ದೀಪಾವಳಿ ದಿನ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ 2625 ಕೆಜಿ ಪಟಾಕಿಯನ್ನು ವಶಕ್ಕೆ ಪಡೆದ ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮುಕುಲ್ ಜೈನ್ (24 ಮತ್ತು ಸಂಬಂಧಿ ತುಷಾರ್ (19) ದೆಹಲಿಯ ಕೈಗಾರಿಕಾ ಪ್ರದೇಶವಾದ ಮಂಡೋಳಿಯಲ್ಲಿ ಬಂಧಿಸಲಾಗಿದೆ.
ಮುಕುಲ್ 2018ರಿಂದಲೂ ಪಟಾಕಿ ವ್ಯಾಪಾರ ಮಾಡಿಕೊಂಡಿದ್ದು, 2020ರಿಂದ ಆತನ ಜೊತೆ ತುಷಾರ್ ಕೆಲಸ ಮಾಡುತ್ತಿದ್ದ. ಇದಕ್ಕಾಗಿ ಪ್ರತಿ ತಿಂಗಳು 12 ಸಾವಿರ ರೂ. ಪಡೆಯುತ್ತಿದ್ದ.
ದೆಹಲಿಯ ವಾಯುಮಾಲಿನ್ಯ ಮಂಡಳಿ ಸುಪ್ರೀಂಕೋರ್ಟ್ ಪಟಾಕಿ ನಿಷೇಧ ಆದೇಶ ಮುಂದುವರಿಸಿ ಆದೇಶ ನೀಡಿದ ಮೇರೆಗೆ ಪಟಾಕಿ ಸಂಗ್ರಹ ಹಾಗೂ ಅಂಗಡಿಗಳ ಮೇಲೆ ದಾಳಿ ಮಾಡಲಾಯಿತು.
145 ಬಾಕ್ಸ್ ಗಳಲ್ಲಿ ಇರಿಸಲಾಗಿದ್ದ 2625 ಕೆಜಿ ಪಟಾಕಿ ಸಂಗ್ರಹಿಸಲಾಗಿತ್ತು. ಇವರು ಪಟಾಕಿ ತಯಾರಿಸಿ ಪಂಜಾಬ್ ಹಾಗೂ ಹರಿಯಾಣದಲ್ಲಿ ಮಾರಾಟ ಮಾಡುತ್ತಿದ್ದರು.










