182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಪ್ರಚಂಡ ದಿಗ್ವಿಜಯ ಸಾಧಿಸಿರುವ ಹಿನ್ನಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್-ಎಎಪಿಗೆ ಚಾಟಿ ಬೀಸಿದ್ದಾರೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ ಉಚಿತ ಭರವಸೆ ತುಷ್ಟೀಕರಣದ ರಾಜಕಾರಣವನ್ನ ಮಾಡುವವರನ್ನು ಗುಜರಾತಿನ ಜನತೆ ತಿರಸ್ಕರಿಸಿದ್ದಾರೆ. ಜನರ ಕಲ್ಯಾಣ ಹಾಗೂ ಅಭಿವೃದ್ದಿ ಮಂತ್ರ ಪಟಿಸುವ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಜನಾದೇಶ ದೊರೆತಿದೆ ಎಂದು ಹೇಳಿದ್ದಾರೆ.
ಮಹಿಳೆಯರು, ಯುವಕರು ಅಥವಾ ರೈತರು ಸೇರಿ ಪ್ರತಿಯೊಂದು ವರ್ಗವೂ ಬಿಜೆಪಿಯೊಂದಿಗೆ ಇರುವುದನ್ನು ಈ ಬೃಹತ್ ಗೆಲುವು ತೋರಿಸಿದೆ. ಕಳೆದ ಎರಡು ದಶಕಗಳಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಎಲ್ಲ ದಾಖಲೆಗಳನ್ನು ಮುರಿದಿದೆ. ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಯಾವಾಗಲೂ ಇತಿಹಾಸ ಸೃಷ್ಟಿಸಿದೆ. ಗುಜರಾತ್ನ ಜನರು ಬಿಜೆಪಿಯನ್ನು ಆಶೀರ್ವದಿಸುವ ಮೂಲಕ ಗೆಲುವಿನ ದಾಖಲೆಗಳನ್ನು ಮುರಿಯಲು ನೆರವಾಗಿದ್ದಾರೆ. ಇದು ನರೇಂದ್ರ ಮೋದಿ ಅವರ ಅಭಿವೃದ್ಧಿ ಮಾದರಿಯಲ್ಲಿ ಜನ ಇಟ್ಟಿರುವ ಅಚಲ ನಂಬಿಕೆಯ ವಿಜಯ ಎಂದು ಬಣ್ಣಿಸಿದ್ದಾರೆ.
ಇನ್ನು ಮೋದಿ-ಶಾ ಜೋಡಿ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು 37 ವರ್ಷಗಳ ಹಿಂದ ಎಕಾಂಗ್ರೆಸ್ ನಿರ್ಮಿಸಿದ್ದ ದಾಖಲೆಯನ್ನು ಧೂಳಿಪಟ ಮಾಡಿದೆ. 1985ರ ಚುನಾವನೆಯಲ್ಲಿ 142 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿತ್ತು ಮತ್ತು ಕಾಂಗ್ರೆಸ್ ಪಕ್ಷವನ್ನ ಧೂಳಿಪಟ ಮಾಡುವುದರಲ್ಲಿ ಮೋದಿ-ಶಾ ತಂತ್ರಗಾರಿಕೆ ಫಲ ಕೊಟ್ಟಿದೆ.












