ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ಮನೆ ಮಾಲಕ ಸಯ್ಯದ್ ರಹ್ಮಾನ್ ಈ ಕುರಿತು ದೂರು ನೀಡಿದ್ದಾರೆ.
ಶ್ರೀರಂಗಪಟ್ಟಣ:ನಿನ್ನೆ ಹನುಮಾ ಮಾಲಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ಮಾಲಾಧಾರಿ ಯುವಕನೊಬ್ಬ ಮನೆಯೊಂದರ ಮೇಲಿದ್ದ ಹಸಿರು ಧ್ವಜವನ್ನು ಕಿತ್ತು ಹಾಕಿ ಕೇಸರಿ ಧ್ವಜವನ್ನು ಹಾರಿಸಿ ಭೀತಿ ಸೃಷ್ಟಿಸಿದ್ದ.ಈ ಕುರಿತ ವಿಡಿಯೋ ವೈರಲ್ ಆಗಿತ್ತು.ಇದೀಗ ಮನೆಯ ಸ್ವತ್ತುಗಳಿಗೆ ಹಾನಿ ನಡೆಸಿದ, ಅವಾಚ್ಯವಾಗಿ ನಿಂದಿಸಿದ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ಮನೆ ಮಾಲಕ ಸಯ್ಯದ್ ರಹ್ಮಾನ್ ಈ ಕುರಿತು ದೂರು ನೀಡಿದ್ದಾರೆ. ಸಂಕೀರ್ತನಾ ಯಾತ್ರೆ ಮೆರವಣಿಗೆ ವೇಳೆ ಗುಂಪಿನಲ್ಲಿದ್ದ ಯುವಕನೊಬ್ಬ ಅಕ್ರಮವಾಗಿ ಮನೆ ಮೇಲಿದ್ದ ಹಸಿರು ಧ್ವಜವನ್ನು ಕಿತ್ತು ಹಾಕಿ, ಕೇಸರಿ ಧ್ವಜವನ್ನು ಹಾರಿಸಿದ್ದಾನೆ. ಮನೆಯ ಸ್ವತ್ತುಗಳಿಗೆ ಹಾನಿ ಮಾಡಿದ್ದಾನೆ. ಅಲ್ಲದೇ ಮನೆಯಲ್ಲಿದ್ದ ಮಕ್ಕಳು ಮತ್ತು ಮಹಿಳೆಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿನ್ನೆ ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ಸಂಕೀರ್ತನಾ ಯಾತ್ರೆ ನಡೆದಿತ್ತು.ಈ ವೇಳೆ ಕಿಡಿಗೇಡಿಯೋರ್ವ ಶ್ರೀರಂಗಪಟ್ಟಣದ ಮಸೀದಿಗೆ ನುಗ್ಗಲು ಯತ್ನಿಸಿದ್ದ. ಈ ವೇಳೆ ಆತನಿಗೆ ತಳ್ಳಿ ಹಾಕಿದ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಕಾಪಾಡಿದ್ದಾರೆ.