ಮಠದ ವಸತಿ ಶಾಲೆಯಲ್ಲಿ ವಾಸವಿದ್ದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯರನ್ನು ಮಂಗಳವಾರ ಮಧ್ಯಾಹ್ನ ಹಾಜರುಪಡಿಸಲಾಯಿತು.
ಮಧ್ಯಾಹ್ನ 2 ಘಂಟೆ ಸುಮಾರಿಗೆ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ನ್ಯಾಯಾಲಯಕ್ಕೆ ಹಾಜರಾದ ಬಾಲಕಿಯರು ನ್ಯಾಯಾಧೀಶದ ಎದುರು ಭಾರತ ದಂಡ ಸಂಹಿತೆ 164ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.

ಜಿಲ್ಲೆಯ ಎರಡನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾದ ಬಾಲಕಿಯರ ಜೊತೆ ಒಡನಾಡಿ ಸಂಸ್ಥೆಯ ಸದಸ್ಯರು ಹಾಗೂ ಬಾಲಭವನದ ಅಧಿಕಾರಿಗಳು ಜೊತೆಗಿದ್ದರು.
ಬಾಲಕಿಯರು ನ್ಯಾಯಾಲಯಕ್ಕೆ ಬರುವ ವಿಚಾರ ತಿಳಿದ ಸಾರ್ವಜನಿಕರು ನ್ಯಾಯಾಲಯದ ಮುಂದೆ ಜಮಾಯಿಸಿದ್ದರು. ಪೊಲೀಸರು ಗುಂಪನ್ನು ಚದುರಸಿದ್ದರು.