ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಕೇಸರಿ ಪಾಳಯ ಸೇರಿದ್ದ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ 38 ಕ್ಕು ಹೆಚ್ಚು ಟಿಎಂಸಿ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
38 ಜನರ ಪೈಕಿ 21 ಮಂದಿ ತಮ್ಮ ಜೊತೆ ನೇರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಮುಂಬೈನಲ್ಲಿರುವಾಗ ಶಿವಸೇನೆ ಹಾಗೂ ಬಿಜೆಪಿ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವನ್ನ ರಚಿಸಿತ್ತು. ಅದೇ ರೀತಿ ಬಂಗಾಳದಲ್ಲು ಸಹ ಆಗುತ್ತದೆ ಎಂದಿದ್ದಾರೆ.
ಈಗಾಗಲೇ ಬಿಜೆಪಿ 18 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ ಆದಷ್ಟು ಬೇಗ ಪಕ್ಷದ ಧ್ವಜವಿ ಬೇರೆ ರಾಜ್ಯಗಳಲ್ಲು ಸಹ ಹಾರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೂ ಪಶ್ಚಿಮ ಬಂಗಾಳದಲ್ಲಿ ತನ್ನ ಹೋರಾಟವನ್ನ ನಿಲ್ಲಿಸುವುದಿಲ್ಲ ಈಗಲೂ ಸಹ ನ್ಯಾಯೋಚಿತ ಚುನಾವಣೆ ನಡೆಸಿದರು ಸಹ ಬಿಜೆಪಿ ಅಧಿಕಾರದ ಹದ್ದುಗೆ ಏರುತ್ತದೆ ಎಂದು ಹೇಳಿದ್ದಾರೆ.

ಸುದ್ದಿ ಅಲ್ಲಗಳೆದ ಟಿಎಂಸಿ
ಮಿಥುನ್ ಚಕ್ರವರ್ತಿ ಈ ರೀತಿ ಸುಳ್ಳುಗಳನ್ನು ಹೇಳುವ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದ್ದಾರೆ ಎಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ಸಂಸದ ಶಂತನು ಸೇನ್ ಇದು ಜನರನ್ನು ದಾರಿ ತಪ್ಪಿಸುವ ಒಂದು ಯತ್ನವಾಗಿದೆ ಅದು ವಾಸ್ತವತೆಗೆ ಹತ್ತಿರವಾಗಿಲ್ಲ ಎಂದಿದ್ದಾರೆ.
ಒಟ್ಟು 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ಪಕ್ಷ ಟಿಎಂಸಿಯ ಒಟ್ಟು 216 ಶಾಸಕರಿದ್ದು ವಿಪಕ್ಷ ಬಿಜೆಪಿ 75 ಶಾಸಕರನ್ನು ಹೊಂದಿದೆ.