• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಕ್ರಾಂತಿ ಪ್ರಮೋಷನ್‌; ಡಿಬಾಸ್‌ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್‌

ಪ್ರತಿಧ್ವನಿ by ಪ್ರತಿಧ್ವನಿ
December 20, 2022
in ಸಿನಿಮಾ
0
ಕ್ರಾಂತಿ ಪ್ರಮೋಷನ್‌; ಡಿಬಾಸ್‌ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್‌
Share on WhatsAppShare on FacebookShare on Telegram

ಚಾಲೆಂಜಿಂಗ್‌ ಸ್ಟಾರ್‌ ಡಿ ಬಾಸ್‌ ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ಕ್ರಾಂತಿ ಚಿತ್ರವು ಈಗಾಗಲೇ ಟೈಟಲ್‌, ಟೀಸರ್‌ ಹಾಗೂ ಹಾಡುಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ.

ADVERTISEMENT

ಇನ್ನು ಭಾನುವಾರ ಹೊಸಪೇಟೆಯಲಿ ಚಿತ್ರದ ಬೊಂಬೆ ಹಾಡು ಬಿಡುಗಡೆ ಸಮಾರಂಭವನ್ನ ಚಿತ್ರತಂಡ ಹಮ್ಮಿಕೊಳ್ಳಲಾಗಿತ್ತು ಸಮಾರಂಭದ ವೇಳೆ ಅಪ್ಪು ಅಭಿಮಾನಿಗಳು ದರ್ಶನ್‌ ವಿರುದ್ದ ಆಕ್ರೋಶವನ್ನ ಹೊರಹಾಕಿದ್ದರು ಈ ವೇಳೆ ಕಿಡಿಗೇಡಿಯೋರ್ವ ದರ್ಶನ್‌ ಮೇಲೆ ಚಪ್ಪಲಿ ಎಸೆದು ವಿಕೃತಿ ಮೆರೆದಿದ್ದಾನೆ. ಇನ್ನು ಈ ಘಟನೆ ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದ್ದು ಸ್ಯಾಂಡಲ್‌ವುಡ್‌ ಸಿನಿ ಮಂದಿ ದಾಸನ ಬೆನ್ನಿಗೆ ನಿಂತಿದ್ದಾರೆ.

ಒಬ್ಬ ಲೈಟ್ ಬಾಯ್ ನಿಂದ ಇಲ್ಲೀ ತನಕ ಬೆಳೆದು ಬಂದಿರೋ ಹಾದಿ ಅದೆಷ್ಟೋ ಮನಸುಗಳಿಗೆ ಸ್ಪೂರ್ತಿ. ಯಾರಿಗೂ ಗೊತ್ತಾಗದ ರೀತಿ ಮಾಡಿರುವ ಅದೆಷ್ಟೋ ದಾನ ಧರ್ಮಗಳು, ಮೂಕ ಪ್ರಾಣಿಗಳ ಮೇಲಿರುವ ಪ್ರೀತಿ, ರೈತರ ಮೇಲಿನ ಪ್ರೀತಿ, ತನ್ನ ಜೀವನದ ಯಾವುದೇ ಹಂತದಲ್ಲೂ ಕನ್ನಡದ ಬಗ್ಗೆ ಇರುವ ಗೌರವವನ್ನು ಬಿಟ್ಟು ಕೊಡದ ವ್ಯಕ್ತಿ. ನಡೆದ ಘಟನೆ, ಆದ ಅಗೌರವ ಅಪಾರವಾದ ನೋವು ತಂದಿದೆ. ಇದು ಖಂಡನೀಯ ಕೇಡು ತಾಕದ ಮನುಜನ ಹಿಂದೆ ನಾವೆಂದಿಗೂ ಇರುತ್ತೇವೆ ಎಂದು ನಿರ್ಮಾಪಕ ಉಪಾತಿ ಶ್ರೀನಿವಾಸ್‌ ಘಟನೆಯನ್ನು ಖಂಡಿಸಿದ್ದಾರೆ.

ಹೊಸಪೇಟೆಯಲ್ಲಿ ನಡೆದ ಅಹಿತಕರ ಘಟನೆ ಅಕ್ಷರಶಃ ಖಂಡನೀಯ ರಾಜನಿಗೆ ಇಡೀ ರಾಜ್ಯವೇ ಬಲವಾಗಿರುವಾಗ ಇದೆಲ್ಲ ತೃಣ ನಿಮ್ಮ ಜೊತೆ ನಾವಿದ್ದೇವೆ ಸರ್‌ ನೀವು ಬಲವಂತ ಕೆಂಡದಿಂದ ಎದ್ದು ಬಂದು ಮಹಾಗ್ನಿಯಾಗಲು ಇಲ್ಲಿ ನಿಮ್ಮ ಅಭಿಮಾನಿಗಳ ಸೈನ್ಯವೇ ನಿಮ್ಮ ಬಲವಾಗಿದೆ ಎಂದು ಗಾಯಕ ಹೇಮಂತ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬಿರುಗಾಳಿ ಎದುರು ನಗುವಂತ ದೀಪ ನೋವನ್ನು ಮರೆಸೋ ಮಗುವಂತ ರೂಪ.. ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಎಂದು ನಿರ್ದೇಶಕ ತುರಣ್‌ ಸುಧೀರ್‌ ಬರೆದುಕೊಂಡಿದ್ದಾರೆ.

ಬಿರುಗಾಳಿ ಎದುರು ನಗುವಂತ ದೀಪ
ನೋವನ್ನು ಮರೆಸೋ ಮಗುವಂತ ರೂಪ..
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ.. 🙏
We Love you #DBoss ❤ @dasadarshan#WeStandWithDboss pic.twitter.com/6sfpjBWK4T

— Tharun Sudhir (@TharunSudhir) December 19, 2022

ನಿಮಗೆ ಚಪ್ಪಲಿ ಎಸೆದು ಅವಮಾನ ಮಾಡಿದವರು ಯಾರೇ ಆಗಿರಲಿ, ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಭಾಯಿಜಾನ್ ನಿಮ್ಮೊಂದಿಗೆ ನಾವಿದ್ದೇವೆ ಎಂದು ನಟ ನೆನಪಿರಲಿ ಪ್ರೇಮ್‌ ಘಟನೆಯನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ.

ನಿಮಗೆ ಚಪ್ಪಲಿ ಎಸೆದು ಅವಮಾನ ಮಾಡಿದವರು ಯಾರೇ ಆಗಿರಲಿ, ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು.
ಭಾಯಿಜಾನ್ ನಿಮ್ಮೊಂದಿಗೆ ನಾವಿದ್ದೇವೆ
WE LOVE U ALWAYS @dasadarshan @Dcompany171 pic.twitter.com/EhnFkLJ3Zc

— Prem Nenapirali (@StylishstarPrem) December 19, 2022

ಒಬ್ಬ ಅಭಿಮಾನಿಯಾಗಿ , ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ನಟಿ ಪ್ರಣೀತಾ ಟ್ವೀಟ್‌ ಮಾಡಿದ್ದಾರೆ.

ಒಬ್ಬ ಅಭಿಮಾನಿಯಾಗಿ ,
ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ.

I condemn the incident that has taken place in Hospete. Strict action must be taken on the perpetrators. @dasadarshan sir ,
ನಿಮ್ಮೊಂದಿಗೆ ನಾವಿದ್ದೇವೆ ! pic.twitter.com/17SMMFwIva

— Pranitha Subhash (@pranitasubhash) December 20, 2022

ನಟ ಧನ್ವೀರ ಡಿ ಬಾಸ್‌ ಜೊತೆಗಿರುವ ಫೋಟೋ ಒಂದನ್ನು ಪೋಸ್ಟ್‌ ಮಾಡಿ ಘಟನೆಯನ್ನು ಖಂಡಿಸಿದ್ದಾರೆ.

ಇದು ಇಡೀ ಚಿತ್ರರಂಗವೇ ತಲೆ ತಗ್ಗಿಸುವಂತ ಸುದ್ದಿ. ಅಂತಹ ಕೃತ್ಯ ಮಾಡಿದವನು ಮತ್ತೊಬ್ಬರ ಅಭಿಮಾನಿಯೆಂಬ ಮಾತಿರಲಿ, ಕನಿಷ್ಟ ಮನುಷ್ಯನೂ ಆಗಿರಲಾರ. ಎಲ್ಲರನ್ನೂ ಪ್ರೀತಿಸುವ ಗುಣ ಎಲ್ಲರಲ್ಲಿಯೂ ಇರುವುದಿಲ್ಲ ನಿಜ, ಆದರೆ ಯಾರನ್ನಾದರೂ ದ್ವೇಷಿಸುವ ಮುನ್ನ ನಾವೆಷ್ಟು ಸರಿ ಇದ್ದೇವೆ ಎಂಬುದನ್ನ ಯೋಚಿಸಬೇಕಾಗುತ್ತದೆ.

ಇದನ್ನೆಲ್ಲಾ ಸಹಿಸಿ ಮತ್ತಷ್ಟು ಗಟ್ಟಿಯಾಗುವ ಶಕ್ತಿ ದರ್ಶನ್ ಸರ್ ಗೆ ಖಂಡಿತಾ ಇದೆ. ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳ ಶ್ರೀರಕ್ಷೆ ಇದೆ. ಅವರ ಅಭಿಮಾನಿಗಳಲ್ಲೊಬ್ಬನಾಗಿ ನಾನು ಅವರೊಂದಿಗಿದ್ದೇನೆ. ಇಂತಹವು ಕನ್ನಡ ನೆಲದಲ್ಲಿ ಮರುಕಳಿಸದಿರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್‌.ಕೆ.ಆರ್‌.ಪೇಟೆ ಬರೆದುಕೊಂಡಿದ್ದಾರೆ.

It’s absolutely disheartening to see what has happened!He’s earned his position & popularity with immense hardwork. No one should go through this. He will come out stronger though. That’s his spirit. #westandwithdarshan @dasadarshan #WeStandWithDboss @dasadarshan #DBoss #kranti pic.twitter.com/E70OvSvmNg

— Anu Prabhakar Mukherjee (@AnuPrabhakar9) December 19, 2022

He’s worked his way up and earned every bit of it . U May not like him , but many more love him . #appu❤️would condemn this too. Have insulted the whole actors fraternity #WeStandWithDboss @dasadarshan #krati will be an answer 💥 power to u #DBoss pic.twitter.com/rwiQ7sTfJ0

— Raghu mukherjee (@RaghuMukherjee) December 19, 2022

ಒಬ್ಬ ಲೈಟ್ ಬಾಯ್ ನಿಂದ ಇಲ್ಲೀ ತನಕ ಬೆಳೆದು ಬಂದಿರೋ ಹಾದಿ ಅದೆಷ್ಟೋ ಮನಸುಗಳಿಗೆ ಸ್ಪೂರ್ತಿ. ಯಾರಿಗೂ ಗೊತ್ತಾಗದ ರೀತಿ ಮಾಡಿರುವ ಅದೆಷ್ಟೋ ದಾನ ಧರ್ಮಗಳು, ಮೂಕ ಪ್ರಾಣಿಗಳ ಮೇಲಿರುವ ಪ್ರೀತಿ, ರೈತರ ಮೇಲಿನ ಪ್ರೀತಿ, ತನ್ನ ಜೀವನದ ಯಾವುದೇ ಹಂತದಲ್ಲೂ ಕನ್ನಡದ ಬಗ್ಗೆ ಇರುವ ಗೌರವವನ್ನು ಬಿಟ್ಟು ಕೊಡದ ವ್ಯಕ್ತಿ. ನಡೆದ ಘಟನೆ, ಆದ ಅಗೌರವ ಅಪಾರವಾದ ನೋವು ತಂದಿದೆ. ಇದು ಖಂಡನೀಯ. ಎಲ್ಲರೂ ಮೊದಲು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Previous Post

ರಮೇಶ್ ಜಾರಕಿಹೊಳಿ-ಈಶ್ವರಪ್ಪ ನನ್ನ ಸಂಪರ್ಕದಲ್ಲಿದ್ದಾರೆ : ಸಿಎಂ ಬೊಮ್ಮಾಯಿ

Next Post

BL Santhosh : ಬಿಜೆಪಿಯವರು ಮನುಷ್ಯತ್ವ ಮರೆತು ರಾಜಕಾರಣ ಮಾಡುತ್ತಿದ್ದಾರೆ | Pratidhvani

Related Posts

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
ಸಿನಿಮಾ

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

by ಪ್ರತಿಧ್ವನಿ
May 14, 2026
0

ಬೆಂಗಳೂರು: ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೇ 13ರ ಮುಂಜಾನೆ ಹೃದಯಾಘಾತದಿಂದ ಅವರು...

Read moreDetails
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

May 5, 2026
ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

May 5, 2026
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

May 2, 2026
Next Post

BL Santhosh : ಬಿಜೆಪಿಯವರು ಮನುಷ್ಯತ್ವ ಮರೆತು ರಾಜಕಾರಣ ಮಾಡುತ್ತಿದ್ದಾರೆ | Pratidhvani

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada