ಬ್ಯಾಂಕ್ಗೆ ನಕಲಿ ಚಿನ್ನಭರಣ ಅಡಮಾನ ಇಟ್ಟು ವಂಚನೆ ಮಾಡುತ್ತಿದ್ದ ಗ್ಯಾಂಗ್ಅನ್ನು ಬಂಧಿಸುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಗಿದ್ದಾರೆ.
ಬಂಧಿತ ಆರೋಪಿಗಳನ್ನು ಅರುಣ್ ರಾಜು, ಸತ್ಯಾನಂದ್, ದತ್ತಾತ್ರೇಯ ಬಾಕಳೆ ಎಂದು ತಿಳಿದು ಬಂದಿದೆ. ಈ ಮೂವರು ಅಂತರ್ ರಾಜ್ಯ ಆರೋಪಿಗಳೆಂದು ತಿಳಿದು ಬಂದಿದೆ.
ಸಾಲ ಕೇಳುವ ನೆಪದಲ್ಲಿ ಆರೋಪಿಗಳು ವಿಜಯನಗರದಲ್ಲಿರುವ ಬ್ಯಾಂಕ್ ಗೆ ನಕಲಿ ಚಿನ್ನಭಾರಣ ಅಡವಿಡಲು ಬಂದಿದ್ದಾರೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್, ಬ್ಯಾಂಕ್ ಅಪ್ರೈಸರ್‌ಗೆ ಚಿನ್ನದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಆರೋಪಿಗಳು ಗುಜರಾತ್ ಸೇರಿ ಬೆಂಗಳೂರು ನಗರದ ಹಲವು ಬ್ಯಾಂಕ್‌ಗಳಿಗೆ ವಂಚನೆ ಮಾಡಿದ್ದರು. ತಾಮ್ರದ ಮೇಲೆ ಚಿನ್ನವನ್ನ ಲೇಪನ ಮಾಡಿ ಹಾರ್ಲ್ ಮಾರ್ಕ್ ಗುರುತು ಮುದ್ರಿಸಿ ಬ್ಯಾಂಕ್ ಗೆ ವಂಚನೆ ಮಾಡಿದ್ದರು. 15 ಕೆಜಿಯಷ್ಟು ನಕಲಿ ಚಿನ್ನಭಾರಣವನ್ನ ಬ್ಯಾಂಕ್ ಗಳಿಗೆ ಅಡಮಾನ ಇಟ್ಟು ಕೋಟಿ ಕೋಟಿಯಷ್ಟು ಹಣ ಬ್ಯಾಂಕ್ ಗೆ ಕಟ್ಟದೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಗಳಿಂದ 1. Kg 475.ಗ್ರಾಂ ನಕಲಿ ಚಿನ್ನಭಾರಣ ವಶಕ್ಕೆ ಪಡೆದಿದ್ದಾರೆ ಮತ್ತು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.






