ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್(25) ಕಾಣೆಯಾಗಿದ್ದಾರೆ.
ಈ ಕುರಿತು ಯುವಕ ಚಂದ್ರಶೇಖರ್ ತಂದೆ ರಮೇಶ್ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಕ್ಟೋಬರ್ 30ರಂದು ಸಂಜೆ ಮನೆಯಿಂದ ಹೊರಟ ಚಂದ್ರಶೇಖರ್ ಇದುವರೆಗೂ ಮನೆಗೆ ಹಿಂದಿರುಗಿಲ್ಲ ಮತ್ತು ಈ ಬಗ್ಗೆ ಕುಟುಂಬಸ್ಥರು ಸ್ನೇಹಿತರು ಹಾಗೂ ಬಂಧುಗಳ ಬಳಿ ವಿಚಾರಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು ಸಿಸಿಟಿವೆ ದೃಶ್ಯವಾಳಿ ಹಾಗೂ ಟೋಲ್ ಪ್ಲಾಜಾಗಳಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಹೊನ್ನಾಳಿ ಸಿಪಿಐ ಸಿದ್ದೇಗೌಡ ತಿಳಿಸಿದ್ದಾರೆ.






