ಭಾರತೀಯ ಕ್ರಿಕೆಟ್ ತಂಡದಲ್ಲಿ ಶೇ.70ರಷ್ಟು ಆಟಗಾರರು ಮೇಲ್ಜಾತಿಯವರಿದ್ದಾರೆ ಕ್ರಿಕೆಟ್‌ನಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.
ಚಾಮರಾಜನಗರದಲ್ಲಿ ಬಹುಜನ ವಾಲಂಟಿಯರ್ ಪೋರ್ಸ್(BVF) ಆಯೋಜಿಸಿದ್ದ ಸಂವಾದ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಚೇತನ್ ಮೇಲ್ಜಾತಿಯವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ ಹಾಗಾಗಿ ಕ್ರಿಕೆಟ್‌ನಲ್ಲಿ ಮೀಸಲಾತಿ ತರಬೇಕು. ದಕ್ಷಿಣ ಆಫ್ರಿಕಾ ತಂಡದಲ್ಲಿ 2016ರಿಂದ ತಂಡದಲ್ಲಿ 6 ಮಂದಿ ಕರಿಯರಿಗೆ ಅವಕಾಶ ನೀಡಲಾಗುತ್ತಿದೆ. ಅದೇ ರೀತಿ ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೀಸಲಾತಿ ನೀಡುವ ಮೂಲ ಸದೃಢ ತಂಡ ಕಟ್ಟಲು ಸಾಧ್ಯವಾಗುತ್ತದೆ ಭಾರತೀಯ ಕ್ರಿಕೆಟ್ ಶ್ರೀಮಂತವಾಗಿದೆ ಮೀಸಲಾತಿ ನೀಡಿದರೆ ವೈಶಾಲ್ಯತೆ ಮತ್ತಷ್ಟು ಶ್ರೀಮಂತವಾಗುತ್ತದೆ. ಮೀಸಲಾತಿ ಎಂದರೆ ನಾವು ಶಿಕ್ಷಣ, ಉದ್ಯೋಗದಲ್ಲಿ ಮಾತ್ರ ಎಂದುಕೊಂಡಿದ್ದೇವೆ ನಮ್ಮ ದೇಶದ ಕ್ರಿಕೆಟ್ ಎಷ್ಟು ದುಡ್ಡು ಪಡೆಯುತ್ತಿದೆ ಮತ್ತು ಪ್ರಚಾರ ಪಡೆಯುತ್ತಿದೆ ಎಂದು ತಿಳಿದಿದೆ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.
