• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೈಕೊಟ್ಟ ಆಸ್ತಿ ನೋಂದಣಿ ಸಾಫ್ಟ್‌ ವೇರ್: ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಜನರ ಆಕ್ರೋಶ

Any Mind by Any Mind
August 18, 2022
in ಕರ್ನಾಟಕ
0
5 ವರ್ಷದಲ್ಲಿ ಮನೆ ಕಟ್ಟದಿದ್ದರೆ ಬೀಳುತ್ತೆ ದಂಡ: ಬಿಡಿಎ ನಿವೇಶನದಾರರಿಗೆ ಶಾಕ್!
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಇಂದು ದಿಢೀರನೆ ಸಬ್‌ ರಿಜಿಸ್ಟ್ರಾರ್‌ (sub registrar) ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಬ್ರೇಕ್‌ ಬಿದ್ದಿದ್ದರಿಂದ ಜನರು ಆಕ್ರೋಶಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಕಂದಾಯ ಇಲಾಖೆ ವ್ಯಾಪ್ತಿಗೆ ಬೆಂಗಳೂರಿನ 43 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಆಸ್ತಿ ನೋಂದಣಿ ಗುರುವಾರ ದಿಢೀರನೆ ನಿಲ್ಲಿಸಲಾಗಿತ್ತು. ಸ್ವತಃ ಅಧಿಕಾರಿಗಳಿಗೆ ಈ ಮಾಹಿತಿ ಇಲ್ಲದ ಕಾರಣ ಗೊಂದಲದ ವಾತಾವರಣ ಏರ್ಪಟ್ಟರೆ, ಸಾರ್ವಜನಿಕರು ಕಾರಣ ತಿಳಿಯದೇ ಆಕ್ರೋಶಗೊಂಡರು.

ಗುರುವಾರ ಬೆಳಿಗ್ಗೆನೇ ನಗರದ ಆಸ್ತಿ ನೋಂದಣಿ ಮಾಡಿಕೊಳ್ಳಲು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಆಗಮಿಸಿದ್ದ ಸಾವಿರಾರು ನಾಗರಿಕರು ಬರಿಗೈಯಲ್ಲಿ ಮರಳಿದ್ದಾರೆ. ಸ್ಪಷ್ಟ ಮಾಹಿತಿ ಇಲ್ಲದ ಅಧಿಕಾರಿಗಳು ಜನರಿಗೆ ಉತ್ತರ ಹೇಳಲೂ ಆಗದೇ ಸಮರ್ಪಕ ಮಾಹಿತಿ ನೀಡಲು ಆಗದೇ ನಾಗರಿಕರಿಂದ ನಿಂದನೆಗೆ ಒಳಗಾಗಿದ್ದಾರೆ.

ಹೌದು, ಮುನ್ನೆಚ್ಚರಿಕೆ ಅಥವಾ ಪೂರ್ವ ಸಿದ್ದತೆ ಇಲ್ಲದೇ ಏಕಾಏಕಿ ಸರಕಾರ ಮಾಡುವ ಕೆಲಸಗಳು ಕೆಲವೊಮ್ಮೆ ಅಧಿಕಾರಿಗಳನ್ನು ಮುಜುಗರಕ್ಕೆ ಒಳಪಡಿಸಿದರೆ, ದೂರದಿಂದ ಬಂದ ನಾಗರಿಕರು ಕೆಲಸ ಆಗದೇ ಸೂಕ್ತ ಮಾಹಿತಿಯೂ ಇಲ್ಲದೇ ಅಸಮಾಧಾನಗೊಳ್ಳುವಂತಾಗಿದೆ. ಇದಕ್ಕೆ ಗುರುವಾರ ನಡೆದ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿನ ಗೊಂದಲವೇ ಕಾರಣ.

ಇಷ್ಟಕ್ಕೂ ಆಗಿದ್ದೇನು?

ಕಂದಾಯ ಇಲಾಖೆ ಕಾಲಕಾಲಕ್ಕೆ ಆಸ್ತಿ ನೋಂದಣಿ ವೆಬ್‌ ಸೈಟ್‌ ನ ಸಾಫ್ಟ್‌ ವೇರ್‌ ಅಪ್‌ ಡೇಟ್‌ ಮಾಡಲು ಮುಂದಾಗಿದೆ. ಸಾಫ್ಟ್‌ ವೇರ್‌ ಅಪ್‌ ಡೇಟ್‌ ಮಾಡುವಾಗ ಬಿಡಿಎ ಆಸ್ತಿ ನೋಂದಣಿ ವಿಭಾಗದ ರಿಜಿಸ್ಟ್ರೇಷನ್‌ ಕೆಟಗರಿ ವಿಭಾಗ ಕೈಕೊಟ್ಟಿದೆ. ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ನೋಂದಣಿ ಮಾಡಿಕೊಳ್ಳಲು ಆಗಲಿಲ್ಲ.

