ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯ ವಿಧಾನಸಭಾ ಚುನಾವಣಿಕ್ಕೆ ಕೆಲ ತಿಂಗಳು ಮಾತ್ರ ಬಾಕಿ ಇದೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರು ವಾರಕ್ಕೆ ಒಮ್ಮೆ ಬಿಜೆಪಿ ನಾಯಕರು ಬರುತ್ತಾ ಇದ್ದಾರೆ ಇದು ರಾಜ್ಯ ಬಿಜೆಪಿ ನಾಯಕರಿಗೆ ಬಲ ಅಂತಾನೆ ಹೇಳುಬಹುದು ಈಗ ಮತ್ತೆ ನಾಳೆ ೨೭ರಂದು ಪ್ರಧಾನಿ ಮೋದಿ ಅವರು ದೆಹಲಿಯಿಂದ ಬೆಳಗ್ಗೆ 11.15ಕ್ಕೆ ಶಿವಮೊಗ್ಗ ನೂತನ ಏರ್ಪೋರ್ಟ್ ಗೆ ಆಗಮಿಸಲಿದ್ದು ವಿಮಾನ ಇಳಿದ ಬಳಿಕ ನೂತನ ಏರ್ ಪೊರ್ಟ್ ಟರ್ಮಿನಲ್ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ನಂತರ ಏರ್ ಪೊರ್ಟ್ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಸಾವಿರಾರು ಕೋಟಿ ಕೇಂದ್ರ ಅನುದಾನದ ವಿವಿಧ ಕಾಮಗಾರಿಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಮೋದಿ ಶಿವಮೊಗ್ಗ ಏರ್ಪೋರ್ಟ್ ನಿಂದ ಬೆಳಗಾವಿಯತ್ತ ಪಯಾಣ ಬೆಳೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಹಲವು ಕೇಂದ್ರ ಮತ್ತು ರಾಜ್ಯ ಸಚಿವರು ಭಾಗಿಯಾಗಲಿದ್ದಾರೆ. ಫೆ 27ಕ್ಕೆ ಬಿಎಸ್ವೈ ಹುಟ್ಟುಹಬ್ಬ ಹಿನ್ನೆಲೆ ಮೋದಿಯಿಂದ ಏರಪೋರ್ಟ್ ಗೆ ಚಾಲನೆ ಮೂಲಕ ಬರ್ತಡೇ ಗಿಫ್ಟ್ ನೀಡಲಾಗುತ್ತಿದೆ.
ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ ಸರ್ವೇ ನಂ. 120 ರಲ್ಲಿ 775 ಎಕರೆ ಭೂಮಿಯಲ್ಲಿ ಏರ್ ಪೋರ್ಟ್ ಕಾಮಗಾರಿಯು 384 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಈ ನಡುವೆ 2008ರಲ್ಲಿ ಆರಂಭವಾದ ಈ ಏರ್ಪೋರ್ಟ್ ಕಾಮಗಾರಿಯು 2023 ರಲ್ಲಿ ಪೂರ್ಣಗೊಂಡಿದೆ. ಈಗಾಗಲೇ ಟ್ರಯಲ್ ಬೇಸ್ ಮೇಲೆ 2 ವಿಮಾನಗಳು ಲ್ಯಾಂಡ್ ಆಗಿವೆ. ಒಟ್ಟು ವಿಮಾನ ನಿಲ್ದಾಣಕ್ಕೆ 600 ಕೋಟಿ ರೂ. ವ್ಯಯಿಸಲಾಗಿದೆ. ಇದರಲ್ಲಿ ಕಟ್ಟಡ ಕಾಮಗಾರಿಗೆ 449 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು ಉಳಿದ ಹಣದಲ್ಲಿ ಭೂ ಖರೀದಿಗೆ ನೀಡಲಾಗಿದೆ. ಈ ನಿಲ್ದಾಣ 3.2 ಕಿಲೋಮೀಟರ್ ರನ್ ವೇ ಹೊಂದಿದೆ. ವಿಮಾನ ನಿಲ್ದಾಣದ ಸುತ್ತಲಿನ ಕಾಂಪೌಂಡ್ 15,900 ಮೀಟರ್ ಉದ್ದವಿದೆ.









