ನೀವು ಬಿಎಂಟಿಸಿ ಪ್ರಯಾಣಿಕರೇ? ದಿನವೂ ದುಡ್ಡು ಕೊಟ್ಟು ಟ್ರಾವೆಲ್ ಮಾಡೋ ಪ್ರಯಾಣಕರಿಗೆ ಗುಡ್ ನ್ಯೂಸ್ ಇದೆ. ನೀವು ಆಗಸ್ಟ್ 15ರಂದು ದುಡ್ಡಿಲ್ಲದೇ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಎಲ್ಲಿಂದ ಎಲ್ಲಿಯವರೆಗಾದ್ರೂ ಫ್ರೀನೆ. ಸ್ವಾತಂತ್ರ್ಯೋತ್ಸವದ ಭಾಗವಾಗಿ ಬಿಎಂಟಿಸಿ ಈ ನಿರ್ಧಾರ ತೆಗೆದುಕೊಂಡಿದೆ.
75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬಿಎಂಟಿಸಿ ಗೆ 25 ವರ್ಷ ತುಂಬಿದ ಹಿನ್ನೆಲೆ ಬೆಂಗಳೂರಿಗರಿಗೆ ಬಿಎಂಟಿಸಿ ಭರ್ಜರಿ ಗಿಫ್ಟ್ ನೀಡಿದೆ. ದಿನ ಪೂರ್ತಿ ಬೆಂಗಳೂರಿಗರು ಒಂದು ರೂಪಾಯಿ ಬಸ್ ಚಾರ್ಜ್ ನೀಡದೆ ಪ್ರಯಾಣ ಮಾಡಬಹುದಾಗಿದೆ. ಹೌದು. ಈ ವಿಚಾರದ ಕುರಿತು ಸುದ್ದಿಗೋಷ್ಟಿ ನಡೆಸಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸಂತಸ ಹಂಚಿಕೊಂಡರು. ಯಶಸ್ವಿಯಾಗಿ 25 ವರ್ಷ ಪೂರೈಸಿದ ಬಿಎಂಟಿಸಿಯ ರಜತ ಮಹೋತ್ಸವ ಹಿನ್ನೆಲೆ ಆಗಸ್ಟ್ 15 ರಂದು ಒಂದು ದಿನ ಪೂರ್ತಿ ಬೆಂಗಳೂರಿಗರು ಬಿಎಂಟಿಸಿಯಲ್ಲಿ ಎಲ್ಲಿಂದ ಎಲ್ಲಿಗೆ ಸಂಚಾರ ಮಾಡಿದ್ರು, ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ಕೇವಲ ನಾನ್ ಎಸಿ ನಾನ್ ಎಸಿ ಬಸ್ ಮಾತ್ರವಲ್ಲ ಎಸಿ ವಜ್ರ ಸಹಿತ ಯಾವುದೇ ಬಸ್ ಆದರೂ ಆಗಸ್ಟ್ 15ರ ಒಂದು ದಿನ 24 ಗಂಟೆ ಉಚಿತವಾಗಿ ಓಡಾಟ ಮಾಡಬಹುದು ಎಂದು ತಿಳಿಸಿದರು.

ಬಿಎಂಟಿಸಿಯ ಒಂದು ದಿನದ ಆದಾಯ 3.5 ಕೋಟಿಯಷ್ಟು ಇದ್ದು, ಆ ಇಡೀ ಆದಾಯವನ್ನ ಸಾರ್ವಜನಿಕರಿಗೆ ಉಚಿತ ಸೇವೆಗೆ ಮೀಸಲಿಡಲಿದ್ದೇವೆ. ಈ ವಿಚಾರಕ್ಕೆ ಸರ್ಕಾರ ಸಹ ಒಪ್ಪಿಗೆ ನೀಡಿದೆ. ಪ್ರತಿಯೊಬ್ಬ ಪ್ರಯಾಣಿಕರು ಇದರ ಲಾಭ ಪಡೆಯಬೇಕಾಗಿ ಬಿಎಂಟಿಸಿ ಮನವಿ ಮಾಡಿಕೊಂಡಿದೆ. ಇಷ್ಟೇ ಅಲ್ಲ ಪ್ರಯಾಣಿಕರ ಜೊತೆಗೆ ಸಿಬ್ಬಂದಿಗಳಿಗೂ ಗುಡ್ ನ್ಯೂಸ್ ಇದೆ. ಕಳೆದ ಒಂದು ವರ್ಷದಿಂದ ಯಾವುದೇ ಅಪಘಾತ ಮಾಡದ ಮತ್ತು ಕೆಲಸದಲ್ಲಿ ಶಿಸ್ತು ಕಾಪಾಡಿಕೊಂಡಿರುವ ಸಿಬ್ಬಂದಿಗೆ ಚಿನ್ನದ ನಾಣ್ಯ ಮತ್ತು ಬೆಳ್ಳಿ ನಾಣ್ಯ ವಿತರಣೆಗೆ ಸಿದ್ದತೆ ಮಾಡಲಾಗಿದೆ. ಈ ಕಾರ್ಯಕ್ರಮ ಆಗಸ್ಟ್ 16 ರಂದು ನಡೆಯಲಿದ್ದು 168 ಸಿಬ್ಬಂದಿಗೆ ಚಿನ್ನ, 2968 ಸಿಬ್ಬಂದಿಗೆ ಬೆಳ್ಳಿ ನಾಣ್ಯ ವಿತರಣೆ ಮಾಡಲಿದೆ. ಒಟ್ಟಾರೆ ಬಿಎಂಟಿಸಿ ತನ್ನ ರಜತ ಮಹೋತ್ಸವ ಹಾಗೂ ಅಮೃತ ಮಹೋತ್ಸವದ ಸ್ವಾತಂತ್ರ್ಯ ಸಂಭ್ರಮದ ವೇಳೆಯೇ ಬಿಎಂಟಿಸಿ ಪ್ರಯಾಣಿಕರಿಗೆ ಒಂದು ದಿನ ಉಚಿತ ಸೌಲಭ್ಯ ನೀಡ್ತಿರುವುದು ಬಹಳ ಖುಷಿಯ ವಿಚಾರ.











