ಇತ್ತೀಚಿನ ಕಳೆದ ಕೆಲವು ದಿನಗಳಿಂದ ಮೈಸೂರು ಜಿಲ್ಲೆಯಲ್ಲಿ ತಲೆನೋವಾಗಿ ಆಗಿ ಪರಿಣಮಿಸಿದ್ದ ಚಿರತೆ ಕಾಟ ಇದೀಗ ಬೆಂಗಳೂರಿಗೂ ವ್ಯಾಪಿಸಿದ್ದು ನಗರದ ನೈಸ್ ರಸ್ತೆ ಬಳಿ ಇರುವ ತುರಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ ಕಂಡು ಬಂದಿದೆ.
ನೈಸ್ ರಸ್ತೆಯ ಬಿಎಂ ಕಾವಲು ಅರಣ್ಯ ಪ್ರದೇಶದಲ್ಲಿ ಚಿರೆತ ಈ ಹಿಂದೆ ಜಿಂಕೆಯೊಂದನ್ನು ಬೇಟೆಯಾಡಿ ಸುದ್ದಿಯಲ್ಲಿತ್ತು ಅದೇ ರೀತಿ ಈಗ ಹಸುವಿನ ಕರುವೊಂದನ್ನು ಕೊಂದು ಹಾಕುವ ಮೂಲಕ ಮತ್ತೆ ಆ ಪ್ರದೇಶದಲ್ಲಿ ಚಿರತೆ ಕಾಟ ಶುರುವಾಗಿದೆ.
ಬಿಎಂಕಾವಲು ಬಳಿ ಇರುವ ಸಿದ್ದಯ್ಯನಪಾಳ್ಯದಲ್ಲಿ ನಾಗಣ್ಣ ಎಂಬುವವರಿಗೆ ಸೇರಿದ್ದ ಕರುವನ್ನ ಚಿರತೆ ಕೊಂದಿದ್ದು ನಂತರ ಹಸುವಿನ ಮೇಲೆ ದಾಳಿ ಮಾಡಲು ಯತನಿಸಿದೆ ಈ ವೇಳೆ ಎಚ್ಚರಗೊಂಡ ಮನೆಯವರು ಪಟಾಕಿ ಸಿಡಿಸಿ ಚಿರತೆಯನ್ನು ಓಡಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.