ಆಷಾಢ ಮಾಸದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತರು ಆಗಮಿಸಿದ ಹಿನ್ನೆಲೆ ಒಂದೇ ತಿಂಗಳಿಗೆ ಬರೋಬ್ಬರಿ ಮೂರುವರೆ ಕೋಟಿ ರೂ ಹಣ ಸಂಘ್ರಹವಾಗಿದೆ.
ಹೌದು, ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಇತಿಹಾಸದಲ್ಲಿಯೇ ಒಂದೇ ತಿಂಗಳಲ್ಲಿ ಅತಿ ಹೆಚ್ಚು ಆದಾಯ ಬಂದಿದೆ. 2ಕೋಟಿ 33 ಲಕ್ಷಣ 51 ಸಾವಿರದ 270 ರೂಹಣ ಕಾಣಿಕೆ ಹುಂಡಿಗೆ ಸಂದಾಯವಾಗಿದೆ. ಇದರ ಜೊತೆಗೆ 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂದಾಯವಾಗಿದೆ. 1ಕೋಟಿ 3 ಲಕ್ಷಣ 69 ಸಾವಿರದ 270 ರೂ ಪ್ರವೇಶದ ಟಿಕೆಟ್ ನಿಂದ ಆದಾಯ ಬಂದಿದೆ.

ಸುಮಾರು 250 ಮಂದಿ ದಿನವಿಡೀ ಹಣ ಎಣಿಕೆ ಕಾರ್ಯ ಮುಗಿಸಿದ್ದು, ಈ ಬಾರಿ ದಾಖಲೆಯ ಹಣ ಸಂದಾಯವಾಗಿದೆ. ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಜೆ.ಕೃಷ್ಣ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ಮುಗಿಸಿ, ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಹಣ ಜಮಾ ಮಾಡಲಾಗಿದೆ.