ಎನ್ 1 ಅಕಾಡೆಮಿ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯಗೊಂಡಿದೆ. ಒಂದೊಳ್ಳೆ ಧ್ಯೇಯ ಇಟ್ಟುಕೊಂಡು ಟೂರ್ನಿ ಏರ್ಪಡಿಲಾಗಿತ್ತು. ಹಿರಿಯ ಕಲಾವಿದರಿಗೆ ಈ ಪಂದ್ಯಾವಳಿಯಿಂದ ಸಹಾಯ ಮಾಡುವುದಾಗಿ ಆಯೋಜಕ ಸುನಿಲ್ ಕುಮಾರ್ ಬಿ ಆರ್ ಈ ಹಿಂದೆಯೇ ತಿಳಿಸಿದ್ದರು.
ಅದರಂತೆ ಸೀರಿಯಲ್ನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಾರ್ಥ ಎಂಬುವವರ ಎರಡು ಕಿಡ್ನಿಗಳು ವೈಫಲ್ಯಗೊಂಡಿದ್ದು ಅವರಿಗೆ ಟಿಪಿಎಲ್ನಿಂದ ಬಂದ ಹಣದಿಂದ ಧನ ಸಹಾಯ ಮಾಡಲಾಗಿದೆ ಎಂದು ಪಂದ್ಯಾವಳ ಆಯೋಜಕ ಸುನೀಲ್ ತಿಳಿಸಿದ್ದಾರೆ.
ಆಗಸ್ಟ್ 18 ರಿಂದ 20ರವರೆಗೆ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಂಜಿತ್ ಕುಮಾರ್ ನಾಯಕತ್ವದ ಭಜರಂಗಿ ಲಯನ್ಸ್ ಟಿಪಿಎಲ್ ಕಪ್ ಗೆ ಮುತ್ತಿಟ್ಟಿದೆ. ಹರ್ಷ ಸಿಎಂ ಗೌಡ ನಾಯಕತ್ವದ ಎಂಜಲ್ XI ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಒಟ್ಟು ಆರು ತಂಡಗಳು ಈ ಟೂರ್ನಮೆಂಟ್ ನಲ್ಲಿ ಭಾಗಿಯಾಗಿದ್ದವು.
