ತುಮಕೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆ ವಿಚಾರವಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಪಾಲಿಕೆಯ ನೂತನ ಮಹಾಪೌರರಾಗಿ ಕಾಂಗ್ರೆಸ್ನ ಪ್ರಭಾವತಿ ಸುಧೀಶ್ವರ್, ಉಪಮಹಾಪೌರರಾಗಿ ಜೆಡಿಎಸ್ನ ಟಿ.ಕೆ.ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿ (ಮಹಿಳೆ) ಮೇಯರ್ ಹಾಗೂ ಪ್ರವರ್ಗ – ಎಗೆ ಉಪಮೇಯರ್ ಸ್ಥಾನ ಮೀಸಲಿಡಲಾಗಿತ್ತು.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿವೆ.
ಪ್ರಸಕ್ತ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಮೂಲಕ ಅಧಿಕಾರ ಹಿಡಿದಿವೆ. ಕಳೆದ ಭಾರಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನ ಬಿಜೆಪಿ ವಶವಾಗಿತ್ತು.