• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್

ಪ್ರತಿಧ್ವನಿ by ಪ್ರತಿಧ್ವನಿ
January 22, 2023
in ಸಿನಿಮಾ
0
ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್
Share on WhatsAppShare on FacebookShare on Telegram

ADVERTISEMENT

ಕೃಷ್ಣ ಕೆ.ಎಸ್ ಚೊಚ್ಚಲ ನಿರ್ದೇಶನದಲ್ಲಿ ರಾಘವೇಂದ್ರ ರಾಜ್ ಕುಮಾರ್, ಸ್ಪರ್ಶ ರೇಖಾ ಮುಖ್ಯ ಭೂಮಿಕೆಯ ‘ಆಧುನಿಕ ಶ್ರವಣಕುಮಾರ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಹಿರಿಯ ಹಾಗೂ ಅನುಭವಿ ಕಲಾವಿದರ ತಾರಾಬಳಗ ಇರುವ ಈ ಚಿತ್ರತಂಡ ಟೀಸರ್ ಮೂಲಕ ಸಿನಮಾ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.

ಸರ್ಕಾರಿ ಶಾಲೆ ಉಳಿಸಬೇಕು ಎಂದು ಪಣ ತೊಡುವ ಹಾಗೂ ಸ್ನೇಹಿತರ ಜೊತೆಗಿನ ಬಾಂದವ್ಯವನ್ನು ಸಾರುವ ಫ್ಯಾಮಿಲಿ ಎಂಟಟೈನ್ಮೆಂಟ್ ಸಿನಿಮಾ ಆಧುನಿಕ ಶ್ರವಣಕುಮಾರ. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಕೃಷ್ಣ.ಕೆ.ಎಸ್ ಚಂದನವನಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ.

ನಿರ್ದೇಶಕ ಕೃಷ್ಣ. ಕೆ. ಎಸ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಕೋವಿಡ್ ಗೂ ಮೊದಲೇ ಅಪ್ಪು ಸರ್ ಇದ್ದಾಗಲೇ ರಾಘಣ್ಣ ಅವರಿಗೆ ಕಥೆ ಹೇಳಿದ್ದೆ. ತುಂಬಾ ಖುಷಿಯಿಂದ ಒಪ್ಪಿಕೊಂಡ್ರು. ಹಲವು ಹಿರಿಯ ನಟರು ಚಿತ್ರದ ತಾರಾಬಳಗದಲ್ಲಿದ್ದಾರೆ. ಫ್ಯಾಮಿಲಿ ಎಂಟಟೈನ್ಮೆಂಟ್ ಜೊತೆಗೆ ಸರ್ಕಾರಿ ಶಾಲೆ ಉಳಿವಿನ ವಿಚಾರವೂ ಚಿತ್ರದಲ್ಲಿದೆ. ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ಈ ಚಿತ್ರ ನೀಡಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಮಾರ್ಚ್ ನಲ್ಲಿ ಸಿನಿಮಾ ತೆರೆಗೆ ತರುವ ತಯಾರಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಇದು ನನ್ನ ಸಿನಿಮಾ ಅಲ್ಲ ಈ ಚಿತ್ರದಲ್ಲಿ ನಾನು ಒಂದು ಪಾತ್ರ ಅಷ್ಟೇ. ನಾಲ್ಕು ಜನ ಸ್ನೇಹಿತರು ಇರ್ತಾರೆ. ಅವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತೆ. ಅವರಿಗೆ ಸ್ನೇಹಿತನೇ ಸಮಸ್ಯೆ ಆದಾಗ ಹೇಗೆ ಅದನ್ನು ಸರಿ ಹೊಂದಿಸಿಕೊಳ್ಳುತ್ತಾರೆ ಅನ್ನೋದು ಈ ಚಿತ್ರದ ಎಳೆ. ತುಂಬಾ ಇಷ್ಟವಾದ ಪಾತ್ರ ಮಾಡಿದ್ದೇನೆ. ಅಪ್ಪು ಬಿಟ್ಟು ಹೋದ ಮೇಲೆ ಮಾಡಿದ ಮೊದಲ ಸಿನಿಮಾವಿದು. ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಿರ್ಮಾಪಕ ಎನ್. ಭರತ್ ಬಾಬು ಮಾತನಾಡಿ ದಿ ನಾಗ್ಸ್ ಫಿಲಂಸ್ ಮತ್ತು ಮೀಡಿಯಾ ಬ್ಯಾನರ್ ಮೊದಲ ಸಿನಿಮಾವಿದು. ತುಂಬಾ ಜನ ಸೀನಿಯರ್ ಆರ್ಟಿಸ್ಟ್ ಈ ಚಿತ್ರದಲ್ಲಿ ನಟಿಸಿದ್ದಾರೆ. ನಮ್ಮ ನಿರ್ಮಾಣದ ಮೊದಲ ಸಿನಿಮಾ ಹಾಗೆಯೇ ನಿರ್ದೇಶಕರಿಗೂ ಇದು ಮೊದಲ ಪ್ರಯತ್ನ ಹಾಗಿದ್ದೂ ಕೂಡ ಎಲ್ಲಾ ಹಿರಿಯ ಕಲಾವಿದರು ನಮಗೆ ಸಪೋರ್ಟ್ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ತಿಳಿಸಿದ್ರು.

ಹಿರಿಯ ಹಾಗೂ ಅನುಭವಿ ಕಲಾವಿದರ ಸಮಾಗಮ ಇರುವ ಈ ಚಿತ್ರದಲ್ಲಿ ಬಾಲ ರಾಜ್ವಾಡಿ. ದಿಲೀಪ್ ಪೈ, ಮಿಮಿಕ್ರಿ ದಯಾನಂದ್, ಗೋವಿಂದೇ ಗೌಡ, ಟಿ ಎಸ್. ನಾಗಭರಣ, ರಮೇಶ್ ಭಟ್, ಗಿರಿಜಾ ಲೋಕೇಶ್, ಸ್ಪರ್ಶ ರೇಖಾ, ಸುಧಾ ಬೆಳವಾಡಿ, ರಘು ರಮಣಕೊಪ್ಪ, ಗಿಲ್ಲಿ ನಟ ಒಳಗೊಂಡ ತಾರಾಬಳಗವಿದೆ. ಅರುಣ್ ಶ್ರೀನಿವಾಸ್ ಸಂಗೀತ ನಿರ್ದೇಶನ, ಸಿದ್ದು.ಕೆ.ಎಸ್.ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನ ಚಿತ್ರಕ್ಕಿದೆ.

Previous Post

| APPU | ಬಳ್ಳಾರಿಯಲ್ಲಿ 25 ಅಡಿ ಅಪ್ಪುವಿನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಅಭಿಮಾನಿಗಳು | ballari |

Next Post

ತೇಜಸ್ವಿ ಸೂರ್ಯನ ಬಾಲ ಕುಚೇಷ್ಟೆಗಳು

Related Posts

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!
Top Story

ಅಸಭ್ಯವಾಗಿ ವೀಡಿಯೋ-ಫೋಟೋ ಚಿತ್ರೀಕರಿಸುವವರ ವಿರುದ್ಧ ನಟಿ ಸಪ್ತಮಿ ಗೌಡ ಆಕ್ರೋಶ..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ನಟಿಯರ ವೀಡಿಯೊ ಹಾಗೂ ಫೋಟೋಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ.ಅಂತಹವರ ವಿರುದ್ಧ ʼಕಾಂತಾರʼ ಸಿನಿಮಾದ ನಟಿ ಸಪ್ತಮಿ ಗೌಡ...

Read moreDetails
ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ

ನಟಿ ಅಮೂಲ್ಯ ಪತಿಗೆ ಬಿಜೆಪಿಯಲ್ಲಿ ಮಹತ್ವದ ಹುದ್ದೆ

March 3, 2026
ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

ಸೆಲೆಬ್ರಿಟಿ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್…ಇಂಡಸ್ಟ್ರೀಗೆ ಯುವ ಪ್ರತಿಭೆ ಅಶ್ವಿನ್ ಎಂಟ್ರಿ

March 1, 2026
ವಿಜಯ್ –ರಶ್ಮಿಕಾ ಮದುವೆ ಸಂಭ್ರಮ: ಇಂದು ದೇಶಾದ್ಯಂತ ಸಿಹಿ ವಿತರಣೆ, ಅನ್ನದಾನ

ವಿಜಯ್ –ರಶ್ಮಿಕಾ ಮದುವೆ ಸಂಭ್ರಮ: ಇಂದು ದೇಶಾದ್ಯಂತ ಸಿಹಿ ವಿತರಣೆ, ಅನ್ನದಾನ

March 1, 2026
ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿ ಆರೋಪ: ಮಾ.11ರಂದು ಬೃಹತ್‌ ಪ್ರತಿಭಟನೆಗೆ ಕರೆ

ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿ ಆರೋಪ: ಮಾ.11ರಂದು ಬೃಹತ್‌ ಪ್ರತಿಭಟನೆಗೆ ಕರೆ

February 28, 2026
Next Post
ತೇಜಸ್ವಿ ಸೂರ್ಯನ ಬಾಲ ಕುಚೇಷ್ಟೆಗಳು

ತೇಜಸ್ವಿ ಸೂರ್ಯನ ಬಾಲ ಕುಚೇಷ್ಟೆಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada