ಇತ್ತೀಚಿಗೆ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆಗೆ ಕೆಪಿಸಿಸಿ ವತಿಯಿಂದ ನವೆಂಬರ್ 6ರಂದು ಅಭಿನಂದನಾ ಸಮಾರಂಭವನ್ನ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದ ಮುಖಂಡರು- ಕಾರ್ಯಕರ್ತರಿಗೆ ಸನ್ನದ್ಧರಾಗಲು ಸೂಚನೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರು ನವಂಬರ್ 6 ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ನಮಗೂ ಕೂಡ ರಾಷ್ಟ್ರೀಯ ಅಧ್ಯಕ್ಷರು ಸಮಯ ಕೊಟ್ಟಿದ್ದಾರೆ. ಖರ್ಗೆ ಅವರು ಅಧ್ಯಕ್ಷರಾಗಿದ್ದರಿಂದ ರಾಜ್ಯಕ್ಕೆ ದೊಡ್ಡ ಶಕ್ತಿ ಬಂದಿದೆ. ಹಲವು ದಶಕಗಳ ಬಳಿಕ ಕರ್ನಾಟಕದವರು ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದ್ದಾರೆ.
ಬ್ಲಾಕ್ ಮಟ್ಟದ ಅಧ್ಯಕ್ಷರಾಗಿದ್ದವರು ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಸ್ಪಷ್ಟ ಉದಾಹರಣೆ. ಬೆಂಗಳೂರಿನಲ್ಲಿ ಭಾನುವಾರ ಸಭೆ ಕರೆದಿದ್ದೇನೆ. ಎಲ್ಲಿ ಕಾರ್ಯಕ್ರಮ ಮಾಡೋದು ಅನ್ನೋದ್ರ ಬಗ್ಗೆ ನಿರ್ದಾರ ಮಾಡ್ತೇವೆ. ಎಲ್ಲರೂ ಬಂದು ರಾಷ್ಟ್ರೀಯ ಅಧ್ಯಕ್ಷರಿಗೆ ಶುಭ ಹಾರೈಸಬೇಕು. ರಾಜ್ಯದ ಬ್ಲಾಕ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು.ಶಾಸಕರು, ಮಾಜಿ ಶಾಸಕರು, ಸಂಸದರು, ಪದಾಧಿಕಾರಿಗಳು ಎಲ್ಲರೂ ಬರಬೇಕು. ಟಿಕೆಟ್ ಆಕಾಂಕ್ಷಿಗಳು, ಮುಖಂಡರು ಪ್ರತಿಯೊಬ್ಬರು ಕಾರ್ಯಕರ್ತರೊಡನೆ ಬೆಂಗಳೂರಿಗೆ ಬರಬೇಕು. ಬೆಂಗಳೂರಿಗೆ ಹೊರಡಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.

ಆಪರೇಷನ್ ಲೋಟಸ್ ವಿರುದ್ಧ ಡಿ.ಕೆ.ಶಿ ಕಿಡಿ
ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಆಪರೇಷನ್ ಲೋಟಸ್ ನಿಂದ ಹುಟ್ಟಿದೆ. ತೆಲಂಗಾಣದಲ್ಲಿ ಆಪರೇಷನ್ ಲೋಟಸ್ ನಡೆದಿದೆ ರೆಡ್ ಹ್ಯಾಂಡ್ ಆಗಿ ಕೋಟಿ ಕೋಟಿ ಸಿಕ್ಕಿದೆ. ರಾಜ್ಯದಲ್ಲಿ ಶಾಸಕ ಶ್ರೀನಿವಾಸ್ ಗೌಡ್ರು ಈ ಬಗ್ಗೆ ಅಧಿವೇಶನದಲ್ಲಿ ಹೇಳಿದ್ರು. ಇದನ್ನು ಮುಚ್ಚಿ ಹಾಕಲಿಕ್ಕೆ ಪ್ರಯತ್ನ ನಡೆದಿದೆ. ಬಿಜೆಪಿಯೇ ಈ ಆಪರೇಷನ್ ನ ಪಿತಾಮಹ ದೆಹಲಿಯಲ್ಲಿ ಮಾಡಿದ್ರು. ಬೇರೆ ಬೇರೆ ರಾಜ್ಯದಲ್ಲಿ ಮಾಡಿದ್ರು. ಈಗ ತೆಲಂಗಾಣದಲ್ಲಿ ಮಾಡಿದ್ದನ್ನು ಅಲ್ಲಿನ ಸಿಎಂ ಹೇಳಿದ್ದಾರೆ.
ಆಪರೇಷನ್ ಲೋಟಸ್ ವಿರುದ್ಧ ಸುಪ್ರೀಂ ಕೋರ್ಟ್ ನ ಜಡ್ಜ್ ಕ್ರಮ ತೆಗೆದುಕೊಳ್ಳಬೇಕು. ಪ್ರಜಾಪ್ರೂತ್ವದಲ್ಲಿ ಇದಕ್ಕೊಂದು ಕೊನೆಗಾಣಿಸಬೇಕು. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳೇ ಸೋಮೋಟೊ ಪ್ರಕರಣ ದಾಖಲಿಸಿಕೊಳ್ಳಬೇಕು. ಆಪರೇಷನ್ ಲೋಟಸ್ ಗೆ ಮನಿ ಲ್ಯಾಂಡ್ ರಿಂಗ್ ಆಕ್ಟ್ , ಪಿಎಂಎಲ್ ಆಕ್ಟ್ ಅನ್ವಯ ಆಗಲ್ವಾ..? ಎಂದು ಪ್ರಶ್ನಿಸಿದ್ದಾರೆ.
ಆಪರೇಷನ್ ಲೋಟಸ್ನ ಸತ್ಯಾಸತ್ಯತೆ ಬಗ್ಗೆ ಸುಪ್ರೀಂ ಕೋರ್ಟ್ ಮಾನಿಟರಿಂಗ್ ಮಾಡಬೇಕು. ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿ ಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.






