• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕಾಂಗ್ರೆಸ್​ ಅನುಭವಿಸಿದ ಹಿನ್ನಡೆ ಬಿಜೆಪಿಗೂ ಎದುರಾಗ್ತಿದೆ.. ಮಾಡಿದುಣ್ಣೋ ಮಹರಾಯ..

Any Mind by Any Mind
December 12, 2022
in ಕರ್ನಾಟಕ, ರಾಜಕೀಯ
0
ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ :  ಕಾಂಗ್ರೆಸ್‌
Share on WhatsAppShare on FacebookShare on Telegram

ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುನ್ನಲೆಗೆ ಬಂದಿತ್ತು. ನೂರಾರು ಸಮಾವೇಶಗಳನ್ನು ನಡೆಸಿದ್ದ ಲಿಂಗಾಯತ ಸಮುದಾಯದ ನಾಯಕರು ಪ್ರತ್ಯೇಕ ಧರ್ಮ ಮಾನ್ಯತೆ ಕೊಡಬೇಕು ಅನ್ನೋ ಮನವಿ ಕೊಟ್ಟಿದ್ದರು. ಸಮುದಾಯದ ಮನವಿಯನ್ನು ಸ್ವೀಕಾರ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಕೇಂದ್ರ ಸರ್ಕಾರದ ಪರಿಶೀಲನೆಗೆ ರವಾನೆ ಮಾಡಿತ್ತು. ಇದು ಕೇಸರಿ ಪಾಳಯಕ್ಕೆ ಚುನಾವಣಾ ಅಸ್ತ್ರದಂತೆ ಸಿಕ್ಕಿತ್ತು. ಸ್ವತಃ ಕಾಂಗ್ರೆಸ್​ ನಾಯಕರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವಾರು ನಾಯಕರು ಸ್ವಯಂ ಕಾಂಗ್ರೆಸ್​ ಸರ್ಕಾರದ ನಿರ್ಧಾರವನ್ನು ಟೀಕೆ ಮಾಡಿದ್ದರು. ಅದರ ವಿರುದ್ಧವಾಗಿ ಸಭೆ ಸಮಾರಂಭಗಳನ್ನು ಮಾಡಿದ್ದರು. ಇದೀಗ ಅದೇ ಪರಿಸ್ಥಿತಿ ಬಿಜೆಪಿ ಸರ್ಕಾರಕ್ಕೆ ಎದುರಾಗಿದೆ.

ADVERTISEMENT

ಪಂಚಮಸಾಲಿ ಮೀಸಲಾತಿ ಹೋರಾಟದ ಸಂಕಷ್ಟ..!

ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಮೂಲಕ ಕಾಂಗ್ರೆಸ್​ ಧರ್ಮವನ್ನು ಹೊಡೆಯುವ ಕೆಲಸ ಮಾಡ್ತಿದೆ ಎಂದು ರಾಜಕೀಯವಾಗಿ ಬಳಸಿಕೊಂಡು ವೀರಶೈವರು ಹಾಗು ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಗಳ ಮತಗಳನ್ನು ಕ್ರೂಢೀಕರಿಸಿದ್ದ ಬಿಜೆಪಿಗೆ ಪಂಚಮಸಾಲಿಗಳ ಮೀಸಲಾತಿ ಹೋರಾಟ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಡಿಸೆಂಬರ್​ 22ರ ಒಳಗಾಗಿ ಮೀಸಲಾತಿ ಘೋಷಣೆ ಮಾಡಬೇಕು ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮಿ ಆಗ್ರಹ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 2ಎ ಮೀಸಲಾತಿ ಘೋಷಣೆ ಮಾಡಿದರೆ ಡಿಸೆಂಬರ್​ 23 ರಂದು ನಡೆಯುವ ವಿರಾಟ್​ ಪಂಚ ಶಕ್ತಿ ಸಮಾವೇಶದಲ್ಲಿ ಅಭಿನಂದನೆ ಸಲ್ಲಿಸಲಾಗುವುದು. ಸರ್ಕಾರ ಮೀಸಲಾತಿ ನೀಡದಿದ್ದರೆ ಬೆಳಗಾವಿ ಸುವರ್ಣಸೌಧದ ಎದುರು ಬೃಹತ್​ ಪ್ರತಿಭಟನೆ ಮಾಡಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಪಂಚಮಸಾಲಿ ಒಗ್ಗಟ್ಟು ಮುರಿಯಲು ಸರ್ಕಾರದ ಸರ್ಕಸ್​..!

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಜಯಮೃತ್ಯುಂಜಯ ಸ್ವಾಮೀಜಿ ಜೊತೆಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇನ್ನೊಂದು ಕಡೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಮುರುಗೇಶ್​​ ನಿರಾಣಿ ದಾವಣಗೆರೆ ಹರಿಹರ ಪೀಠದ ವಚನಾನಂದ ಶ್ರೀಗಳ ಜೊತೆಗೆ ಪಂಚಮಸಾಲಿಗಳ ಹೋರಾಟವನ್ನು ಇಬ್ಭಾಗ ಮಾಡಿದ್ದಾರೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡಬೇಕು ಎಂದು ಹೇಳಿಕೊಳ್ಳುತ್ತಲೇ ಬೇರೊಂದು ಮಾರ್ಗದಲ್ಲಿ ಬರುತ್ತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿಯನ್ನು ಪರೋಕ್ಷವಾಗಿ ಹಿಯ್ಯಾಳಿಸುತ್ತಾ, ಬಸನಗೌಡ ಪಾಟೀಲ್​ ಯತ್ನಾಳ್​​ರನ್ನು ಟೀಕಿಸುತ್ತಾ ವಚನಾನಂದ ಶ್ರೀಗಳು ಸರ್ಕಾರದ ಪರವಾಗಿಯೇ ಮಾತನಾಡುತ್ತಿದ್ದಾರೆ.

ಯತ್ನಾಳ್​​ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ..!

ಬಸನಗೌಡ ಪಾಟೀಲ್​ ಯತ್ನಾಳ್​ ಬಿಜೆಪಿ ಪಕ್ಷದ ವಿರುದ್ಧವೇ ಹೋರಾಟ ರೂಪಿಸಿದ್ದಾರೆ. ಇದನ್ನು ತಡೆಯಲು ಮುರುಗೇಶ್​ ನಿರಾಣಿಯನ್ನು ಬಳಸಿಕೊಂಡಿರುವ ಸರ್ಕಾರ ವಚನಾನಂದ ಶ್ರೀಗಳನ್ನು ಜಯಮೃತ್ಯುಂಜಯ ಶ್ರೀಗಳ ಹೋರಾಟದಿಂದ ಹೊರಕ್ಕೆ ಕರೆದುಕೊಂಡು ಬಂದಿದೆ. ವಚನಾನಂದ ಶ್ರೀಗಳು ಮಾತನಾಡಿ, ಪಂಚಮಸಾಲಿಗಳಿಗೆ ರಾಜ್ಯ ಸರ್ಕಾರ 2ಎ ಮೀಸಲಾತಿ ನೀಡುತ್ತದೆ. ಅದೇ ಕಾರಣಕ್ಕೆ ವಿರೋಧ ಪಕ್ಷಗಳು ಅವಕಾಶ ಕೊಡಬೇಕು ಅನ್ನೋ ಕಾರಣಕ್ಕೆ ನಾನು ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಹಾಗು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಕಾಂಗ್ರೆಸ್​​ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ.

ಪಂಚಮಸಾಲಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ..!

ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡದಿದ್ದರೆ ಜಯಮೃತ್ಯುಂಜಯ ಸ್ವಾಮೀಜಿ ಟೀಂ ಸರ್ಕಾರದ ವಿರುದ್ಧ ಅಧಿವೇಶನದ ವೇಳೆ ಬೃಹತ್​ ಹೋರಾಟ ನಡೆಸಲಿದೆ. ಮತ್ತೊಂದು ಕಡೆ ಮೀಸಲಾತಿ ಕೊಟ್ಟರೆ ಎರಡೂ ಕಡೆಯವರನ್ನು ಸಮಾಧಾನ ಮಾಡಬಹುದು ಅನ್ನೋದು ಸರ್ಕಾರದ ಉದ್ದೇಶ ಆಗಿರಬಹುದು. ಒಂದು ವೇಳೆ ಮೀಸಲಾತಿ ಪ್ರಮಾಣ ಬೆಟ್ಟದಂತೆ ಬೆಳೆಯುತ್ತಿರುವ ಕಾರಣ ಸುಪ್ರೀಂಕೋರ್ಟ್​ಗೆ ಯಾರಾದ್ರೂ ಅರ್ಜಿ ಹಾಕಿದಾಗ ಮೀಸಲಾತಿಗೆ ತಡೆ ಸಿಗಬಹುದು. ಅಥವಾ ಪಂಚಮಸಾಲಿಗಳ ಬೆನ್ನಲ್ಲೇ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿಗೆ ಹಕ್ಕೊತ್ತಾಯ ಮಾಡಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ, ಒಕ್ಕಲಿಗರಿಗೆ ಮೀಸಲಾತಿ ಕೊಡದಿದ್ದರೆ ಒಕ್ಕಲಿಗರ ವಿರೋಧವನ್ನು ಎದುರಿಸಬೇಕಾಗುತ್ತದೆ. ಒಟ್ಟಿನಲ್ಲಿ ಈ ಬಾರಿ ಬಿಜೆಪಿಗೆ ಮೀಸಲಾತಿ ಶಾಪ ಸಿಗುವ ಎಲ್ಲಾ ಸಾಧ್ಯತೆಗಳಿವೆ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಶ್ರಮಿಸಿದ ಸಚಿವರಿಗೆ ಜನಾಭಿನಂದನೆ

