ಸಂಭಾವ್ಯ ನಾಲ್ಕನೇ ಅಲೆ ಕುರಿತು ಮಾತನಾಡುವ ವೇಳೆ ಯಾರು ಓವರ್ ಆಕ್ಷಿಂಗ್ ಮಾಡುವ ಅವಶ್ತಕತೆಯಿಲ್ಲ ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಓವರ್ ಆಕ್ಷಿಂಗ್ ಮಾಡದೆ ಜನಸ್ನೇಹಿ ನಿಲುವು ತಾಳಬೇಕು ಎಂದು ಹೇಳಿದ್ದಾರೆ.
ಆದರೆ ಯಾರು ಓವರ್ ಆಕ್ಟಿಂಗ್ ಮಾಡುತ್ತಿರುವವರು ಎಂದು ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಸಚಿವ ಅಶೋಕ್ ನಾನೇ ಓವರ್ ಆಕ್ಷಿಂಗ್ ಮಾಡುತ್ತಿರುವುದು ಎಂದು ಹೇಳಿ ನುಣುಚಿಕೊಂಡರು.
ಕೋವಿಡ್ ತಡೆಗೆ ಸಂಬಂಧಿಸಿದಂತೆ ಸಚಿವ ಸುಧಾಕರ್ ನೇತೃತ್ವದಲ್ಲಿ ಸಲಹಾ ಸಮಿತಿ ಸಭೆ ನಡೆಯಲಿದ್ದು ನೂತನ ಮಾರ್ಗಸೂಚಿ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.