ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೆಹ್ರೌಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಪ್ರಕರಣದಲ್ಲಿ ಮಹತ್ವದ ತಿರುವುದು ದೊರೆತಿದೆ.
ಹತ್ಯೆಯಾದ ಯುವತಿ ಶ್ರದ್ದಾ ವಾಲ್ಕರ್(26)ರನ್ನು ಪ್ರಿಯಕರ 35 ತುಂಡುಗಳನ್ನಾಗಿಸಿ ಆಕೆಯ ದೇಹದ ಭಾಗಗಳನ್ನ ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆಯಲಾಗಿತ್ತು. ಸ್ಥಳ ಮಹಜರು ವೇಳೆ ಸಿಕ್ಕಿದ್ದ ಮೂಳೆಗಳನ್ನ ಪರಿಶೀಲಿಸಿದಾಗ ಶ್ರದ್ದಾ DNAಯೂ ಅವರ ತಂದೆ ವಿನೋದ್ ವಾಲ್ಕರ್ DNA ಜೊತೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರೀಯ ಸುದ್ದಿ ಸಂಸ್ಥೆ ANI ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದ್ದು ಆರೋಪಿ ಪ್ರಿಯಕರ ಅಫ್ತಾಬ್ ಪೂನಾವಾಲಾ ವಿರುದ್ದ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದೆ.






