ಕನ್ನಡ ನೆಲ, ಜಲ ಭಾಷೆಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಕನ್ನಡಿಗರ ಸಮಸ್ಯೆಗಳನ್ನ ಸಮ್ಮೇಳನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾಂವಿ ಪಟ್ಟಣ್ಣದಲ್ಲಿ ಶಿವಾಜಿ ಮಹಾರಾಜರ ಭನವದ ಶಂಕು ಸ್ಥಾಪನೆ ನೆರವೇರಿಸಿ ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಏಲ್ಲಕ್ಕಿ ನಾಡಿನ ಸಬಗನ್ನು ಪಸರಿಸುವಂತೆ ಹೇಳಿದ್ದಾರೆ.
ಸಮ್ಮೇಳವನ್ನು ಯಶಸ್ವಿಯಾಗಿ ನಡೆಸಬೇಕು ಎಲ್ಲೆಡೆ ಕನ್ನಡದ ಕಂಪು ಹರಡಬೇಕು ಇತರೆ ಸಮ್ಮೇಳನಕ್ಕಿಂತ ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಉತ್ಕೃಷ್ಟವಾಗಿರಬೇಕು ಎಂದು ಕರೆ ಕೊಟ್ಟಿದ್ದಾರೆ.