• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

‘ರಾಮನಗರದಲ್ಲಿ ಅಯೋಧ್ಯೆ’ ಮತಗಳಿಗಾಗಿ ಭಕ್ತರ ವೇಷ; ವಿಪಕ್ಷಗಳ ಮಾತಿಗೆ ಬಿಜೆಪಿ ಥಂಡಾ

Any Mind by Any Mind
December 29, 2022
in ಕರ್ನಾಟಕ, ರಾಜಕೀಯ
0
ಪಂಚಮಸಾಲಿ ವರ್ಸಸ್​​ ಕುರುಬ ಸಮುದಾಯ; ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ
Share on WhatsAppShare on FacebookShare on Telegram

ಬಿಜೆಪಿ ಪ್ರತಿಮೆ ನಿರ್ಮಾಣ ಮಾಡುವುದು, ದೇವಸ್ಥಾನ ಕಟ್ಟುವುದು, ದೇಶಭಕ್ತಿ ತೋರಿಸುವುದು. ಆ ಮೂಲಕ ಮತಳನ್ನು ಕೇಳುವುದು ಬಿಜೆಪಿ ಮಾಡಿಕೊಂಡು ಬಂದಿರುವ ರಾಜಕೀಯ ಹಿನ್ನೋಟ. ಆದರೆ ಇದೀಗ ಉತ್ತರ ಪ್ರದೇಶದ ಅಯೋಧ್ಯೆ ಮಾದರಿಯಲ್ಲೇ ರಾಮನಗರದ ರಾಮದೇವರ ಬೆಟ್ಟವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬೆಳಗಾವಿಯ ಸುವರ್ಣಸೌಧದಲ್ಲಿ ಹೇಳಿಕೆ ನೀಡಿದ್ದರು. ಈ ವಿಚಾರದಲ್ಲಿ ವಿರೋಧ ಪಕ್ಷಗಳು ವಿರೋಧಿ ಹೇಳಿಕೆ ನೀಡುತ್ತವೆ. ಆ ಮೂಲಕ ಇದನ್ನು ರಾಜಕೀಯಕ್ಕೆ ಬದಲಾಯಿಸಬಹುದು ಅನ್ನೋದು ಅಶ್ವತ್ಥನಾರಾಯಣ ಅವರ ಹೇಳಿಕೆ ಉದ್ದೇಶ ಇದ್ದಿರಬಹುದು. ಇಲ್ಲದಿದ್ದರೆ ಸುಖಾಸುಮ್ಮನೆ ರಾಮನಗರದ ರಾಮದೇವರ ಬೆಟ್ಟದ ವಿಚಾರ ಬೆಳಗಾವಿಯಲ್ಲಿ ಹೇಳುವ ಅವಶ್ಯಕತೆ ಏನೂ ಇರಲಿಲ್ಲ. ಆದರೆ ಅಶ್ವತ್ಥ ನಾರಾಯಣ ಊಹೆ ಮಾಡಿದಂತೆ ವಿಪಕ್ಷಗಳ ಪ್ರತಿಕ್ರಿಯೆ ಇರಲಿಲ್ಲ. ಎಲ್ಲವೂ ಅದಲು ಬದಲಾಯ್ತು. 

ADVERTISEMENT

ರಾಮನ ದೇವಸ್ಥಾನ, ಸೀತೆಯ ದೇವಸ್ಥಾನ ಎಲ್ಲವನ್ನೂ ಕಟ್ಟಲಿ..!

ಶ್ರೀರಾಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲಿರುವ ರಾಮನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯ ನಾಥ್ ಆಹ್ವಾನಿಸಿದ್ದೇವೆ. ಅಭಿವೃದ್ಧಿಗೆ ಮುಂದಿನ ಬಜೆಟ್​ನಲ್ಲಿ ಸಿಎಂ ಹಣ ಘೋಷಣೆ ಮಾಡುತ್ತಾರೆ. ಈ ಮೂಲಕ ರಾಮನಗರದ ರಾಮದೇವರ ಬೆಟ್ಟವನ್ನು ಹಿಂದೂ ಧಾರ್ಮಿಕ ಕೇಂದ್ರವನ್ನಾಗಿ ಮಾಡುತ್ತೇವೆ ಎಂದಿದ್ದಾರೆ ಸಚಿವ ಅಶ್ವತ್ಥ ನಾರಾಯಣ. ಸಚಿವರ ಮಾತಿಗೆ ಡಿ.ಕೆ ಶಿವಕುಮಾರ್​ ತಿರುಗೇಟು ನೀಡಿದ್ದು,. ಅಯೋಧ್ಯೆಯ ರಾಮ ಮಂದಿರವನ್ನಾದರೂ ಕಟ್ಟಲಿ, ಸೀತಾ ಮಂದಿರವನ್ನಾದರೂ ಕಟ್ಟಲಿ, ಬೇಕಿದ್ದರೆ ಅಶ್ವತ್ಥ ನಾರಾಯಣ ಮಂದಿರವನ್ನೇ ಕಟ್ಟಲಿ ನಾವು ವಿರೋಧ ಮಾಡುವುದಿಲ್ಲ ಎಂದಿದ್ದಾರೆ. 

3 ವರ್ಷದಿಂದ ಯಾಕೆ ಅಭಿವೃದ್ಧಿ ಮಾಡಲಿಲ್ಲ – ಕುಮಾರಸ್ವಾಮಿ ಪ್ರಶ್ನೆ

ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ತುಮಕೂರಿನ ಚಿಕ್ಕನಾಯಕನಹಳ್ಳಿ ಪಂಚರತ್ನ ಯಾತ್ರೆ ಹೆಚ್‌.ಡಿ ಕುಮಾರಸ್ವಾಮಿ ಮಾತನಾಡಿದ್ದು, ಇವರದ್ದೇ ಸರ್ಕಾರ ಇದೆ ಮೂರೂವರೆ ವರ್ಷದಿಂದ ಮಾಡದೆ ಇದ್ದವರು, ಇವಾಗ ಮಾಡ್ತಾರಾ…? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಮೂರು ತಿಂಗಳಿಗೆ  ಚುನಾವಣೆ ಬರ್ತಾ ಇದೆ. ಇವರನ್ನೇ ಜನ ಸರ್ಕಾರದಿಂದ ಹೊರಗೆ ಇಡುವ ಮನಸ್ಸಿನಲ್ಲಿದ್ದಾರೆ. ಇವಾಗ ರಾಮನಗರದಲ್ಲಿ ಮಂದಿರ ಕಟ್ಟುವ ಕೆಲಸ ಮಾಡ್ತೇವೆ ಅಂತಾ ಇವರು ಹೊರಟಿದ್ದಾರೆ. ನಮ್ಮ ರಾಜ್ಯ ದರಿದ್ರ ರಾಜ್ಯ ಅಲ್ಲ. ಯುಪಿ ಸಿಎಂ ಕರೆತಂದು ಇಲ್ಲಿ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾಧೀಶರನ್ನು ಕರೆತಂದು, ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೇ ಮಾಡುತ್ತೇನೆ. ಇವರೇನು ನನ್ನ ಕ್ಷೇತ್ರಕ್ಕೆ ಬಂದು ಮಾಡೋದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೇ ಮಂದಿರ ನಿರ್ಮಾಣ ಮಾಡಿಸುತ್ತೇನೆ. ನನಗೆ ದೇವರು ಇನ್ನು ಶಕ್ತಿ ಕೊಟ್ಟಿದ್ದಾನೆ ಎಂದು ಉಗ್ರವಾಗಿ ಟೀಕಿಸಿದ್ದಾರೆ. 

ರಾಜಕೀಯ ಕಾರಣಕ್ಕೆ ರಾಮಮಂದಿರ ಎನ್ನುತ್ತಿದ್ಯಾ ಬಿಜೆಪಿ..? 

