• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರಾಜ್ಯದ ಮರ್ಯಾದೆ ಹರಾಜು ಹಾಕುತ್ತಿರುವ ಮಹಿಳಾ ಅಧಿಕಾರಿಗಳು: ಎಂ.ಲಕ್ಷ್ಮಣ್ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
February 23, 2023
in Top Story, ರಾಜಕೀಯ
0
ರಾಜ್ಯದ ಮರ್ಯಾದೆ ಹರಾಜು ಹಾಕುತ್ತಿರುವ ಮಹಿಳಾ ಅಧಿಕಾರಿಗಳು: ಎಂ.ಲಕ್ಷ್ಮಣ್ ಕಿಡಿ
Share on WhatsAppShare on FacebookShare on Telegram

ಮೈಸೂರು: ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಂದ ಉಚಿತ ಮನರಂಜನೆ ಸಿಗುತ್ತಿದೆ. ದೇಶದಲ್ಲಿ ರಾಜ್ಯದ ಮಾನ ಮರ್ಯಾದೆಯನ್ನು ಈ ಅಧಿಕಾರಿಗಳು ಹರಾಜು  ಹಾಕುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಸರ್ಕಾರ ಇಲ್ಲ ಎಂಬುದು ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದ್ದಾರೆ.

ADVERTISEMENT

ಐಪಿಎಸ್ ರೂಪ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಜಗಜ್ಜಾಹೀರಾಗಿದೆ. ಇಬ್ಬರ ನಡುವಿನ ಜಗಳ ನ್ಯಾಯಾಲಯದ ಅಂಗಳದಲ್ಲಿ ಇದೆ. ಸರ್ಕಾರ ಕೂಡ ಈ ಪ್ರಕರಣದಿಂದ ತೀವ್ರ ಮುಜುಗರಕ್ಕೀಡಾಗಿದೆ. ಈ ಸಂಬಂಧ ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ  ಎಂ.ಲಕ್ಷ್ಮಣ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಾನು ನರೇಂದ್ರ ಮೋದಿ, ಅಮಿತ್ ಶಾ ಅವರಲ್ಲಿ  ಕೇಳಿಕೊಳ್ಳುತ್ತೇನೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ . ಇದರ ಅರ್ಥ ರಾಜ್ಯದಲ್ಲಿ ನಾಲಾಯಕ್ ಸರ್ಕಾರ ಹಾಗೂ ನಾಲಾಯಕ್ ಮುಖ್ಯಮಂತ್ರಿ ಇದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ರಾಜ್ಯದ ಮಾನ ಮರ್ಯಾದೆಯನ್ನು ಈ  ಅಧಿಕಾರಿಗಳು ಹರಾಜು ಹಾಕುತ್ತಿದ್ದಾರೆ. ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ  ಒಂದು  ನೋಟಿಸ್ ಕೂಡ ಜಾರಿ ಮಾಡಿಲ್ಲ. ಈ ವಿಚಾರದಲ್ಲಿ ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ ಮೂಲಕ ಲಂಚ ಪಡೆದು  ಅವರನ್ನು ನೇಮಕ ಮಾಡಿದ್ದಾರೆ. ಆದ್ದರಿಂದ ಅವರನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.

ನಿನ್ನೆ ಗೃಹ ಸಚಿವ ಅರಗ ಜ್ಞಾನೇಂದ್ರ ಮೇಲ್ಮನೆಯಲ್ಲಿ ಒಂದು ಉತ್ತರ ಕೊಟ್ಟಿದ್ದಾರೆ . ಅನೇಕ ರೌಡಿಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. 10 ಮಂದಿ ರೌಡಿಗಳಿಗೆ  ಎಂ.ಎಲ್. ಎ ಟಿಕೆಟ್ ಮತ್ತು 60 ಮಂದಿಗೆ ಬಿಬಿಎಂಪಿ ಟಿಕೆಟ್ ಕೊಡಲು ನಿರ್ಧಾರ ಮಾಡಿದ್ದಾರೆ. ಸೈಲೆಂಟ್ ಸುನೀಲ, ಬೆತ್ತನ ನಗರ ಶಂಕರ, ಸ್ಯಾಂಟ್ರೊ ರವಿ, ಸೈಕಲ್ ರವಿ ಸೇರಿದಂತೆ  ಹಲವರು ಬಿಜೆಪಿಗೆ ಸೇರಿದ್ದಾರೆ. ಇದು ಬಿಜೆಪಿಯ ರೌಡಿ ಮೋರ್ಚಾ, ಗೂಂಡಾ ಮೋರ್ಚಾ ಕಾಂಗ್ರೆಸ್ ಅವರನ್ನು ಹೆದರಿಸಲು ಇವರೆಲ್ಲರೂ ತಯಾರಿ ಮಾಡಿದ್ದಾರೆ  ಎಂದು ಆರೋಪಿಸಿದರು.

ಸಿ.ಟಿ.ರವಿಗೆ ನಾಚಿಕೆಯಾಗಬೇಕು

ಮಾಂಸ ತಿಂದು ಸಿಟಿ ರವಿ ದೇವಸ್ತಾನಕ್ಕೆ ಹೋಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದನ್ನು ಪ್ರಚಾರ ಮಾಡಿದರು. ಅದೇ ಸಿಟಿ ರವಿ ನಿನ್ನೆ ಭಟ್ಕಳದಲ್ಲಿ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಮಾಂಸ ತಿಂದಿದ್ದಾರೆ. ಚಿಕನ್, ಮಟನ್, ಶಿಗಡಿ ಎಲ್ಲಾ ಮಾಂಸವನ್ನು  ಜೊತೆಗೆ ಬೀಫ್ ಕೂಡ ತಿಂದಿದ್ದಾರೆ ಎಂದು ಅವರ ಕಡೆಯವರೇ ಹೇಳಿದ್ದಾರೆ. ಸ್ವತಃ ಅವರೇ ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ  ಎಂದು ಹೇಳಿದ್ದಾರೆ. ಮಾಂಸ ತಿಂದು ದೇವಸ್ಥಾನ ಒಳಗೆ ಹೋಗಿದ್ದಾರೆ. ಸಿಟಿ ರವಿಗೆ ನಾಚಿಕೆಯಾಗಬೇಕು ಎಂದು ಎಂ.ಲಕ್ಷ್ಮಣ್ ಗುಡುಗಿದರು.

ಸುಳ್ಳು ಸ್ಪರ್ಧೆಯಲ್ಲಿ ಮೋದಿ ಬಿಟ್ಟರೆ ಸಿಟಿ ರವಿ ಬೆಸ್ಟ್

ಸುಳ್ಳು ಸ್ಪರ್ಧೆಯಲ್ಲಿ ಮೋದಿ ಬಿಟ್ಟರೆ ಸಿಟಿ ರವಿ ಬೆಸ್ಟ್ . ಸುಳ್ಳು ಹೇಳುವ ಕಾಲೇಜ್ ಓಪನ್ ಮಾಡಿ  ನನಗೂ ಒಂದು ಸೀಟ್ ಕೋಡಿ ನಿಮ್ಮಂತೆ ನಾನು ಸುಳ್ಳು ಹೇಳುವುದು ಕಲೀಬೇಕು. ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳುತ್ತಾರೆ. ಮೋದಿ ಬಿಟ್ಟರೆ ಸಿಟಿ ರವಿಗೆ ಮಾತ್ರ ಇದು ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ್ ವ್ಯಂಗ್ಯವಾಡಿದರು.

Tags: Congress PartyDRoopaM LaxmanMysoreRohini Sindhuri
Previous Post

ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ

Next Post

ಜಲ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ನೀಡಲು ಸರ್ಕಾರ ವಿಫಲ: ಹೆಚ್.ಡಿ.ಕುಮಾರಸ್ವಾಮಿ

Related Posts

Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
0

"ಜೆಡಿಎಸ್ ಅವರ ಯೋಗ್ಯತೆಗೆ ಒಂದು ಕೆಲಸ ಮಾಡಿಲ್ಲ. ತುಂಗಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ ಒಂದೇ ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗಿದೆ. ಜೆಡಿಎಸ್ ಅವರಿಗೆ ಏನೂ ಮಾಡಲು...

Read moreDetails

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

November 19, 2025
ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

ಹಿಂದುಳಿದವರು, ದಲಿತರ BJP, RSS, ABVP ಒಲವು: ಸಿಎಂ ಸಿದ್ದರಾಮಯ್ಯ ಬೇಸರ

November 19, 2025
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

November 19, 2025
Next Post
ಜಲ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ನೀಡಲು ಸರ್ಕಾರ ವಿಫಲ: ಹೆಚ್.ಡಿ.ಕುಮಾರಸ್ವಾಮಿ

ಜಲ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ನೀಡಲು ಸರ್ಕಾರ ವಿಫಲ: ಹೆಚ್.ಡಿ.ಕುಮಾರಸ್ವಾಮಿ

Please login to join discussion

Recent News

Top Story

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

by ಪ್ರತಿಧ್ವನಿ
November 19, 2025
Top Story

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

by ಪ್ರತಿಧ್ವನಿ
November 19, 2025
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ
Top Story

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಔಷಧಿ ಟೆಂಡರ್‌ನಲ್ಲಿ ಭಾರೀ ಗೋಲ್‍ಮಾಲ್-ಸಿ.ಟಿ.ರವಿ

by ಪ್ರತಿಧ್ವನಿ
November 19, 2025
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR
Top Story

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ವಿರುದ್ಧ FIR

by ಪ್ರತಿಧ್ವನಿ
November 19, 2025
ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ
Top Story

ಹೊಗೆ ತಂದ ಆಪತ್ತು: ಬೆಳಗಾವಿಯಲ್ಲಿ ಮೂವರು ಯುವಕರ ದುರಂತ ಅಂತ್ಯ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಲಸ ಮಾಡಲು ಯೋಗ್ಯತೆ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್..!!

November 19, 2025

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಟೆಕ್ ಸಮಿಟ್-2025ನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್..!!

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!