Next Post

72ನೇ ವರ್ಷದ ಬರ್ತ್​ಡೇ ಸಂಭ್ರಮದಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್​

Related Posts

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು
Top Story

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

by ಪ್ರತಿಧ್ವನಿ
November 19, 2025
0

ಬೆಂಗಳೂರು: ನಗರದಲ್ಲಿ ಮಟಮಟ ಮಧ್ಯಾಹ್ನವೇ ಎಟಿಎಂ ವಾಹನದ ದರೋಡೆ ನಡೆದಿದೆ. ಎಟಿಎಂಗೆ ಹಣ ಹಾಕುವ ವಾಹನದಿಂದ ಆಗಂತುಕರ ಗ್ಯಾಂಗ್ ಬರೋಬ್ಬರಿ 7 ಕೋಟಿ 11 ಲಕ್ಷ ದೋಚಿ...

Read moreDetails
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

November 19, 2025
ಚಳಿ ತಡಿಯೋಕೆ ಆಗ್ತಿಲ್ಲ ಕಂಬಳಿ ನೀಡಿ: ಕೋರ್ಟ್‌ಗೆ ನಟ ದರ್ಶನ್‌ ಮನವಿ..!

ಚಳಿ ತಡಿಯೋಕೆ ಆಗ್ತಿಲ್ಲ ಕಂಬಳಿ ನೀಡಿ: ಕೋರ್ಟ್‌ಗೆ ನಟ ದರ್ಶನ್‌ ಮನವಿ..!

November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

November 19, 2025
Next Post
72ನೇ ವರ್ಷದ ಬರ್ತ್​ಡೇ ಸಂಭ್ರಮದಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್​

72ನೇ ವರ್ಷದ ಬರ್ತ್​ಡೇ ಸಂಭ್ರಮದಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್​

Please login to join discussion

Recent News

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು
Top Story

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

by ಪ್ರತಿಧ್ವನಿ
November 19, 2025
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು
Top Story

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

by ಪ್ರತಿಧ್ವನಿ
November 19, 2025
ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌
Top Story

ಮತ್ತೆ ʼಭರ್ಜರಿʼ ಕಾಂಬಿನೇಷನ್‌: ಧ್ರುವ ಹೊಸ ಚಿತ್ರಕ್ಕೆ ನಾಯಕಿಯಾದ ಡಿಂಪಲ್‌ ಕ್ವೀನ್‌

by ಪ್ರತಿಧ್ವನಿ
November 19, 2025
ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ
Top Story

ರಾಜ್ಯದ ʼಶಕ್ತಿ ಕೇಂದ್ರʼದ ಮುಂದೆ ಡಕಾಯಿತಿ ಮತ್ತು ಗುಂಪು ಗಲಾಟೆ

by ಪ್ರತಿಧ್ವನಿ
November 19, 2025
ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ
Top Story

ಇಂದಿರಾ ಗಾಂಧಿ 108ನೇ ಜನ್ಮದಿನ: ಕಾಂಗ್ರೆಸ್‌ ನಾಯಕರಿಂದ ಗೌರವ ನಮನ

by ಪ್ರತಿಧ್ವನಿ
November 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

ಬೆಂಗಳೂರಲ್ಲಿ ಹಾಡಹಗಲೇ ದರೋಡೆ: ಕೋಟಿ ಕೋಟಿ ದೋಚಿದ ಖದೀಮರು

November 19, 2025
ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

ಜನಿವಾರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಕಿರುಕುಳ: ಅತಿಥಿ ಶಿಕ್ಷಕ ಅಮಾನತು

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!