ನಂತರ ಮೇಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಸಾಫ್ಟ್‌ ವೇರ್‌ ಅಪ್‌ ಡೇಟ್‌ ನಡೆಯುತ್ತಿದೆ. ಹಾಗಾಗಿ ಇವತ್ತು ಆಸ್ತಿ ನೋಂದಣಿ ನಡೆಯುವುದಿಲ್ಲ. ನಾಳೆ ಸರಿಹೋಗಬಹುದು ಎಂಬ ಹಾರಿಕೆ ಉತ್ತರ ಬಂದಿದೆ. ನಾಗರಿಕರ ಅದೃಷ್ಟ ಚೆನ್ನಾಗಿದ್ದರೆ ನಾಳೆ ಸರಿಹೋಗುತ್ತದೆ. ಅದು ಎಷ್ಟು ಹೊತ್ತಿಗೆ ಎಂಬುದು ತಿಳಿದಿಲ್ಲ. ಇಲ್ಲದಿದ್ದರೆ ಶನಿವಾರ ಸರಿ ಹೋಗಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಶನಿವಾರ ಭಾನುವಾರ ಬಿಟ್ಟರೆ ಸೋಮವಾರದವರೆಗೂ ಜನರು ಆಸ್ತಿ ನೋಂದಣಿಗೆ ಕಾಯಬೇಕಾಗುತ್ತದೆ.

ತಾಂತ್ರಿಕ ದೋಷದಿಂದ ಕೇವಲ ಬಿಡಿಎ ನಿವೇಶನ ಹಾಗೂ ಆಸ್ತಿ ನೋಂದಣಿ ಮಾತ್ರ ಈ ರೀತಿ ಆಗಿದ್ದು, ಬಿಬಿಎಂಪಿ ಆಸ್ತಿ ನೋಂದಣಿಗೆ ಯಾವುದೇ ಪ್ರಕ್ರಿಯೆಗೆ ಅಡ್ಡಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 43 ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿದ್ದು, ಇಲ್ಲಿ ಪ್ರತಿನಿತ್ಯ 50ರಿಂದ 100 ಆಸ್ತಿ ನೋಂದಣಿಗಳು ನಡೆಯುತ್ತವೆ. ಅಂದರೆ ಪ್ರತಿದಿನ ಸುಮಾರು 50 ಕೋಟಿ ರೂ.ವಷ್ಟು ವಹಿವಾಟು ನಡೆಯುತ್ತದೆ. ಮಾಸಿಕ ೨೦೦೦ ಕೋಟಿ ವರೆಗೂ ದಾಟುತ್ತದೆ. ಕೋಟ್ಯಂತರ ರೂಪಾಯಿ ಆದಾಯ ತರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲೇ ಈ ರೀತಿ ಪದೇಪದೆ ಆಸ್ತಿ ನೋಂದಣಿಗೆ ಸಮಸ್ಯೆ ಆದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

Tags: BDApratidhvnaisub registrer
Previous Post

ಮಹಾರಾಷ್ಟ್ರ; ರಾಯಗಢದ ಕಾರವಾಳಿಯ ಬೋಟ್‌ನಲ್ಲಿ ಎಕೆ-47 ರೈಫಲ್‌ ಪತ್ತೆ

Next Post

ಬಿಹಾರ; ವಿದ್ಯಾರ್ಥಿನಿಗೆ ಗುಂಡಿಕ್ಕಿದ ಪಾಗಲ್ ಪ್ರೇಮಿ

Related Posts

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?
ಅಂಕಣ

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

by ಪ್ರತಿಧ್ವನಿ
April 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ...

Read moreDetails
ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

April 13, 2026
ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

April 13, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
Next Post
ಬಿಹಾರ; ವಿದ್ಯಾರ್ಥಿನಿಗೆ ಗುಂಡಿಕ್ಕಿದ ಪಾಗಲ್ ಪ್ರೇಮಿ

ಬಿಹಾರ; ವಿದ್ಯಾರ್ಥಿನಿಗೆ ಗುಂಡಿಕ್ಕಿದ ಪಾಗಲ್ ಪ್ರೇಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada