Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಾಡಾನೆ ಅಟ್ಯಾಕ್‌ನಿಂದ ದಸರಾ ಗಜಪಡೆಯ ಗೋಪಾಲಸ್ವಾಮಿ ಆನೆ ಸಾವು

ಪ್ರತಿಧ್ವನಿ

ಪ್ರತಿಧ್ವನಿ

November 23, 2022
Share on FacebookShare on Twitter

ನಾಡಹಬ್ಬ ದಸರಾ ಗಜಪಡೆಯ ಆಕರ್ಷಣೀಯ ಕೇಂದ್ರಬಿಂದುಗಳಲ್ಲಿ ಒಂದಾದ ಗೋಪಾಲಸ್ವಾಮಿ(40) ಆನೆ ಅಕಾಲಿಕ ಮರಣ ಹೊಂದಿದೆ.

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಬಳಿ ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡು ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಬುಧವಾರ ಕಾಡಾನೆಯೊಂದಿಗೆ ನಡೆದ ಸಂಘರ್ಷದಲ್ಲಿ ಗಂಭೀರ ಗಾಯಗೊಂಡಿದ್ದ ಗೋಪಾಲಸ್ವಾಮಿ ಸ್ಥಳದಲ್ಲಿ ಮೃತಪಟ್ಟಿದೆ. ಈ ವರ್ಷದ ದಸರಾ ಮಹೋತ್ಸವದಲ್ಲೂ ಗೋಪಾಲಸ್ವಾಮಿ ಭಾಗಿಯಾಗಿದ್ದ. ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ನೌಪತ್ ಆನೆಯಾಗಿ ಹೆಜ್ಜೆ ಹಾಕಿದ್ದ ಗೋಪಾಲಸ್ವಾಮಿ ಎಲ್ಲರಿಂದ ಪ್ರಶಂಸೆ ಗಿಟ್ಟಿಸಿದ್ದ.

ಮಂಗಳವಾರದಂದು ಗೋಪಾಲಸ್ವಾಮಿ ಆನೆಯನ್ನು ಮೇಯಲು ಬಿಟ್ಟಿದ್ದ ವೇಳೆ ಕೊಡಗಿನ ಭಾಗದಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ(ಅಯ್ಯಪ್ಪ)ಗೆ ಕಾಲರ್ ಐಡಿ ಅಳವಡಿಸಲಾಗಿತ್ತು. ಮಸ್ತಿಗೆ ಬಂದಿದ್ದ ಗೋಪಾಲಸ್ವಾಮಿ ಹಾಗೂ ಧೃಡಕಾಯದ ಅಯ್ಯಪ್ಪ ಕಾಡಾನೆ ನಡುವೆ ಕಾಡಿನಲ್ಲಿ ಕಾದಾಟ ನಡೆದಿದೆ. ಅಯ್ಯಪ್ಪನ ದಾಳಿಗೆ ಸಿಲುಕಿದ ಗೋಪಾಲಸ್ವಾಮಿಗೆ ಕಾಲು ಮುರಿದಿದೆ, ಅಲ್ಲದೆ ದಂತದಿಂದ ಎಲ್ಲೆಡೆ ತಿವಿದಿರುವುದರಿಂದ ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಅಸ್ವಸ್ಥಗೊಂಡಿತ್ತು.

