ಅತಿಥಿ ಗೃಹದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಸಂಸದರ ನಡುವೆ ವಾಗ್ವಾದ ನಡೆದಿರುವ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.
ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ಪ್ರಸಾದ್ ಹಾಗೂ ಮಾಜಿ ಶಾಸಕ ಸಿ ರಮೇಶ್ ನಡುವೆ ವಾಗ್ವಾದ ನಡೆದಿದೆ.
ಮೊದಲಿಗೆ ಸಂಸದ ಶ್ರೀನಿವಾಸ್ಪ್ರಸಾದ್ ಕಾರ್ಯಕ್ರಮದಲ್ಲಿ ಬರೀ ಕೀಟಲೆ ಮಾಡಲಿಕ್ಕೆ ಬರುತ್ತೀಯ ರಮೇಶ್ನನ್ನ ಆಚೆ ಕಳುಹಿಸು ಇದು ಬಿಜೆಪಿ ಸರ್ಕಾರದ ಕಾರ್ಯಕ್ರಮ ಎಂದು ಗದರಿದ್ದಾರೆ.
ಇದಕ್ಕೆ ಕುಪಿತಗೊಂಡ ಮಾಜಿ ಶಾಸಕ ರಮೇಶ್ ನನ್ನನ್ನು ಅವಮಾನ ಮಾಡಲಿಕ್ಕೆ ಕರೆದೆಯಾ. ಮತ್ತೊಮ್ಮೆ ನನ್ನನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆಯಬೇಡ. ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿಗೆ ನಾನು ಬರುವುದಿಲ್ಲ ನಾನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿ ಹೊರನಡೆದಿದ್ದಾರೆ.