ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲರನ್ನು ಒಳಗೊಂಡ ಮತ್ತು ಎಲ್ಲರನ್ನು ತಲುಪುವ ಸರ್ಕಾರ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಶಾ ಹಿಂದೆ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು ಆದ್ದರಿಂದಲ್ಲೇ ಹಲವು ಹಗರಣಗಳು ನಡೆದವು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ಎಂಟು ವರ್ಷಗಳಲ್ಲಿ ಸರ್ವ ಸ್ಪರ್ಶಿ ಸರ್ವ ಸಮಾವೇಶಿ ಸರ್ಕಾರವನ್ನ ನೀಡಿದ್ದಾರೆ. ನಾವು ಎಲ್ಲಾ ಸಮಾಜದ ಕಲ್ಯಾಣಕ್ಕಾಗಿ ಪ್ರತಿಜ್ಞೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಬಂದಮೇಲೆ ಅನೇಕ ಕ್ಷೇತ್ರಗಳಲ್ಲಿ ಸುಧಾರಣೆ ತರಲಾಗಿದೆ. 2014ಕ್ಕು ಮೊದಲು ಪ್ರಧಾನ ಮಂತ್ರಿ ಯಾರೋ ಬೇರೆಯವರಿದ್ದರು ಪ್ರತಿ ಮಂತ್ರಿ ಅಥವಾ ಸಂಸದರು ಅವರನ್ನು ಭೇಟಿ ಮಾಡಬೇಕಿತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಹಿಂದಿನ ಸರ್ಕಾರವಿದ್ದ ಸಮಯದಲ್ಲಿ 12 ಲಕ್ಷ ಕೋಟಿ ರೂಪಾಯಿಯಷ್ಟು ಹಗರಣಗಳು ನಡೆದಿದ್ದವು. ಕ್ರೋನಿ ಕ್ಯಾಪಿಟಲಿಸಂ ಹಾಗೂ ಬೆಲೆ ಏರಿಕೆ ಗಗನ ಮುಟ್ಟಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತೀಯ ಕೈಗಾರಿಕ ಒಕ್ಕೂಟ ಆಯೋಜಿಸಿದ್ದ ಆಜಾದಿ ಕಾ ಅಮೃತ್ ಮಹೋತ್ಸವ್ ಸಂಕಲ್ಪ್ ಕೇ ಸಿದ್ದಿ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಯುಪಿಎ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.