ದೇಶದಾದ್ಯಂತ ಪಂಡಿತ್ ನೆಹರೂರವರ ಜನ್ಮದಿನ ಆಚರಿಸಲಾಗುತ್ತಿದ್ದು, ಬಿಜೆಪಿಯವರಿಗೆ ಇದರ ಸುಳಿವೂ ಇಲ್ಲವಾಗಿದೆ. 133 ವರ್ಷಗಳ ಹಿಂದೆ ನೆಹರೂ ಅವರು ಜನಿಸಿ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸ್ವಾತಂತ್ರ್ಯ ಸಮರಕ್ಕೆ ಧುಮುಕಿ ತಮ್ಮ ಜೀವನವನ್ನೇ ತ್ಯಾಗ ಬಲಿದಾನ ಮಾಡಿದ್ದಾರೆ. ಪಂಡಿತ್ ನೆಹರೂ, ಕಮಲಾ ನೆಹರೂ ಅವರು ಕೂಡ ಸೆರೆ ವಾಸ ಅನುಭವಿಸಿದ್ದರು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರು ಕೂಡ ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಇಂದಿರಾ ಬ್ರಿಗೇಡ್ ಸ್ಥಾಪನೆ ಮಾಡಿ ಸೆರೆವಾಸ ಅನುಭವಿಸಿದ್ದರು. ಈ ಇತಿಹಾಸ ಅಜರಾಮರವಾಗಿ ಉಳಿಯುತ್ತದೆ. ಯಾರೂ ಅಳಿಸಿಹಾಕಲು ಸಾಧ್ಯವಿಲ್ಲ. ನೆಹರೂ ಅವರು ದಾರ್ಶನಿಕರಾಗಿದ್ದು, ಸುಂದರ ಭಾರತ ನಿರ್ಮಾಣದ ಚಿಂತನೆ ಮಾಡಿ ಪಂಚವಾರ್ಷಿಕ ಯೋಜನೆ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಯೋಜನೆ ರೂಪಿಸಿದರು ಎಂದಿದ್ದಾರೆ.
ಕೆಟ್ಟ ಆಲೋಚನೆಗಳನ್ನು ಬೆಳೆಯಲು ಬಿಟ್ಟರೆ ಅದು ಇಡೀ ವ್ಯವಸ್ಥೆಯನ್ನು ನಾಶ ಮಾಡಲಿದೆ ಎಂದು ಹೇಳಿದ್ದರು. ಅದರಂತೆ ಇಂದು ಮೋದಿ ಸರ್ಕಾರ ಇಡೀ ದೇಶವನ್ನೇ ನಾಶ ಮಾಡುತ್ತಿದೆ. ನೆಹರೂ ಅವರು ವೈಜ್ಞಾನಿಕವಾಗಿ ಆಲೋಚನೆ ಮಾಡಬೇಕು ಎಂದು ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ದೇಶದ ಬಡತನ, ಹಸಿವಿನ ಬಾದೆ ನೀಗಿಸಲು ಇರುವ ಅಸ್ತ್ರ ವಿಜ್ಞಾನ ಎಂದು ಹೇಳಿದ್ದಾರೆ.
ಮೂಡನಂಬಿಕೆ, ಅನಕ್ಷರತೆ, ಬಡತನ ನಿರ್ಮೂಲನೆ ಆಗಬೇಕಾದರೆ ಅದು ವಿಜ್ಞಾನದಿಂದ ಮಾತ್ರ ಸಾಧ್ಯ ಎಂಬ ಸಂದೇಶ ಕೊಟ್ಟರು. ನರೇಂದ್ರ ಮೋದಿ ಹಾಗೂ ಬಿಜೆಪಿ ದೇಶದಲ್ಲಿ ಅಂದಕಾರ, ಜಾತಿ, ಮತೀಯ ಕಂದಬಾಹುಗಳನ್ನು ಪಸರಿಸಿ ದೇಶ ನಾಶ ಮಾಡುತ್ತಿದ್ದಾರೆ. ಸಂಸ್ಕೃತಿ ಎಂಬುದು ನಮ್ಮ ಆಲೋಚನೆ ಮನೋಭಾವವನ್ನು ವಿಸ್ತಾರಗೊಳಿಸುವುದಾಗಿದೆ ಎಂದು ಹೇಳಿದ್ದರು. ಈಗ ಸಂಸ್ಕೃತಿಯ ಅರ್ಥವನ್ನೇ ಬದಲಿಸಲಾಗುತ್ತಿದೆ.

ರಾಜಕೀಯದ ಜತೆ ಧರ್ಮ ಸೇರಿಸುವುದು ಅಪ್ರಸ್ತುತ. ಆದರೆ ಭಾರತದಲ್ಲಿ ಇಂದು 800 ವರ್ಷಗಳ ಹಿಂದೆ ಹೋಗಿ ಧರ್ಮವೇ ಆಡಳಿತ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ಮತದ ಹೆಸರಲ್ಲಿ ಕೈ ಎತ್ತಿದರೆ ನಾನು ನನ್ನ ಮರಣದ ತನಕ ಹೋರಾಟ ಮಾಡುತ್ತೇನೆ ಎಂದು ಪಣ ತೊಟ್ಟಿದ್ದರು. ಅಜ್ಞಾನ ಪರಿವರ್ತನೆಗೆ ಹೆದರುತ್ತದೆ.
ನಮ್ಮ ದೇಶ ಸ್ವಾತಂತ್ರ್ಯ ಪಡೆದಾಗ ಸಾಕ್ಷರತೆ ಪ್ರಮಾಣ ಶೇ.14ರಷ್ಟಿತ್ತು. ಅದನ್ನು ಈಗ ಶೇ.76ರವರೆಗೆ ತಂದು ನಿಲ್ಲಿಸಲಾಗಿದೆ. ಮತ್ತೆ ದೇಶದ ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳಿ ಬ್ರಿಟೀಷರಂತೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಹೀಗೆ ನೆಹರೂ ಅವರ ತತ್ವ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ.
ಈ ದೇಶ ಕಟ್ಟಿ ಸ್ವಾತಂತ್ರ್ಯದ ಜ್ಯೋತಿ ಬೆಳಗಿಸಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋದ ಮಹತ್ಮಾ ಗಾಂಧಿ ಅವರು ಈ ದೇಶವನ್ನು ಮುನ್ನಡೆಸಲು ಏಕೈಕ ನಾಯಕ ನೆಹರೂ ಅವರು. ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಬಂದಾಗ ಇರಲಿಲ್ಲ. ಅವರು ನೆಹರೂ ಅವರಿಗೆ ನಿಕಟ ಸ್ನೇಹಿತರಾಗಿದ್ದರು. ಅದೇ ರೀತಿ ವಲ್ಲಭಾಯಿ ಪಟೇಲರು ಕೂಡ ನೆಹರೂ ಅವರು ಪ್ರಧಾನಿ ಆಗಬೇಕು ಎಂದು ಗಾಂಧಿ ಅವರಿಗೆ ಹೆಸರು ಪ್ರಸ್ತಾಪಿಸಿದರು. ಎಲ್ಲ ಪ್ರಾಂಥೀಯ ರಾಜ್ಯಗಳನ್ನು ಒಂದುಗೂಡಿಸಿದರು.