ಕೇಂದ್ರ ಸರಕಾರ ಕೋಟ್ಯಾಧಿಪತಿಗಳ ಸಾಲಮನ್ನಾ ಮಾಡುತ್ತೆ. ಆದರೆ ಬಡವರಿಗೆ ತೆರಿಗೆ ಹೊರೆ ಹೇರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಜನರಿಗೆ ಉಚಿತ ಸೇವೆಗಳನ್ನು ನೀಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಹಾಗೂ ಅವರ ಕಂಪನಿಗಳಿಗೆ 10 ಲಕ್ಷ ಕೋಟಿ ಹಾಗೂ 5 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದೆ ಎಂದು ಕೇಜ್ರಿವಾಲ್ ಗಂಭೀರ ಆರೋಪ ಮಾಡಿದರು.

ಶ್ರೀಮಂತರ ತೆರಿಗೆ ಮನ್ನಾ ಮಾಡುವ ಕೇಂದ್ರ ಸರಕಾರ ಬಡವರಿಗೆ ತೆರಿಗೆ ವಸೂಲಿ ಮಾಡುತ್ತಿದೆ. ಬಡವರು ಮತ್ತು ಅತೀ ಬಡವರ ಮೇಲೆ ತೆರಿಗೆ ವಿಧಿಸಲು ಇದು ಸಮಯವೇ ಎಂದು ಅವರು ಪ್ರಶ್ನಿಸಿದರು.
ನಮ್ಮ ದೇಶದಲ್ಲಿ ಭಿಕ್ಷುಕರು ಕೂಡ ಮಾರುಕಟ್ಟೆಯಲ್ಲಿ ಅಕ್ಕಿ- ಗೋಧಿ ಖರೀದಿಸಿದರೂ ತೆರಿಗೆ ಹಾಕುವ ಪರಿಸ್ಥಿತಿ ಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ವರ್ಷ 3.5 ಲಕ್ಷ ಕೋಟಿ ತೆರಿಗೆ ವಸೂಲು ಮಾಡುತ್ತಿದೆ. ಆದರೂ ಕೇಂದ್ರದ ತೆರಿಗೆ ದಾಹ ನಿಂತಿಲ್ಲ ಎಂದು ಕೇಜ್ರಿವಾಲ್ ಹೇಳಿದರು.