ಎಂದಿನಂತೆ ಗೋಪಾಲಸ್ವಾಮಿ ಆನೆಯ ಮಾವುತ ಮಂಜು ಹಾಗೂ ಕಾವಾಡಿ ಆನೆಯನ್ನು ಕರೆತರಲು ಕಾಡಿಗೆ ಹೋದ ವೇಳೆ ಕಾದಾಟವನ್ನು ಕಣ್ಣಾರೆ ಕಂಡು ಆನೆಯನ್ನು ಬೆದರಿಸಲು ಹೋಗುತ್ತಿದ್ದಂತೆ ಅವರ ಮೇಲೆಯೇ ಕಾಡಾನೆ ದಾಳಿ ಮಾಡಲು ಮುಂದಾಗಿದ್ದರಿಂದ ತಪ್ಪಿಸಿಕೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ್, ಆರ್‌ಎಫ್‌ಓ ಗಣರಾಜ್ ಪಟಗಾರ್ ಭೇಟಿ ಇತ್ತು, ವೈದ್ಯಾಧಿಕಾರಿಗಳ ತಂಡವನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಂತ ಆಕರ್ಷಕ ಮೈಕಟ್ಟನ್ನು ಹೊಂದಿದ್ದ ಗೋಪಾಲಸ್ವಾಮಿ ಮುಂಬರುವ ವರ್ಷಗಳಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲು ಅಣಿಯಾಗುತ್ತಿದ್ದ.ಈ ಬಾರಿಯ ದಸರಾ ಮಹೋತ್ಸವದಲ್ಲೂ ಮರದ ಅಂಬಾರಿಯನ್ನು ಹೊರುವ ತಾಲೀಮಿನಲ್ಲೂ ಭಾಗಿಯಾಗಿ ಸೈ ಎನಿಸಿಕೊಂಡಿದ್ದ ಗೋಪಾಲಸ್ವಾಮಿ ಹಲವರ ಫೇವರೇಟ್ ಆನೆಯಾಗಿತ್ತುಗೋಪಾಲಸ್ವಾಮಿಯ ಹಠಾತ್ ನಿಧನದಿಂದ ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ.ಅನುಭವಿ ಆನೆಗಳ ಕೊರತೆ ಎದುರಿಸುತ್ತಿರುವ ಅರಣ್ಯ ಇಲಾಖೆಗೆ ಭಾರೀ ಹೊಡೆತ ಬಿದ್ದಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಎಸ್.ಎಂ.ಕೃಷ್ಣ ಅವರು ಜ್ಞಾನಾಧಾರಿತ ಅಭಿವೃದ್ಧಿಗೆ ದೊಡ್ಡ ಕೊಡುಗ, CM #pratidhvani #smkrishna #basavarajbommai
ರಾಜಕೀಯ

ಎಸ್.ಎಂ.ಕೃಷ್ಣ ಅವರು ಜ್ಞಾನಾಧಾರಿತ ಅಭಿವೃದ್ಧಿಗೆ ದೊಡ್ಡ ಕೊಡುಗ, CM #pratidhvani #smkrishna #basavarajbommai

by ಪ್ರತಿಧ್ವನಿ
January 27, 2023
Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah
ರಾಜಕೀಯ

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

by ಪ್ರತಿಧ್ವನಿ
January 31, 2023
ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ
Top Story

ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ

by ಪ್ರತಿಧ್ವನಿ
January 24, 2023
YASH | RASHMIKA MANDANNA | RACHITHA RAM | ಈ ಹಿಂದೆ ಹೇಳಿದ ನಟ ನಟಿಯರ ಭವಿಷ್ಯ ಸತ್ಯವಾಗಿದೆ ನೋಡಿ!
ಸಿನಿಮಾ

YASH | RASHMIKA MANDANNA | RACHITHA RAM | ಈ ಹಿಂದೆ ಹೇಳಿದ ನಟ ನಟಿಯರ ಭವಿಷ್ಯ ಸತ್ಯವಾಗಿದೆ ನೋಡಿ!

by ಪ್ರತಿಧ್ವನಿ
January 28, 2023
ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​,  ಈಗ ಪಂಚಮಸಾಲಿಗಳ ಸರದಿ..!
ರಾಜಕೀಯ

ಲಿಂಗಾಯತರನ್ನು ಕೆಣಕಿದ್ದ ಕಾಂಗ್ರೆಸ್​, ಈಗ ಪಂಚಮಸಾಲಿಗಳ ಸರದಿ..!

by ಕೃಷ್ಣ ಮಣಿ
January 26, 2023
Next Post
ಬ್ಯಾಂಕ್​ಗೆ ನಕಲಿ‌ ಚಿನ್ನಾಭರಣ ಅಡಮಾನವಿಟ್ಟು ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್

ಬ್ಯಾಂಕ್​ಗೆ ನಕಲಿ‌ ಚಿನ್ನಾಭರಣ ಅಡಮಾನವಿಟ್ಟು ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್

ಡವ್ ಮಾಸ್ಟರ್‌ಗೆ ಸಾಥ್‌ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಡವ್ ಮಾಸ್ಟರ್‌ಗೆ ಸಾಥ್‌ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

EWS ಕೋಟಾದಲ್ಲಿ ಮೀಸಲಾತಿ ಪಡೆಯುವಾಗ ಮೆರಿಟ್ ಗೆ ಅನ್ಯಾಯ ಆಗೊದಿಲ್ವೆ?

EWS ಕೋಟಾದಲ್ಲಿ ಮೀಸಲಾತಿ ಪಡೆಯುವಾಗ ಮೆರಿಟ್ ಗೆ ಅನ್ಯಾಯ ಆಗೊದಿಲ್ವೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist