ರಷ್ಯಾ 75 ಕ್ಷಿಪಣಿಗಳನ್ನು ಚಿಮ್ಮಿಸಿ ದಾಳಿ ನಡೆಸಿದ್ದರಿಂದ 8 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.
ಕ್ರಿಮಿಯಾ ಸಂಪರ್ಕಿಸುವ ರಷ್ಯಾದ ಸೇತುವೆಯನ್ನು ಉಕ್ರೇನ್ ಧ್ವಂಸಗೊಳಿಸಿದೆ ಎಂದು ಹೇಳಿಕೆ ನೀಡಿದ ಮಾರನೇ ದಿನವೇ ರಷ್ಯಾ ಭಾರೀ ದಾಳಿ ನಡೆಸಿದೆ.
ಉಕ್ರೇನ್ ನ ಹಲವು ನಗರಗಳ ಮೇಲೆ ರಷ್ಯಾ ಕ್ಷಿಪಣಿಗಳ ಮಳೆ ಸುರಿಸಿದೆ. ಇದರಿಂದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜೂನ್ 26ರ ನಂತರ ಕೀವ್ ನಗರದ ಮೇಲೆ ರಷ್ಯಾ ಮತ್ತೆ ಭಾರೀ ದಾಳಿ ನಡೆಸಿದ್ದು, ಕ್ಷಿಪಣಿಗಳ ಸತತ ದಾಳಿಗೆ ನಾಗರೀಕರು ಆತಂಕಗೊಂಡಿದ್ದಾರೆ.