ಡಿಕೆ ಶಿವಕುಮಾರ್​​​ ಸೇರಿದಂತೆ ರಾಮ ಮಂದಿರ  ನಿರ್ಮಾಣವನ್ನು ಸ್ವಾಗತ ಮಾಡಿದ್ದಾರೆ. ಆದರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​  ಅವರನ್ನು ಕರೆದುಕೊಂಡು ಚುನಾವಣೆಯಲ್ಲಿ ಲಾಭ ಪಡೆಯುವ ಹುನ್ನಾರ ಮಾಡಿದ್ಯಾ ಎನ್ನುವ ಅನುಮಾನ ಕಾಡದೆ ಇರದು. ಐದು ವರ್ಷ ಸರ್ಕಾರ ಇದ್ದಾಗಲೇ ಮಾಡ ಬಹುದಿತ್ತು. ಇನ್ನು ಅಧಿಕಾರಕ್ಕೆ ಬಂದು ಮೂರು ವರ್ಷದಿಂದಲೇ ಈ ಯೋಜನೆ ಜಾರಿ ಮಾಡಬಹುದಿತ್ತು. ಆದರೆ ಚುನಾವಣೆಗೂ ಮುನ್ನ ಯೋಜನೆಗಳನ್ನು ಜಾರಿ ಮಾಡ್ತೇವೆ ಎಂದು ಘೋಷಣೆ ಮಾಡುವುದು ಚುನಾವಣಾ ಗಿಮಿಕ್​ ಎನ್ನುವುದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಆದರೆ ಅಭಿವೃದ್ಧಿ ಕಾರ್ಯಗಳನ್ನು ತೋರಿಸಿ ಮತ ಕೇಳಬೇಕಿದ್ದ ಸರ್ಕಾರ, ಕೇವಲ ಭಾವನೆಗಳನ್ನು ಮುಂದಿಟ್ಟು ಮತ ಕೇಳುವುದು ವಿರೋಧ ಪಕ್ಷಗಳು ಹೇಳಿದಂತೆ ನಾಚಿಕೆಗೇಡಿನ ಸಂಗತಿಯೇ ಸರಿ. ಅಷ್ಟಕ್ಕೂ ಕೇವಲ ಭರವಸೆ ಕೊಡದೆ ಚುನಾವಣೆಗೂ ಮುನ್ನವೇ ಮಂದಿರವನ್ನು ನಿರ್ಮಾಣ ಮಾಡಿದರೆ ಅದನ್ನೂ ಒಪ್ಪಬಹುದು. ಆದರೆ ಮುಂದಿನ ಬಜೆಟ್​ನಲ್ಲಿ ಹಣ ಇಡುವುದು, ಅದಕ್ಕೂ ಮೊದಲೇ ಬೃಹತ್​ ಸಮಾವೇಶ ಮಾಡಿ ಪ್ರಚಾರ ಪಡೆಯುವುದು ಯಾವ ಲೆಕ್ಕ ಅಲ್ಲವೇ..?

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

D BOSS | PUNEETHRAJKUMAR: ಪುನೀತ್ ರಾಜಕುಮಾರ್ ಬಗ್ಗೆ ಮಾತಾಡಿದ್ರೆ ಅವರಿಗೆ ಧಿಕ್ಕಾರ ಧಿಕ್ಕಾರ… | Pratidhvani

Next Post

D BOSS | PUNEETHRAJKUMAR: ಫಿಲ್ಮ್ ಚೇಂಬರ್ ಎದುರು ಅಪ್ಪು ಫ್ಯಾನ್ಸ್ ಫೈಟ್ …! | Pratidhvani

Related Posts

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ
ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

by ಪ್ರತಿಧ್ವನಿ
April 9, 2026
0

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಬಾರಿ ರಾಜ್ಯವು...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
D BOSS | PUNEETHRAJKUMAR: ಫಿಲ್ಮ್ ಚೇಂಬರ್ ಎದುರು ಅಪ್ಪು ಫ್ಯಾನ್ಸ್ ಫೈಟ್ …! | Pratidhvani

D BOSS | PUNEETHRAJKUMAR: ಫಿಲ್ಮ್ ಚೇಂಬರ್ ಎದುರು ಅಪ್ಪು ಫ್ಯಾನ್ಸ್ ಫೈಟ್ ...! | Pratidhvani

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada