ಕೊಡಗಿನ ಜನಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಅಲ್ಲಿನ ಜನಕ್ಕೆ ಸಾಕಷ್ಟು ಅಕ್ರೋಶ ಇದ್ದು ಅವರಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಆಗತ್ಯ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನ ಜನರಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಆಗತ್ಯ ಇದೆ. ಕೊಡಗಿನ ಜನರು ಎದುರಿಸುತ್ತಿರುವ ಕಾಫಿ ಬೆಳೆಯ ಸಮಸ್ಯೆ ಬಗೆಹರಿಸಬೇಕಿದೆ. ಕೊಡಗು ಪ್ರವಾಸೋದ್ಯಮಕ್ಕೆ ಸೂಕ್ತವಾದ ಸ್ಥಳವಾಗಿದೆ. ಸರಣಿ ಸಮಸ್ಯೆಯ ಮಧ್ಯೆ ಕೊಡಗು ಸಿಲುಕಿದ್ದು, ಕೊಡಗಿನ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕಿದೆ ಅಂತ ವಿಶ್ವನಾಥ್ ಹೇಳಿದ್ರು.

ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆತ ಒಪ್ಪುವ ವಿಚಾರ ಅಲ್ಲ, ಅದನ್ನು ಹಿರಿಯ ರಾಜಕಾರಣಿಗಳು ಖಂಡಿಸಿದ್ದಾರೆ. ಹೀಗಾಗಿ ಮಡಿಕೇರಿ ಚಲೋ ನಡೆಸುವ ಬಗ್ಗೆ ಯೋಚನೆ ಮಾಡಬೇಕಿದ್ದು, ನಾಳೆ ದಿನ ಅನಾಹುತ ಸಂಭವಿಸಿದ್ರೆ ಅದಕ್ಕೆ ಯಾರು ಹೊಣೆ ಎಂದ ಪ್ರಶ್ನಿಸಿದರು.