ಶ್ರೀರಂಗಪಟ್ಟಣದಲ್ಲಿ ಹನುಮಜಯಂತಿ ಸಂಭ್ರಮ ಮನೆ ಮಾಡಿದೆ.ಇಂದು ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣ ಕೇಸರಿ ಮಯವಾಗಿದೆ.ಗಂಜಾಂ ನ ನಿಮಿಷಾಂಭ ದೇವಾಲಯದಿಂದ ಯಾತ್ರೆ ಆರಂಭವಾಗಿದೆ.ಯಾತ್ರೆಗೆ ಕಲಾತಂಡಗಳು ಮೆರುಗು ನೀಡಿದೆ.
ಆಂಜನೇಯ ದೇವಸ್ಥಾನದವರೆಗೆ ಯಾತ್ರೆ ಸಾಗಲಿದೆ.ಹನುಮನ ಘೋಷಣೆಗಳೊಂದಿಗೆ ಸಾವಿರಾರು ಭಕ್ತರು ಯಾತ್ರೆಯಲ್ಲಿ ಭಾಗಿಯಾಗಿದ್ದು .ಸಂಕೀರ್ತನಾ ಯಾತ್ರೆ ಹಿನ್ನಲೆ ಶ್ರೀರಂಗಪಟ್ಟಣದ್ಯಾಂತ ಖಾಕಿ ಸರ್ಪಗಾವಲು ಹಾಕಲಾಗಿದೆ.ಪಟ್ಟಣದ ಜಾಮೀಯ ಮಸೀದಿ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಮಸೀದಿ ಸುತ್ತ ಪೊಲೀಸರನ್ನು ನಿಯೋಜಿಸಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.ಹಿಂದೂ ಜಾಗರಣ ವೇದಿಕೆಯಿಂದ ಬೃಹತ್ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.ಮಂಡ್ಯ ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಪೊಲೀಸ್ ಕಣ್ಗಾವಲು ಏರ್ಪಡಿಸಲಾಗಿದೆ.7 ಮಂದಿ ಡಿವೈಎಸ್ಪಿ, 15 ಮಂದಿ ಸಿಪಿಐ 9 ಡಿಎಆರ್ ಹಾಗೂ ಕೆಎಸ್ಆರ್ ಪಿ 6 ತುಕಡಿಗಳ .
ಡ್ರೋಣ್ ಕ್ಯಾಮೆರಾ, 20 ಮೂವಿಂಗ್ ಕ್ಯಾಮೆರಾ, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.ಮೆರವಣಿಗೆ ಬಳಿಕ ಶ್ರೀರಂಗನಾಥ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಮೆರವಣಿಗೆಯಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದೆ. ಡಿಜೆ ಸದ್ದಿಗೆ ಹನುಮ ಭಕ್ತರ ಹೆಜ್ಜೆ ಹಾಕುತ್ತಿದ್ದಾರೆ. ಮೆರವಣಿಗೆಯಲ್ಲಿ ಕೇಸರಿ ಬಣ್ಣದ ಹನುಮ ಧ್ವಜಗಳು ರಾರಾಜಿಸುತ್ತಿವೆ