ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ಗೆ ವಾಪಸ್ ಆಗಿರುವುದು ಜಿಲ್ಲಾ ರಾಜಕೀಯ ಲೆಕ್ಕಾಚಾರ ತಲೆ ಕೆಳಗಾಗಿದ್ದು ವಿರೋಧಿ ಬಣ ಜಿಟಿಡಿ ವಿರುದ್ದ ಬಹಿರಂಗವಾಗಿ ತೊಡೆ ತಟ್ಟಿತ್ತು.
ಇನ್ನು ವಿರೋಧಿ ಬಣವನ್ನ ತಣಿಸಲು ಮೊದಲ ದಿನದಿಂದಲ್ಲೆ ಕಾರ್ಯಪ್ರವೃತ್ತರಾಗಿದ್ದ ಜಿಟಿಡಿ ಮೊದಲ ಯಶಸ್ಸು ಕಂಡಿದ್ದಾರೆ. ಜಿಟಿಡಿ ವಿರುದ್ದ ಬಹಿರಂಗವಾಗಿ ಕಿಡಿಕಾರಿದ ಮ=ಪಂಚಪಾಂಡವರಲ್ಲಿ ಒಡಕು ಮೂಡಿದ್ದು ವಿರೋಧಿ ಬಣದ ಬೆಳವಾಡಿ ಶಿವಮೂರ್ತಿಯನ್ನು ವಾಪಸ್ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ರಾತ್ರಿ ಬೆಳವಾಡಿಯಲ್ಲಿ ನಡೆದ ಶಿವಮೂರ್ತಿ ಜನುಮದಿನ ಕಾರ್ಯಕ್ರಮದಲ್ಲಿ ಜಿಟಿಡಿ ಜೊತೆ ವೇದಿಕೆ ಹಂಚಿಕೊಂಡಿದ್ದ ಶಿವಮೂರ್ತಿ ಯಾವುದೇ ಕಾರಣಕ್ಕೂ ನಾನು ವಿರೋಧಿ ಬಣದ ಜೊತೆ ಹೋಗುವುದಿಲ್ಲ ಮತ್ತು ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದಿನ ಚುನಾವಣೆಯ್ಲಿ ಜಿಟಿಡಿ ಪರ ಕೆಲಸ ಮಾಡಿ ಅವರ ಗೆಲುವಿಗೆ ಶ್ರಮ ವಹಿಸುತ್ತೇನೆ ಎಂದು ವಿರೋಧ ಬಣದ ನಾಲ್ವರು ನಾಯಕರಿಗೆ ಬಹಿರಂಗ ಸವಾಲ್ ಎಸೆದಿದ್ದಾರೆ.