ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಐಟಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದ 13 ಮಂದಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಜನಪ್ರತನಿಧಿಗಳ ವಿಶೇಷ ನ್ಯಾಯಲಯದಿಂದ ಸಮನ್ಸ್ ಜಾರಿ ಮಾಡಲಾಗಿದೆ.
ಪದೇ ಪದೇ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್,ಡಾ.ಜಿ ಪರಮೇಶ್ವರ್, ರಿಜ್ವಾನ್ ಆರ್ಷಾದ್, ಟಿ.ಬಿ ಜಯಚಂದ್ರ, ವೀರಪ್ಪ ಮೊಯ್ಲಿ,, ಕೆ.ಜೆ ಜಾರ್ಜ್,ಯು.ಟಿ ಖಾದರ್, ಎಂ ನಾರಾಯಣ ಸ್ವಾಮಿ, ಪರಮೇಶ್ವರ್ ನಾಯ್ಕ್,ಸಲೀಂ ಅಹಮದ್, ಸೌಮ್ಯ ರೆಡ್ಡಿ, ಮಹಮದ್ ಹ್ಯಾರಿಸ್ ನಲಪಾಡ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಹಿಂದೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರು FIR ದಾಖಲಿಸಿದ್ದರು ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಜನಪ್ರತನಿಧಿಗಳ ವಿಶೇಷ ನ್ಯಾಯಲಯದಿಂದ ಸಮನ್ಸ್ ಜಾರಿ ಮಾಡಲಾಗಿದೆ.
