ಅಫಜಲಪುರ: ನನಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಸಿಗದೆ ಇದ್ದರೂ, ನಾನು ಪಕ್ಷಾಂತರ ಪರ್ವ ಮಾಡಿದ್ದೆಯಾದರೂ, ಅಫಜಲಪುರ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡುವ ಮೂಲಕ ಮಾಜಿ ಸಚಿವರು ಹಾಗೂ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಾಲಿಕಯ್ಯ ಗುತ್ತೆದಾರ ಜನರಲ್ಲಿ ಗೊಂದಲ ಸೃಷ್ಠಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನಪರ ಕಾಳಜಿ ಹೋತ್ತು ದಿನನಿತ್ಯ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸರಕಾರದ ಸವಲತ್ತುಗಳು ದೊರುಕುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಮುಂಬರುವ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.
ಕರ್ನಾಟಕದಲ್ಲಿ ಯಾವೊಬ್ಬ ಬಿಜೆಪಿ ನಾಯಕನಿಗೂ ಸ್ವಂತ ಶಕ್ತಿಯ ಮೇಲೆ ಮತ್ತು ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುವ ಧೈರ್ಯ ಇಲ್ಲ. ಮೋದಿಯವರ ಹೆಸರು ಹೇಳಿ ಓಟು ಕೇಳುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ ಬೇಲ್ ಮೇಲೆ ಹೊರಗಡೆ ಇದ್ದಾರೆ.ಯಾವಾಗ ಜೈಲಿಗೆ ಹೋಗುತ್ತಾರೆ ಗೊತ್ತಿಲ್ಲ.ಅವರ ಮಾತಿಗೆ ನಾವು ಬೆಲೆ ಕೊಡುವುದಿಲ್ಲ ಮತ್ತು ಅವರು ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕನು ಅಲ್ಲ ಅಂದರು.

ನಂತರ ಅಫಜಲಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎಮ್.ವೈ.ಪಾಟೀಲ್ ವಿರುದ್ಧ ಹರಿಹಾಯ್ದ ಗುತ್ತೆದಾರ, ಕ್ಷೇತ್ರದ ಶಾಸಕರಿಗೆ ಜನರು ತೊಂದರೆಗಳನ್ನು ತಿಳಿಸಲು ಹೋದಾಗ ಅವರಿಗೆ ಸ್ಪಂದಿಸುವುದು ಶಾಸಕರ ಜವಾಬ್ದಾರಿ. ಅದನ್ನು ಬಿಟ್ಟು ಬೇಜವಾಬ್ದಾರಿಂದ ಜನರೊಂದಿಗೆ ನಡೆದುಕೊಳ್ಳಬಾರದು. ಹೆಸರಿಗೆ ಮಾತ್ರ ಎಮ್.ವೈ.ಪಾಟೀಲ ಶಾಸಕರಾಗಿದ್ದಾರೆ ಅವರ ಅಧಿಕಾರವೆಲ್ಲ ಅವರ ಸುಪುತ್ರ ಅರುಣಕುಮಾರ ಮಾಡುತ್ತಾರೆ.ಅವರ ಇಷ್ಟದ ಹಾಗೆ ನಡೆದುಕೊಂಡರೆ ಜನರ ಕಷ್ಟ ಕೇಳೊರು ಯಾರು ಎಂದು ವಾಗ್ದಾಳಿ ನಡೆಸಿದರು.
ನಾನು ಜನರ ಕಷ್ಟಗಳನ್ನು ಕೇಳಲು ಹಳ್ಳಿಗಳಿಗೆ ತೆರಳಿದಾಗ ಅಲ್ಲಿನ ಜನರು ತಮ್ಮ ಅಳಲನ್ನು ನನ್ನ ಮುಂದೆ ತೊಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ರಾಜಕಾರಣದಲ್ಲಿ ಮಾಡಬಾರದು ಎಂದರು.
ನಮ್ಮ ಪಕ್ಷ ನನಗೆ ಟಿಕೆಟ್ ನೀಡಲಿ ನೀಡದೆ ಇರಲಿ , ನಾನು ಕೆಟ್ಟ ಮನಸ್ಸಿನಿಂದ ಬೇರೆ ಪಕ್ಷಕ್ಕೆ ಹೋದರು ಅಫಜಲಪುರ ಜನತೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದು ಕೈ ಮುಗಿದು ಕೇಳಿಕೊಳ್ಳುತ್ತೆನೆ ಎಂದರು.
ಈ ಹೇಳಿಕೆಯಿಂದ ಜನರಲ್ಲಿ ಗೊಂದಲ ಗೊಚರಿಸುವುದಲ್ಲದೇ, ಗುತ್ತೆದಾರ ಅವರು ಪರೋಕ್ಷವಾಗಿ ಟಿಕೆಟ್ ಸಿಗದಿದ್ದರೆ ಪಕ್ಷಾಂತರ ಮಾಡುವ ಸೂಚನೆ ನೀಡಿದ್ರಾ? ಅಥವಾ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ರಾ? ಎಂಬುವುದು ಗೊಂದಲದ ಗೂಡಾಗಿದೆ. ಮಾಲಿಕಯ್ಯ ಗುತ್ತೆದಾರ ಅವರು ಬೇರೆ ಪಕ್ಷಕ್ಕೆ ಹೋದರೆ ಅಲ್ಲಿ ಅವರೇ ಅಭ್ಯರ್ಥಿಯಾಗುವುದರಲ್ಲಿ ಸಂಶಯವಿಲ್ಲ.ಅವರೇ ಅಭ್ಯರ್ಥಿಗಳಾಗಿ ನನಗೆ ಮತ ನೀಡಬೇಡಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಹೇಗೆ ಹೇಳುತ್ತಾರೆ ಎಂಬುವುದು ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆಲ್ಲಾ ಕಾಲವೇ ಉತ್ತರ ನಿಡಬೇಕಿದೆ.