ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯೂ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿದ್ದು ಯಾತ್ರೆಗೆ ಅದ್ದೂರಿ ಜನಬೆಂಬಲ ದೊರೆತಿದೆ.
ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ್ಣದ KRSನಲ್ಲಿ ಈ ಕುರಿತು ಮಾತನಾಡಿರುವ ಹೆಚ್.ಡಿ.ಕೆ ಕಳೆದ ಬಾರಿ ಮಂಡ್ಯ ಜಿಲ್ಲೆಯ ಜನತೆ 7 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಿಸಿದ್ದಾರೆ ಈ ಬಾರಿಯೂ ಜನರು 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸುತ್ತಾರೆ ಹೆಚ್ಚಿನ ಬಹುಮತದಲ್ಲಿ ಜನರು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಸಂಭಾವ್ಯ ಕೋವಿಡ್ ನಾಲ್ಕನೇ ಅಲೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಕೊರೋನಾ ವಿಚಾರದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅದರ ಕರ್ತವ್ಯ ಆದರೆ ರಾಜ್ಯದಲ್ಲಿ ತುಂಬಾ ಆತಂಕ ಪಡುವ ಆಗತ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಬಗ್ಗೆ ಪ್ರತಿಕ್ರಿಯಿಸಿ ಅವರು ಅವರ ಪಕ್ಷಕ್ಕೆ ಮತ ಹಾಕಿ ಅಂತಾ ಹೇಳುವುದು ತಪ್ಪಿಲ್ಲ ರಾಜ್ಯದಲ್ಲಿ ಬಹಳ ಜನ ಸಿಎಂ ಆಗ್ತೀನಿ ಅಂತಾ ಆಸೆ ಪಟ್ಟಿದ್ದಾರೆ ಯಾರು ಸಿಎಂ ಆಗಬೇಕೆಂದು ಜನರು ನಿರ್ಧಾರ ಮಾಡಬೇಕು ದೇವರ ಇಚ್ಚೆ ಹಾಗೂ ಜನರ ತೀರ್ಮಾನ ಏನು ಇದೆ ಎಂದು ಕಾದು ನೋಡಬೇಕಿದೆ.
ಇನ್ನು ಕೇಮದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯಗೆ ಭೇಟಿ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಅಮಿತ್ ಶಾ ಬರುವುದು ಆಶ್ಚರ್ಯವಿಲ್ಲ ಇನ್ನೂ ಮೂರು ತಿಂಗಳು ಕರ್ನಾಟಕಕ್ಕೆ ಅಮಿತ್ ಶಾ, ಮೋದಿ ಎಲ್ಲಾ ಬರಬಹುದು ಹೀಗಾಗಲೇ ಕೇಂದ್ರ ಸರ್ಕಾರದ ಮಂತ್ರಿಗಳ ದಂಡು ಬರ್ತಾ ಇದೆ. ಅಮಿತ್ ಶಾ, ಮೋದಿ ಚುನಾವಣೆಗಾಗಿ ಬರ್ತಾ ಇದ್ದಾರೆ ಅವರು ಕರ್ನಾಟಕದ ಅಭಿವೃದ್ಧಿಗೆ ಬರ್ತಾ ಇಲ್ಲ ಕರ್ನಾಟಕದ ಜನತೆಯ ಸಮಸ್ಯೆ ಬಗೆಹರಿಸಲು ಅವರು ಬರಲ್ಲ ಚುನಾವಣೆಯಲ್ಲಿ ಮತ ಕೇಳಲು ಅವರು ಬರ್ತಾ ಇದ್ದಾರೆ ಎಂದು ಟೀಕಿಸಿದ್ದಾರೆ.