ಬೆಳ್ತಂಗಡಿ:ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ನಾಲ್ವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸುಧೀರ್, ಪಾರ್ವತಿ, ಮನೋಹರ್, ಮಾದು ಎಂಬವರ ಮೇಲೆ ಕೇಸ್ ದಾಖಲಾಗಿದೆ.ಮಕ್ಕಳ ಕಲ್ಯಾಣ ಸಮಿತಿಯವರು ನೀಡಿದ ದೂರಿನ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನೊಂದ ಬಾಲಕಿ ಭಾನುವಾರ ಹಾಗೂ ಶಾಲಾ ರಜಾ ದಿನಗಳಲ್ಲಿ ಸುಧೀರ್ ಎಂಬಾತನ ಮನೆಗೆ ಆಗಾಗ ಟಿ.ವಿ ನೋಡಲು ಹೋಗುತ್ತಿದ್ದು, ಕಳೆದ ಡಿ.26ರಂದು ಆತ ಆಕೆಯನ್ನು ತನ್ನ ಅಜ್ಜಿ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.
ಬಾಲಕಿ ಗರ್ಭವತಿ ಆಗುತ್ತಿದ್ದಂತೆ ಈ ವಿಚಾರವನ್ನು ತಿಳಿದ ಆರೋಪಿ ಆಕೆಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿರುವುದಾಗಿ ದೂರಿನಲ್ಲಿ ಅರೋಪಿಸಲಾಗಿದೆ.