ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಭಾಷಣದಲ್ಲಿ ಮಾತನಾಡುತ್ತಾ, ನನಗೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ದಿನಕ್ಕೆ ಹತ್ತು ಘಂಟೆ ಪಂಚರತ್ನ ರಥಯಾತ್ರೆಯಲ್ಲಿ ನಿಂತುಕೊಂಡೇ ಜನರನ್ನು ಮಾತನಾಡಿಸುತ್ತಿದ್ದೇನೆ. ಹಲವಾರು ಮಂದಿ ನಿನ್ನ ಆರೋಗ್ಯ ಮುಖ್ಯ ಅಂತ ಹೇಳುತ್ತಿದ್ದಾರೆ ಎಂದು ಹೇಳಿದರು.
ಮಂಡ್ಯ: ನಾನು ಯಾವುದೇ ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿಲ್ಲ. ಬಹುಕೋಟಿ ವ್ಯವಹಾರದ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಹತ್ತಾರು ಶಾಪಿಂಗ್ ಮಾಲ್ ಕಟ್ಟಿ ಕೋಟಿ ಕೋಟಿ ಲಾಭ ಬರುವ ಹಾಗೆ ಮಾಡಿಕೊಂಡಿಲ್ಲ. ಆದರೂ ಕಷ್ಟ ಎಂದು ನನ್ನ ಬಳಿ ಬರುವ ಜನರ ನೋವಿಗೆ ಕೈಲಾದಷ್ಟು ಸ್ಪಂದಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾ, ಇತರೆ ಪಕ್ಷಗಳ ಕೆಲವು ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಭಾಷಣದಲ್ಲಿ ಮಾತನಾಡುತ್ತಾ, ನನಗೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ದಿನಕ್ಕೆ ಹತ್ತು ಘಂಟೆ ಪಂಚರತ್ನ ರಥಯಾತ್ರೆಯಲ್ಲಿ ನಿಂತುಕೊಂಡೇ ಜನರನ್ನು ಮಾತನಾಡಿಸುತ್ತಿದ್ದೇನೆ. ಹಲವಾರು ಮಂದಿ ನಿನ್ನ ಆರೋಗ್ಯ ಮುಖ್ಯ ಅಂತ ಹೇಳುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪುತ್ರ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಾ, ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ, ಕುಮಾರಣ್ಣ ಸಿಎಂ ಆಗುವುದು ಅಷ್ಟೇ ಸತ್ಯ. ಕುಮಾರಣ್ಣ ಅವರಿಗೆ 64 ವರ್ಷ ವಯಸ್ಸಾಗಿದೆ. ಇದು ಅವರ ಚಿಕ್ಕ ವಯಸ್ಸಲ್ಲ. ಹೀಗಿದ್ದೂ ಇಂದಿಗೂ ನಿತ್ಯ 20 ತಾಸು ಕೆಲಸ ಮಾಡುತ್ತಿದ್ದಾರೆ ಎಂದರು.
ಹೋದಲ್ಲೆಲ್ಲಾ ರಾಜ್ಯದ ಜನರು ಕುಮಾರಸ್ವಾಮಿ ಅವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಪಂಚರತ್ನ ಯಾತ್ರೆಗೆ ಸೇರುತ್ತಿರುವ ಜನ 2023 ಚುನಾವಣೆ ದಿಕ್ಸೂಚಿಯಾಗಿದೆ. ಇದರಿಂದ 2023ರಲ್ಲಿ ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ರಚಿಸುವ ಭರವಸೆ ಜೆಡಿಎಸ್ಗೆ ಮೂಡಿದೆ ಎಂದು ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದರು