ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ವ್ಯಕ್ತವಾಗುತ್ತಿದೆ.
ಇನ್ನು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ವಿಭಿನ್ನ ಹೆಜ್ಜೆ ಇಟ್ಟಿರುವ ಬಿಜೆಪಿ ಭಾರತ ಕ್ರಿಕೆಟ್ ತಂಡದ ಆಟಗಾರ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾಗೆ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ಮೂಲಕ ವಿಭಿನ್ನ ಹೆಜ್ಜೆಯನ್ನಿಟ್ಟಿತ್ತು.
ಇನ್ನು ಪತ್ನಿ ಪರ ಪ್ರಚಾರ ಮಾಡಿರುವುದಕ್ಕೆ ರವೀಂದ್ರ ಜಡೇಜಾ ತೀವ್ರ ಟೀಕೆಗೆ ಗುರಿಯಾಗಿದ್ದಾರೆ ಮತ್ತು ಅವರನ್ನು ನಿಯಮಗಳ ಉಲ್ಲಂಘನೆಗಾಗಿ ವಜಾ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ AIMIM ಪಕ್ಷದ ವಕ್ತಾರ ವಾರಿಸ್ ಪಠಾಣ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನ ಪ್ರತಿನಿಧಿಸುವ ಆಟಗಾರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವುದು ನಿಯಮ ಮತ್ತು ಒಪ್ಪಂದದ ಉಲ್ಲಂಘನೆಯಲ್ಲವೇ ಎಂದು ವಾಇರಸ್ ಪ್ರಶ್ನಿಸಿದ್ದಾರೆ.
ಇತ್ತೀಚಿಗೆ ಜೇಜಾ ಪತ್ನಿ ಪ್ರಚಾರದ ಪೋಸ್ಟರ್ ಒಂದರಲ್ಲಿ ಜಢೆಜಾ ಟೀಂ ಇಂಡಿಯಾ ಜೆರ್ಸಿ ಧರಿಸಿರುವ ಫೋಟೋ ಹಾಕಲಾಗಿತ್ತು ಮತ್ತು ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ನಂತರ ಟ್ವೀಟ್ ಡಿಲೀಟ್ ಮಾಡಲಾಗಿತ್ತು.