• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

40 ವರ್ಷ ಹಿಂದಿನ ನಗರಿಗೀತೆ ಕಾದಂಬರಿಗೆ ಆಕ್ಷೇಪ: ಪ್ರೊ.ಬರಗೂರು ರಾಮಚಂದ್ರಪ್ಪ ಅಚ್ಚರಿ!

Any Mind by Any Mind
August 30, 2022
in ಕರ್ನಾಟಕ
0
40 ವರ್ಷ ಹಿಂದಿನ ನಗರಿಗೀತೆ ಕಾದಂಬರಿಗೆ ಆಕ್ಷೇಪ: ಪ್ರೊ.ಬರಗೂರು ರಾಮಚಂದ್ರಪ್ಪ ಅಚ್ಚರಿ!
Share on WhatsAppShare on FacebookShare on Telegram

ನಲವತ್ತು ವರ್ಷಗಳ ನಂತರ ನನ್ನ ಕಾದಂಬರಿಯ ಪಾತ್ರವೊಂದು ಕಟ್ಟಿದ ʼನಗರಿಗೀತೆ’ ಗೆ ಈಗ ಆಕ್ಷೇಪ ಕೇಳಿಬಂದಿರುವುದು ಆಶ್ಚರ್ಯ ತಂದಿದೆ. ಇದು ತೀರ ಆಕಸ್ಮಿಕವೊ, ಹುನ್ನಾರವೋ ತಿಳಿಯದು. ಆದರೂ ನನ್ನ ಸ್ಪಷ್ಟನೆ ಕೊಡುತ್ತಿದ್ದೇನೆ…

ADVERTISEMENT

“ಭರತ ನಗರಿ” ಎಂಬ ಕಾದಂಬರಿಯನ್ನು ನಾನು 40 ವರ್ಷಗಳ ಹಿಂದೆ ಬರೆದಿದ್ದೆ. ಆಗ ದೇಶವನ್ನು ಕಾಂಗ್ರೆಸ್ ಪಕ್ಷ ಆಳುತ್ತಿತ್ತು. ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ವ್ಯಂಗ್ಯ ವಿಡಂಬನೆಗಳಿಂದ ಚಿತ್ರಿಸಿದ ಈ ರೂಪಕಾತ್ಮಕ ಕಾದಂಬರಿಯಲ್ಲಿ ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರವಿದೆ. ಆತನನ್ನು ಜೈಲಿಗೆ ಹಾಕಿ ಆಳುವ ವರ್ಗವು ತಮ್ಮ ಆಡಳಿತವನ್ನು ಹೊಗಳುವ ಗೀತೆ ಹಾಡಲು ಒತ್ತಾಯಿಸಿದಾಗ ಚಲನಶೀಲತೆಯನ್ನು ಕಳೆದುಕೊಂಡ ಭಾರತದ ಆಡಳಿತವನ್ನು ವಿಡಂಬಿಸಲು ‘ಜನಗಣಮನ’ದ ಲಯವನ್ನು ಬಳಸಿಕೊಳ್ಳುತ್ತಾನೆ. ಇದು ಆ ಪಾತ್ರದ ಸ್ವಭಾವ ಮತ್ತು ನಡವಳಿಕೆಯಾಗಿದೆ.

ಇಷ್ಟಕ್ಕೂ ಹೀಗೆ ಗೀತೆ ಹಾಡಿದ ಆ ಯುವಕ ಗುಂಡೇಟಿಗೆ ಸಾಯುತ್ತಾನೆ. ಆಡಳಿತದ ಶಿಕ್ಷೆಗೆ ಗುರಿಯಾಗುತ್ತಾನೆ. ಕೃತಿಕಾರನಾದ ನಾನು ಕಾದಂಬರಿಯ ಎಲ್ಲಾ ಪಾತ್ರಗಳನ್ನೂ ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ. ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗುವುದಿಲ್ಲ. ಅದು ಆ ಪಾತ್ರದ ಅಭಿಪ್ರಾಯವೇ ಹೊರತು ನನ್ನದಲ್ಲ. ಒಟ್ಟು ಕೃತಿಯು ಹೊರಡಿಸುವ ಆಶಯ ಮಾತ್ರ ಕೃತಿಕಾರರದು. ನಾನು ಆ ಕಾಲದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯನ್ನು ವಿಡಂಬನೆಗೆ ಒಡ್ಡಿ, ಒಟ್ಟು ಬದಲಾವಣೆಗೆ ಆಶಿಸಿದ್ದೇನೆ.

ಜಾತಿ, ವರ್ಗ, ಭ್ರಷ್ಟತೆಗಳನ್ನು ಮೀರಿದ ಭಾರತ ನನ್ನ ಆದರ್ಶ ಎನ್ನುವುದು ಕೃತಿಯಲ್ಲಿರುವ ಆಶಯ. ಸೃಜನಶೀಲ ಕೃತಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ನಾನು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದೇನೆಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಮೂಲಕ ನಾಡಗೀತೆಗೆ ಅವಮಾನ ಮಾಡಿದವರನ್ನು ಸಮರ್ಥಿಸಿಕೊಳ್ಳುವ ಹುನ್ನಾರ ವ್ಯಕ್ತವಾಗಿದೆ. ಇನ್ನು ಗಂಗೆಯನ್ನು ನಾನು ಅವಮಾನಿಸಿಲ್ಲ. ಗಂಗೆಯಂತಿರುವ ಸತ್ಯ, ಸಮಾನತೆಗಳನ್ನು ಕ್ಷುಲ್ಲಕ ರಾಜಕೀಯ ರಂಗವು ಅತ್ಯಾಚಾರ ಮಾಡುತ್ತಿದೆ ಎಂಬ ಅರ್ಥಕ್ಕಾಗಿ ಆ ಸಾಲುಗಳನ್ನು ಬರೆದಿದ್ದೇನೆ.

ನನ್ನ ಒಟ್ಟು ಬರಹಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಹೃದಯರಿಗೆ ನನ್ನಲ್ಲಿರುವ ಸಮಾಜ ಬದಲಾವಣೆಯ ಆಶಯ ಮತ್ತು ದೇಶ ಬದ್ಧತೆ ಅರ್ಥವಾಗುತ್ತದೆ. ನಾನು ಸದಾ ಸಮಾಜಿಕ ಕಾಳಜಿಯ ದೇಶನಿಷ್ಠ ಲೇಖಕ.

ಇಷ್ಟಾಗಿಯೂ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದರೆ, ಜನರಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ಇದು ಜನರಿಗೆ ನಾನು ಕೊಡುವ ಗೌರವ.

ಇನ್ನೊಂದು ವಿಷಯ ಹೇಳಬೇಕು. ಕೆಲವು ತಿಂಗಳ ಹಿಂದೆ ನನ್ನ ಸಮಗ್ರ ಸಾಹಿತ್ಯ ಸಂಪುಟಗಳು ಬಂದಿವೆ. ಅದರಲ್ಲಿ ಪರಿಷ್ಕರಣೆ ಕೂಡ ಮಾಡಿದ್ದೇನೆ. ಅದರಲ್ಲಿ ಭರತ ನಗರಿ ಕಾದಂಬರಿ ಯೂ ಒಂದು. ರಾಷ್ಟ್ರ ಗೀತೆಯ ಲಯದಲ್ಲಿದ್ದ ಗೀತೆಯನ್ನು ಬಿಟ್ಟಿದ್ದೇನೆ. ಅಂದರೆ ಹಿಂದಕ್ಕೆ ತೆಗೆದುಕೊಂಡು ಸಮತೆ ಮತ್ತು ಮಮತೆಯ ದೇಶ ಕಟ್ಟಬೇಕು ಎಂಬ ಗೀತೆ ಹಾಕಿದ್ದೇನೆ. ಹೀಗಿರುವಾಗ 40 ವರ್ಷಗಳ ಹಿಂದಿನ ಪಠ್ಯ ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುವುದೇ ಅಪ್ರಸ್ತುತ. ಈಗ ಹಿಂದಿನ ಗೀತೆ ಇಲ್ಲ. ಇದು ಮುಖ್ಯ.

Previous Post

ಸಾರಿಗೆ ನೌಕರರ ಆತ್ಮಹ ತ್ಯೆಗೆ ನ್ಯಾಯ ದೊರಕಿಸಿಕೊಡಲು ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

Next Post

ಸಿಬಿಐ ದಾಳಿ : ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದ ಮನೀಶ್‌ ಸಿಸೋಡಿಯಾ

Related Posts

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?
Top Story

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆಗೆ ಇಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಈಗಾಗಲೇ ಇದೇ ಸಭೆಗಾಗಿ ಹೈಕಮಾಂಡ್‌ ಕರೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ...

Read moreDetails
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
Next Post
ಸಿಬಿಐ ದಾಳಿ : ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದ ಮನೀಶ್‌ ಸಿಸೋಡಿಯಾ

ಸಿಬಿಐ ದಾಳಿ : ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದ ಮನೀಶ್‌ ಸಿಸೋಡಿಯಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada