ಸರ್ಕಾರದ ಶೇ.30 ರಷ್ಟು ಆದಾಯ ಮೂಲವು ತಮ್ಮಿಂದಲ್ಲೇ ಬರುತ್ತಿರುವುದರಿಂದ ತಮ್ಮಗೂ ವಿಶೇಷ ಸವಲತ್ತು ನೀಡಬೇಕೆಂದು ಮದ್ಯಪಾನ ಪ್ರಿಯರು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮದ್ಯಪಾನ ಪ್ರಿಯರು ಸರ್ಕಾರ ನಮ್ಮಂತವರಿಗೆ ಇಲ್ಲಿಯವರೆಗೂ ಯಾವುದೇ ತರಹದ ಸೌಲಭ್ಯವನ್ನ ನೀಡಿಲ್ಲ ಕರ್ನಾಟಕ ಸರ್ಕಾರವು ಮದ್ಯದಿಂದ ಬರುತ್ತಿರುವ ಶೇ 30ರಷ್ಟು ಲಾಭದಿಂದ ನಡೆಯುತ್ತಿದೆ ಆದ್ದರಿಂದ ನಮ್ಮಗೂ ವಿಶೇಷ ಸವಲತ್ತುಗಳನ್ನು ನೀಡಬೇಕೆಂದು ಸುದ್ದಿಗೋಷ್ಠಿಯಲ್ಲಿ ವಿನಂತಿಸಿದ್ದಾರೆ.
ನಮ್ಮಗೆ ಪ್ರತಿ ಬಾಟಲಿ ಮೇಲೆ 1 ಲಕ್ಷ ರೂಪಾಯಿಗಳ ಜೀವ ವಿಮೆ ಮಾಡಿಸಬೇಕು, ನಾವು ಮನೆಯಲ್ಲಿ ಕುಡಿದು ಕೆಲವೊಮ್ಮೆ ಮನೆಯಲ್ಲಿ ಗಲಾಟೆ ಮಾಡುವ ಕಾರಣ ನಮ್ಮ ಮಕ್ಕಳಿಗೆ ಸರ್ಕಾರಿ ವಸತಿ ನಿಲಯಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡಬೇಕು, ಪ್ರತ್ಯೇಕ ನಿಗಮ ಸ್ಥಾಪಿಸಿ ಪ್ರತಿ ವರ್ಷ 1 ಲಕ್ಷ ಮನೆಗಳನ್ನ ನೀಡಬೇಕು, ಜೊತೆಗೆ ಆರೋಗ್ಯ ಹದಗೆಟ್ಟಾಗ ಸರ್ಕಾರದಿಂದ ಚಿಕಿತ್ಸಾ ವೆಚ್ಚವೆಂದು 4-5 ಲಕ್ಷ ರೂಅಪಯಿಗಳನ್ನ ಭರಿಸಬೇಕು.

ಮೂರು ತಿಂಗಳಿಗೊಮ್ಮೆ ಹೋಬಳಿ-ತಾಲ್ಲೂಕು ಮಟ್ಟದಲ್ಲಿ ಆರೋಗ್ಯ ತಪಾಸಣೆ ಮಾಡಿಸಬೇಕು ಮತ್ತು ಬಾರ್‌ಗಳಲ್ಲಿ ನಮ್ಮಗೆ ಕುಡಿಯಲು ಸ್ವಚ್ಚಂದ ನೀರು ಕೊಡಬೇಕು, ಶೌಚಾಲಯಗಳಲ್ಲಿ ಸುಚುತ್ವವನ್ನ ಕಾಪಾಡಬೇಕು ಮತ್ತು ನಮ್ಮಗಾಗಿ ವಿಶ್ರಾಂತಿಸಲು ಪ್ರತ್ಯೇಕ ಜಾಗವನ್ನ ಮೀಸಲಿಡಬೇಕು ಎಂದು ಹೇಳುತ್ತಾ ಹಲವು ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದ್ದಾರೆ.
ಮದ್ಯಪಾನ ಪ್ರಿಯರ ಈ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಮುಂದಿನ ದಿನಗಳಲ್ಲಿ ಹೇಗೆ ಸ್ಪಂದಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ.










