ಕೆಲಸ ಕೇಳಿಕೊಂಡು ಬಂದ ಯುವತಿ ಮೇಲೆ ಅತ್ಯಾಚಾರ ಮಾಡಿ . ಆಕೆಯನ್ನು ಮದುವೆಯಾಗಿ ಬೇರೆಯವರಿಗೆ ಸಪ್ಲೈ ಮಾಡಲು ಮುಂದಾದ ಆರೋಪ ಎದುರಿಸುತ್ತಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದೆ .ಈ ಬಗ್ಗೆ ಮೈಸೂರು ಪೊಲೀಸ್ ಕಮಿಷ್ನರ್ ರಮೇಶ್ ಬಾನೋತ್ ಹೇಳಿದ್ದಾರೆ ..
ಸಂತ್ರಸ್ತ ಮಹಿಳೆ ಸ್ಯಾಂಟ್ರೋ ರವಿ ವಿರುದ್ಧ ಮಾಡಿರುವ ಒಂದೊಂದು ಆರೋಪಗಳೂ ಭಾಯಾನಕವಾಗಿದೆ . ರವಿ ತಾನು ಕಟ್ಟಿಕೊಂಡ ಹೆಂಡತಿಯನ್ನೇ ಐಎಎಸ್ ಅಧಿಕಾರಿಗಳ ಬಳಿಗೆ ಹೋಗುವಂತೆ ಒತ್ತಾಯಿಸುತ್ತಿದ್ದ ಎಂಬ ಗಂಭೀರ ಆರೋಪವಿದೆ. ಅದಲ್ಲದೆ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಎಂಬವರ ಹೆಸರನ್ನು ಆಕೆ ನೇರವಾಗಿ ದೂರಿನಲ್ಲಿ ದಾಖಲಿಸಿದ್ದಾಳೆ ..
ಸ್ಯಾಂಟ್ರೋ ರವಿ ಹಲವು ವರ್ಷಗಳಿಂದ ಹುಡುಗಿಯರ ಪೂರೈಕೆ ವಿಚಾರದಲ್ಲಿ ಪಿಂಪ್ ಎಂದು ಹೆಸರಾಗಿದ್ದವನು . ಆತನ ಕೃತ್ಯಗಳ ಬಗ್ಗೆ ರಾಜಕೀಯ , ಅಧಿಕಾರಿಗಳ ವಲಯದಲ್ಲಿ ಕಥೆಗಳಿವೆ . ರಾಜಕಾರಣಿಗಳಿಗೆ ತೀರಾ ಹತ್ತಿರದವನಾಗಿರುವ ಆತ ವರ್ಗಾವಣೆ ದಂಧೆಯಲ್ಲೂ ನಿಸೀಮಾ .. ಆತನ ಕೆಲವು ಆಡಿಯೋಗಳು ವೈರಲ್ ಸಹ ಆಗಿದೆ . ಈ ನಡುವೆ ಜೆಡಿಎಸ್ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಮುಂಬಯಿಗೆ ತೆರಳಿದ್ದ ೧೭ ಶಾಸಕರನ್ನು ರಂಜಿಸಲು ಸ್ಯಾಂಟ್ರೋ ೧೨ ಹುಡುಗಿಯರನ್ನು ಕಳುಹಿಸಿಕೊಟ್ಟಿದ್ದ ಎಂಬ ಗಂಭೀರ ಆರೋಪವನ್ನು ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದೂ ಎಲ್ಲೆಡೆ ಇನ್ನಷ್ಟು ಚರ್ಚೆಯಾಗಿದೆ ..