಚರ್ಚೆ ಹುಟ್ಟು ಹಾಕಿದೆ. ಆದರೆ ಡೈರಿ ಬಿಡುಗಡೆ ಆದರೆ ಬಿಜೆಪಿ ಭವಿಷ್ಯ ಬುಡಮೇಲು ಆಗುವುದರಲ್ಲಿ ನೋ ಡೌಟ್.





