ಅವನ್ಯಾವನೋ ಒಬ್ಬ ಸುನಿಲ, ಡಕಾಯಿತಿ ಮರ್ಡರ್ ಕೇಸ್ ನಲ್ಲಿ ಇದ್ದವನ ಜೊತೆ ಬಿಜೆಪಿ ಮುಖಂಡರೆಲ್ಲಾ ಸೇರಿಕೊಂಡಿದ್ದರು. ಇವರು ನೀತಿ ಹೇಳೋದು ಬದನೆಕಾಯಿ ತಿನ್ನೋಕಾ..? ಸಿಸಿಬಿ ಅವರು ಅವನನ್ನ ಹುಡುಕ್ತಾ ಇದ್ದಾರೆ. ಅವನು ಬಿಜೆಪಿ ಮುಖಂಡರ ಜೊತೆಗೆ ಇದ್ದ. ಪೊಲೀಸರಿಗೆ ಆತನನ್ನ ಅರೆಸ್ಟ್ ಮಾಡೋಕೆ ಹೇಗೆ ಧೈರ್ಯ ಬರುತ್ತೆ..? ಆಡಳಿತ ರೂಢ ಬಿಜೆಪಿ ಶಾಸಕರು ಸಂಸದರು ಅವರ ಜೊತೆಗಿದ್ರೆ ಹೆಂಗ್ ಪೊಲೀಸ್ ಅರೆಸ್ಟ್ ಮಾಡುತ್ತಾರೆ..? ಬಿಜೆಪಿಯವರು ಹೇಳೋದೊಂದು ಮಾಡೋದೊಂದು. ನಲಪಾಡ್ ಮೇಲೆ ಒಂದು ಕೇಸ್ ಇದೆ ಅದರ ಬಿಜೆಪಿ ನಾಯಕರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ಗಳಿವೆ..? ಅಮಿತ್ ಶಾ ಮೇಲೆ ಮರ್ಡರ್ ಕೇಸ್ ಇತ್ತು, ಗಡಿಪಾರು ಆದೇಶದಲ್ಲಿತ್ತು. ಬಿಜೆಪಿಗೆ ಏನು ನೈತಿಕತೆ ಇದೆ ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯಲ್ಲಿ ಪಾರದರ್ಶಕತೆ ಇಲ್ಲ, ಕೇಂದ್ರ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ ಹಾಗೂ ಸ್ವತಂತ್ರವಾದದ್ದು. ಅದರಲ್ಲಿ ಆಡಳಿತ ಪಕ್ಷದವರು ಹಾಗೂ ವಿರೋಧ ಪಕ್ಷದವರು ಇಬ್ಬರು ಇರಬೇಕು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ ಎಂದರು. ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾರೋ ಸಿನಿಮಾ ಮಾಡಲು ಬಂದಿದ್ರು. ಕನಕಗಿರಿ ಕ್ಷೇತ್ರದವರಂತೆ, ನಿಮ್ಮ ಸಿನಿಮಾ ಮಾಡ್ತೀನಿ ಅಂತ ಹೇಳಿದ್ರು, ನಾನೇನು ನಟನೆ ಮಾಡುತ್ತಿಲ್ಲಪ್ಪ, ನನಗೆ ಆಕ್ಟಿಂಗ್ ಬರಲ್ಲ ಎಂದು ಹೇಳಿದ್ದಾರೆ.
ನನಗೆ ಎಲ್ಲಾ ಕಡೆ ಕರೀತಾ ಇದ್ದಾರೆ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೇರಿ ಹಲವರು ಒತ್ತಾಯ ಮಾಡುತ್ತಿದ್ದಾರೆ. ವರುಣ ಕ್ಷೇತ್ರ ಬಾದಾಮಿ ಚಾಮರಾಜಪೇಟೆ ಹೆಬ್ಬಾಳ ಕೊಪ್ಪಳ ಎಲ್ಲಾ ಕಡೆಯಿಂದಲೂ ಕರೆತಿದ್ದರು. ಚಿಕ್ಕನಾಯಕನಹಳ್ಳಿಯಲು ಕರಿತಿದ್ದಾರೆ. ಹೈಕಮಾಂಡ್ ಅವರು ಎಲ್ಲಿ ನಿಲ್ಲಬೇಕು ಅಂತ ಹೇಳ್ತಾರೋ ಅಲ್ಲಿ ನಿಲ್ತೀನಿ, ನನ್ನ ಆಸಕ್ತಿ ಇಲ್ಲ, ಹೈಕಮಾಂಡ್ಗೆ ಬಿಟ್ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿ ಸ್ಥಾನಕ್ಕೆ ಅರ್ಜಿ ಯಾಕೆ ಹಾಕಬೇಕು..? ನಾವು ಪಕ್ಷದ ಪ್ರಾಮಾಣಿಕರು ಎಂದು ಶಾಮನೂರು ಶಿವಶಂಕರಪ್ಪ ಮಗ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಕ್ಷಕ್ಕೂ ದುಡ್ಡು ಬೇಕಲ್ರಿ ಮಲ್ಲಿಕಾರ್ಜುನ್ ಯಾವ ಸಂದರ್ಭದಲ್ಲಿ ಗೊತ್ತಿಲ್ಲ ಕೇಳ್ತೀನಿ ಅವರ ತಂದೆ ಶಿವಶಂಕರಪ್ಪ ಕೂಡ ಅರ್ಜಿ ಹಾಕಿದ್ದಾರೆ. ಸಾಮಾಜಿಕ ನ್ಯಾಯದ ಜೊತೆಗೆ ಗೆಲ್ಲುವ ಅಭ್ಯರ್ಥಿಯು ಮುಖ್ಯ. ಮನುವಾದಿ ಬಿಜೆಪಿ ಪಕ್ಷವನ್ನು ತೆಗಿಬೇಕು ನಮ್ಮ ಕಾಂಗ್ರೆಸ್ಸಿನ ಎಲ್ಲಾ ಕಾರ್ಯಕರ್ತರು ಕೂಡ ಅದೇ ಅಭಿಪ್ರಾಯದಲ್ಲಿದ್ದಾರೆ. ಯಾರಿಗೆ ಟಿಕೆಟ್ ನೀಡಿದರು ನಮ್ಮ ಕಾರ್ಯಕರ್ತರು ಸಪೋರ್ಟ್ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅದೊಂದು ಮದುವೆ ಕಾರ್ಯಕ್ರಮವಾಗಿದ್ದು ಅಲ್ಲಿ 40,000 ಜನ ಸೇರಿದ್ರು. ಅಲ್ಲಿ ನೆರದಿದ್ದವರು ರಾಜಕೀಯದ ಬಗ್ಗೆ ಮಾತಾಡಿ ಅಂತ ಹೇಳಿದ್ರು ಕೊಪ್ಪಳದಲ್ಲಿ ಎಲ್ಲ ಯೋಗ್ಯ ಅಭ್ಯರ್ಥಿಗಳಿದ್ದಾರೆ, ಎಲ್ಲರೂ ಸಹಾಯ ಮಾಡಿ ಅಂತ ಹೇಳಿದ್ದೆ ಅಷ್ಟೇ ಎಂದರು. ಸಿಟಿ ರವಿ ಕ್ರಿಮಿನಲ್ ಫೆಲೋ ಅವನಿಗೆ ಉತ್ತರ ಕೊಡಕ್ಕಾಗಲ್ಲ he is the most criminal fellow. ಆತನಿಗೆ ಜಾತ್ಯತೀತ ತತ್ವ ಅರ್ಥ ಆಗಲ್ಲ ಅವರಿಗೆಲ್ಲ ಉತ್ತರ ಕೊಡ್ತಾ ಕೂರೋದಕ್ಕೆ ಆಗಲ್ಲ. ಸಂವಿಧಾನ ಅವರಿಗೆ ಅರ್ಥ ಆಗಲ್ಲ ಎಂದರು.
ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಇಟ್ಟುಕೊಂಡು ಮಾಡಿದ ಮಲೆನಾಡು ಜನಕ್ರೋಶ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಗಿದೆ. ಸಾಕಷ್ಟು ಜನ ಸೇರಿದ್ರು ಕಾರ್ಯಕ್ರಮ ಮುಖ್ಯವಾಗಿ ಇದ್ದರು. ಸಂತ್ರಸ್ತರ ಸಮಸ್ಯೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿರುವುದನ್ನು ಗಮನಿಸಿದೆ. ಇಷ್ಟು ವರ್ಷದಿಂದ ಕಾಂಗ್ರೆಸ್ ಗೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಇದೇ ಜಿಲ್ಲೆಯವರು. 2008ರಿಂದ ಬಿಜೆಪಿ ಸರ್ಕಾರದ ಅಧಿಕಾರದಲ್ಲಿತ್ತು. ಈ ಮೂರೂವರೆ ವರ್ಷದಲ್ಲಿ ಏನು ಮಾಡಿದ್ದಾರೆ ಅದಕ್ಕೆ ಉತ್ತರ ಇದೆಯಾ..? ನನಗೆ 2015 ರಲ್ಲಿ ಈ ವಿಷಯವನ್ನು ಗಮನಕ್ಕೆ ತಂದ್ರು. ನಾನು ಆಗ ಫಾರೆಸ್ಟ್ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದ ಮದನ್ ಗೋಪಾಲ್ ಅವರನ್ನು ನೇಮಕ ಮಾಡಿ ಸರ್ವೇ ಮಾಡಿಸಿ ಸುಮಾರು ಐವತ್ತಾರು ಡಿ ನೋಟಿಫಿಕೇಶನ್ ಮಾಡಿದೆ. ಒಂದು ಡಿ ನೋಟಿಫಿಕೇಶನ್ ಮೇಲೆ ಗಿರೀಶ್ ಆಚಾರ್ ಎಂಬಾತ ಹೈಕೋರ್ಟ್ ನಲ್ಲಿ ದಾವೆ ಹೊಡಿದ. ಹೈ ಕೋರ್ಟ್ ಎಲ್ಲಾ ಆದೇಶವನ್ನು ರದ್ದು ಮಾಡಿತ್ತು. ಆತ ಒಂದು ಡಿ ನೋಟಿಫಿಕೇಶನ್ ಮೇಲೆ ಪ್ರಕರಣ ಓಡಿದ್ದರೆ ಸರ್ಕಾರ ಎಲ್ಲಾ ಆದೇಶಗಳನ್ನು ರದ್ದು ಮಾಡಿತ್ತು. ಬಿಜೆಪಿ ಸರ್ಕಾರ ಶರಾವತಿ ಸಂತ್ರಸ್ತರ ವಿಚಾರದಲ್ಲಿ ಏನೂ ಮಾಡಿಲ್ಲ ಎಂದರು.