ಬಿಬಿಎಂಪಿ ಚುನಾವಣೆಗೆ ನಿಧಾನವಾಗಿ ಸರ್ಕಾರ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಸುಪ್ರೀಂ ಕೊಟ್ಟ ಡೆಡ್ ಲೈನ್ ಒಳಗೆ ಚುನಾವಣೆ ಪ್ರಕ್ರಿಯೆ ಮುಗಿಸ್ಬೇಕು ಅಂತ ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು, ಈಗಾಗಲೇ ವಾರ್ಡ್ ಮರುವಿಂಗಡಣೆಯನ್ನ ಫೈನಲ್ ಮಾಡಿದೆ. ಆದ್ರೆ ತರಾತುರಿಯಲ್ಲಿ ನಿಗಧಿ ಮಾಡಿರೋ ಮೀಸಲಾತಿ ವಿಚಾರಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲ್ಲೆಯಲ್ಲಿ ಹಳೆ ಮೀಸಲಾತಿ ಪ್ರಕಾರ ಚುನಾವಣೆ ನಡೆಸಲು ಸರ್ಕಾರ ಮುಂದೆ ಬಂದಿದೆ.
ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ
ಸಾಕಷ್ಟು ಕುತೂಹಲ ಮೂಡಿಸಿರೋ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸರ್ಕಾರ ಪದೆ ಪದೇ ಎಡವುತಿದ್ಯಾ ಅನ್ನೋ ಅನ್ನುಮಾನ ಮೂಡ್ತಿದೆ. 198 ಇದ್ದ ವಾರ್ಡ್ಗಳ ಸಂಖ್ಯೆಯನ್ನ 243 ಕ್ಕೆ ಏರಿಕೆ ಮಾಡಿದಾಗ್ಲೂ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಇದೀಗ ಮೀಸಲಾತಿ ವಿಚಾರದಲ್ಲೂ ಅದೇ ರೀತಿ ಆಗಿದೆ ಅನ್ನೋ ಕೂಗು ಕೇಳಿ ಬರ್ತಿದೆ. ಒಂದ್ಕಡೆ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ದೋಷವಿಲ್ಲ ಅಂತ ಬಿಜೆಪಿ ಸಮರ್ಥನೆ ಮಾಡಿಕೊಳ್ತಿದ್ರೆ. ಮತ್ತೊಂದ್ಕಡೆ ಹಳೆ ಮೀಸಲಾತಿ ಪ್ರಕಾರ ಚುನಾವಣೆ ನಡೆಸ್ತಿವಿ ಅಂತ ಸಚಿವ ಮಾಧುಸ್ವಾಮಿ ತಿಳಿಸಿದ್ರು.

OBC ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ಬಿಜೆಪಿ ಸರ್ಕಾರ
ಪಾಲಿಕೆ ಚುನಾವಣೆಗೆ ಕ್ಷಣಗಣನೆ ಅರಂಭವಾಗ್ತಿದ್ದ ಹಾಗೆ ಬಿಜೆಪಿಯಲ್ಲಿ ಮತ್ತೆ ಅಪಸ್ವರ ಕೇಳಿ ಬರ್ತಿದೆ. ಕಳೆದ ವಾರ ವಾರ್ಡ್ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದ್ದೇ ತಡ ಸ್ವಪಕ್ಷ ಬಿಜೆಪಿಯಲ್ಲೇ ಅಕ್ರೋಶ ಭುಗಿಲೆದ್ದಿತ್ತು. ಕಳೆದ ಒಂದು ವರ್ಷದಿಂದ ಬಿಜೆಪಿ ಪಕ್ಷದ ಅಕಾಂಕ್ಷಿಗಳು ತಮ್ಮ ತಮ್ಮ ವಾರ್ಡ್ ಗಳಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ಮತಾದಾರರ ಓಲೈಕೆಗೆ ಮುಂದಾಗಿದ್ರು. ಆದರೆ ಬಿಜೆಪಿ ಸರ್ಕಾರ ಮೀಸಲಾತಿ ಹೆಸರಲ್ಲಿ ಬದಲಾವಣೆ ತಂದ್ದಿರಿಂದ ಸ್ವಪಕ್ಷದ ಮುಖಂಡರೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ರು. ಇತ್ತ ಕ್ಷೇತ್ರದ ಶಾಸಕರಿಗೂ ಈ ಮೀಸಲಾತಿ ಇರಿಸು ಮುರಿಸಗಿತ್ತು. ಇನ್ನೂ ವಿಪಕ್ಷಗಳು ಕೂಡ ಮೀಸಲಾತಿ ಹೆಸರಲ್ಲಿ ಬಿಜೆಪಿ ಸರ್ಕಾರ ಡಬಲ್ ಗೇಮ್ ಮಾಡಿದೆ ಅಂತ ಕೋರ್ಟ ಮೆಟ್ಟಿಲೂ ಏರಿದ್ರು. ಕೋರ್ಟ್ ಕೂಡ ಇದೆ ತಿಂಗಳ 16 ರ ರವರೆಗೆ ಯಾವುದೇ ಮೀಸಲಾತಿಯನ್ನೂ ಅಂತ್ತಿಮಗೋಳಿಸಬಾರದು ಅಂತ ಅದೇಶ ನೀಡಿತ್ತು.
ಹಳೆಯ 13% ಮೀಸಲಾತಿ ಮುಂದುವರಿಸಲು ಸರ್ಕಾರದಿಂದ ತೀರ್ಮಾನ
ಇನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ನಡೆಸಿದ ಸಂಪುಟ ಮಂತ್ರಿಗಳು ಹಾಗೂ ಮುಖ್ಯ ಮಂತ್ರಿಗಳು ಕೆಲ ನಿರ್ದಾರಗಳನ್ನೂ ಕೈಗೊಂಡು, ಮಾಧ್ಯಮಾಗಳ ಜೊತೆ ಹಂಚಿಕೊಂಡರು. ಈ ಬಾರಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ. ಒಬಿಸಿ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದು, ಹಳೆಯ 13% ಮೀಸಲಾತಿ ಮುಂದುವರೆಸಿ, 2027-28ರವರೆಗೆ ಒಬಿಸಿ ಹಾಲಿ ಮೀಸಲಾತಿ ಮುಂದುವರಿಕೆ ಮಾಡಲಾಗುತ್ತೆ. 2027 ಕ್ಕೆ ಒಬಿಸಿಗೆ ಹೊಸ ಮೀಸಲಾತಿ ಜಾರಿ ಮಾಡ್ತಿವಿ. ಬಿಬಿಎಂಪಿ ಮೇಯರ್ ಅಧಿಕಾರಾವಧಿ 30 ತಿಂಗಳಿಗೆ ಹೆಚ್ಚಿಸಿದೆ. ಸುಪ್ರೀಂ ಆದೇಶದಂತೆ ಪಾಲಿಕೆ ಚುನಾವಣೆ ಮುಗಿಸುತ್ತೇವೆ ಅಂತ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದರು. ಒಟ್ಟಾರೆ ಬಿಬಿಎಂಪಿ ಚುನಾವಣೆ ಮುಂದುಡಲೂ ಬಿಜೆಪಿ ಶಾಸಕರು ರಾತ್ರಿ ಹಗಲು ಎನ್ನದೆ ಕಸರತ್ತು ನಡೆಸಿದ್ದರು. ಆದರೆ ಹೈ ಕೋರ್ಟ್ ಕೊಟ್ಟ ಏಟಿನಿಂದ ಎಚ್ಚೆತ್ತುಕೊಂಡ ಸರ್ಕಾರ ಚುನಾವಣೆ ನಡೆಸಲು ಮುಂದಾಗಿದೆ.











