DRDOದ ನೂತನ ಮುಖ್ಯಸ್ಥರಾಗಿ ಹಾಗೂ ರಕ್ಷಣಾ ಸಂಶೋಧನೆ ಅಭಿವೃದ್ದಿ ವಿಭಾಗದ ಕಾರ್ಯದರ್ಶಿಯಾಗಿ ಖ್ಯಾತ ವಿಜ್ಞಾನಿ ಸಮೀರ್ ಕಾಮತ್ರನ್ನು ರಕ್ಷಣಾ ಇಲಾಖೆ ನೇಮಿಸಿ ಆದೇಶ ಹೊರಡಿಸಿದೆ.
ಈ ಹಿಂದೆ DRDO ಮುಖ್ಯಸ್ಥರಾಗಿದ ಸತೀಶ್ ರೆಡ್ಡಿಯವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಿದ ಕಾರಣ ಕಾಮತ್ರನ್ನು ನೂತನ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ.
ಸಂಪುಟ ನೇಮಕಾತಿ ಸಮಿತಿ(ACC)ಯೂ ಕಾಮತ್ ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದು ಅಧಿಕಾರ ಸ್ವೀಕರಿಸಿದ ದಿನದಿಂದ ನಿವೃತ್ತಿಯಾಗುವವರೆಗೂ ಕಾಮತ್ ಈ ಹುದ್ದೆಯಲ್ಲಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.